ಸಾರ್ವಜನಿಕರಲ್ಲಿ ಈ ಮೂಲಕ ಮನವಿ ಮಾಡಿಕೊಳ್ಳುವುದೇನೆಂದರೆ, ಕವಿಪ್ರನಿನಿಯಿಂದ ದಿನಾಂಕ 26.08.2021 ಸಂತೇಪೇಟೆ ಹಾಸನ ಡಿ.ವಿ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕೆಲಸವನ್ನು ಹಮ್ಮಿಕೊಂಡಿರುವುದರಿಂದ, ಸದರಿ ದಿನಾಂಕದಂದು ಹಾಸನ: ವಿವಿ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ಹುಣಸಿನಕೆರೆ, ಸಂತೆಪೇಟೆ, ಚನ್ನಪಟ್ಟಣ , ಎನ್. ಆರ್. ವೃತ್ತ ಸುತ್ತಮುತ್ತ, ಬೈಲಹಳ್ಳಿ, ಕೆಹೆಚ್ ಬಿ, ಹನುಮಂತಪುರ, ಹೊಯ್ಸಳ ರೆಸಾರ್ಟ್, ವಲ್ಲಬಾಯ್ ರೋಡ್, ಹೊಸಲೈನ್ ರೋಡ್, ಹಾಸನಾಂಬ ವೃತ್ತ, ಮೈಕ್ರೋವೇವ್, ವಿಜಯನಗರ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಸ್ಥಾವರಗಳಿಗೆ ಬೆಳಗ್ಗೆ 10.00 ಗಂಟೆಯಿಂದ ಸಂಜೆ 05:00 ಗಂಟೆ ಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಸಹಕರಿಸಲು ಕೋರಲಾಗಿದೆ.