ಗಮನಿಸಿ : ಹಾಸನ ನಗರ ಹಾಗೂ ಅರಸೀಕೆರೆಯ ಈ‌ ಕೆಳಕಂಡ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ

0

ಸಾರ್ವಜನಿಕರಲ್ಲಿ ಈ ಮೂಲಕ ಮನವಿ ಮಾಡಿಕೊಳ್ಳುವುದೇನೆಂದರೆ, ಕವಿಪ್ರನಿನಿಯಿಂದ ದಿನಾಂಕ 22.12.2022 ರ ಗುರುವಾರ ದಂದು 66/11ಕೆ.ವಿ ಸಂತೆಪೇಟೆ ಹಾಸನ ವಿ.ವಿ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕೆಲಸವನ್ನು ಹಮ್ಮಿಕೊಂಡಿರುವುದರಿಂದ, ಅಂದು ಬೆಳಗ್ಗೆ 10.00 ಗಂಟೆಯಿಂದ ಸಂಜೆ 06:00 ಗಂಟೆ ಯವರೆಗೆ 66/11ಕೆ.ವಿ ಸಂತೆಪೇಟೆ ಹಾಸನ ವಿ.ವಿ ಕೇಂದ್ರದಿಂದ ವಿದ್ಯುತ್‌ ಸರಬರಾಜಾಗುವ ಸಂತೆಪೇಟೆ ಸರ್ಕಲ್‌, ಗಾಂಧಿಬಜಾರ್, ಶ್ರೀನಗರ, ಎನ್. ಆರ್ ವೃತ್ತ ಸುತ್ತಮುತ್ತ, ಹಾಸನಾಂಬ ವೃತ್ತ, ಹುಣಸಿನಕೆರೆ, ಮೈಕ್ರೋವೇವ್, ಬಿಟ್ಟಿಗೋಡನಹಳ್ಳಿ, ಮೆಡಿಕಲ್ ಕಾಲೇಜು, ಡಿ.ಸಿ ಕಛೇರಿ, ಎಸ್.ಪಿ ಕಛೇರಿ, ಸುವರ್ಣ, ದೇವೆಗೌಡನಗರ, ಹನುಮಂತಪರ, ಅಗಿಲೆ, ಎರೆದರೆ ಕಾವಲು, ಚನ್ನಪಟ್ಟಣ, ಹೊಸಕೊಪ್ಪಲು, ದೇವಮ್ಮ ಬಡಾವಣೆ, ಮಾರ್ಗನಹಳ್ಳಿ, ತಣ್ಣೀರುಹಳ್ಳ, ವಿಜಯನಗರ, ಬೈಲಹಳ್ಳಿ, ಹೊಯ್ಸಳ ರೆಸಾರ್ಟ್ ಸುತ್ತ ಮುತ್ತ ವಾಟರ್ ಸಫೈ, ಕೆ.ಹೆಚ್.ಬಿ. ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್‌ ಸ್ಥಾವರಗಳಿಗೆ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಸಹಕರಿಸಲು ಕೋರಲಾಗಿದೆ.,

ವಿದ್ಯುತ್‌ ವ್ಯತ್ಯಯ ಅರಸೀಕೆರೆ : ಸೆಸ್ಕಾಂ ಉಪ-ವಿಭಾಗ ವ್ಯಾಪ್ತಿಯ

ಗೀಜಿಹಳ್ಳಿಯ 220 ಕೆ.ವಿ ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿ ಡಿ. 22 ರ ಗುರುವಾರದಂದು ಮೂರನೇ ತೈ ಮಾಸಿಕ ನಿರ್ವಹಣಾ ಕಾರ್ಯವನ್ನು ಹಮ್ಮಿಕೊಂಡಿದ್ದು, ಸದರಿ જે ದಿನದಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 4 ಗಂಟೆವರೆಗೆ, ಎಫ್-6 ಕೆಎಂಎಫ್ ಡೇರಿ, ಎಫ್-7 ಮುರುಂಡಿ ಎಫ್-8 તಯಳವಾರೆ ನಿರಂತರ ವಿದ್ಯುತ್ ಯೋಜನೆ 11ಕೆವಿ ಮಾರ್ಗಗಳಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ. ಎಫ್-3 ವಿಠಲಾ ಪುರ, ಎಫ್-4, ಕೋಡಿಮಠ ಮಾರ್ಗಗಳಲ್ಲಿ ಬರುವ ಗ್ರಾಹಕರಿಗೆ ಬೆಳಗ್ಗೆ 4 ರಿಂದ 11 ಗಂಟೆಯವರೆಗೆ 3 ಫೇಸ್ ವಿದ್ಯುತ್‌ ಸರಬರಾಜು ಮಾಡಲಾಗುವುದು. ಗ್ರಾಹಕರು ಮತ್ತು ಸಾರ್ವಜನಿಕರು ಸಹಕರಿಸಬೇಕೆಂದು ಸೆಸ್ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here