ಸಕಲೇಶಪುರ ತಾಲೂಕು ಹಾನುಬಾಳು ಸಮೀಪ ಹುರುಡಿ ಗ್ರಾಮದ ಬಳಿ ಪೆಟ್ರೋಲ್ ಪೈಪ್‌ಲೈನ್ ತುಂಡರಿಸಿ ಕಳ್ಳತನಕ್ಕೆ ಯತ್ನಿಸಿರುವ ಕಿಡಿಗೇಡಿಗಳು
ಸಕಲೇಶಪುರ: ಕಿಡಿಗೇಡಿಗಳ ಗುಂಪೊಂದು ಪೆಟ್ರೋಲ್ ಪೈಪ್ ಲೈನ್ ತುಂಡರಿಸಿ, ಪೆಟ್ರೋಲಿಯಂ ಉತ್ಪನ್ನಗಳನ್ನು ಕಳ್ಳತನ ಮಾಡಲು ಯತ್ನಿಸಿ ವಿಫಲವಾಗಿರುವ ಘಟನೆ ತಾಲೂಕಿನ ಹಾನುಬಾಳು ಹೋಬಳಿ ಹುರುಡಿ ಸಮೀಪ ನಡೆದಿದೆ.
ಶುಕ್ರವಾರ ತಡ ರಾತ್ರಿ ಹುರುಡಿ ಗ್ರಾಮದ ಸಮೀಪ ಗದ್ದೆಗಳಿರುವ ಜಾಗದಲ್ಲಿ ಹಾದು ಹೋಗಿರುವ ಪೆಟ್ರೋನೆಟ್ ಎಂ.ಎಚ್.ಬಿ ಲಿಮಿಟೆಡ್‌ನ ಪೈಪ್‌ಲೈನ್ ಅನ್ನು ಹಿಟಾಚಿ ಯಂತ್ರದಿಂದ ಬಗೆದು ಪೆಟ್ರೋಲ್-ಡಿಸೇಲ್ ಕಳ್ಳತನ ಮಾಡಲು ವಾಲ್ ಫಿಟ್ ಮಾಡಿ, ಪೈಪ್ ಅಳವಡಿಸಿ ಡಿಲ್ ಮಾಡಲು ಹೋದಾಗ, ಎಂ.ಎಚ್.ಬಿ ಕಂಪನಿಯ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ನೆರಿಯ ಸ್ಟೇಷನ್ನ ಸಿಗ್ನಲ್‌ನಲ್ಲಿ ಪೆಟ್ರೋಲ್ ಪೈಪ್‌ಲೈನ್ ಗೆ ಡ್ರಿಲ್ ಮಾಡುತ್ತಿರುವುದು ಸೆನ್ಸಾರ್ ಮುಖಾಂತರ ಗೊತ್ತಾಗಿದೆ. ತಕ್ಷಣ ಕಂಪನಿಯ ಸಿಬ್ಬಂದಿಗಳನ್ನು ಸ್ಥಳಕ್ಕೆ ಪೊಲೀಸರ ಜೊತೆ ಕಳುಹಿಸಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರನ್ನು ನೋಡಿದ ಹಿಟಾಚಿಯನ್ನು ಕಿಡಿಗೇಡಿಗಳು, ಬಿಟ್ಟು ಪರಾರಿಯಾಗಿದ್ದಾರೆ.
ಹಿಟಾಚಿ ವಶ ಪಡೆದು ತನಿಖೆ: ಗ್ರಾಮಾಂತರ ಠಾಣೆಯ ಪೊಲೀಸರು ಹಿಟಾಚಿ ವಶ ಪಡೆದು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಎಂ.ಎಚ್.ಬಿ ಕಂಪನಿಯ ಸ್ಥಳೀಯ ಉಸ್ತುವಾರಿ ಮಹೇಶ್ ಹೆಗ್ಡೆ ಮತ್ತು ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪೆಟ್ರೋಲ್ ಪೈಪ್‌ಲೈನ್ ತುಂಡರಿಸಿ ಪೆಟ್ರೋಲಿಯಂ ಉತ್ಪನ್ನಗಳನ್ನು ಕಳ್ಳತನ ಮಾಡುವುದು ಹುರುಡಿ ಸುತ್ತಮುತ್ತ ಸಾಮಾನ್ಯವಾಗಿತ್ತು. ಕಳೆದ ಎರಡು ವರ್ಷಗಳ ಹಿಂದೆ ಈ ಪ್ರಕರಣದ ಹಿನ್ನೆಲೆಯಲ್ಲಿ ಕೆಲವರನ್ನು ಬಂಧಿಸಲಾಗಿತ್ತು. ಪ್ರಸ್ತುತ ಈ ದಂಧೆಯಲ್ಲಿ ಸ್ಥಳೀಯ ಪ್ರಭಾವಿಗಳು ಭಾಗಿಯಾಗಿದ್ದಾರೆ ಎಂದು ಹೇಳಲಾಗುತ್ತಿದ್ದು, ಈ ಕುರಿತು ಸರಿಯಾದ ತನಿಖೆ ನಡೆಯಬೇಕಾಗಿದೆ.
Exit from pluripotency is gated by intracellular redistribution of the bHLH transcription factor Tfe3 cialis super active Lill JR, Wertz IE