ಹಾಸನ : ಕರ್ನಾಟಕ ವಿದ್ಯುತ್ ಪ್ರಸರಣ ನಿಗದಮ ನಿಯಮಿತದ ಟಿ.ಎಲ್ ಮತ್ತು ಎಸ್.ಎಸ್ ವಿಭಾಗದ ವತಿಯಿಂದ ಸೆ.27 ರಂದು 66/11ಕೆ.ವಿ ರಾಮೇಶ್ವರನಗರ ವಿ.ವಿ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕೆಲಸವನ್ನು ಹಮ್ಮಿಕೊಂಡಿರುವುದರಿಂದ, ರಾಮೇಶ್ವರನಗರ ವಿ.ವಿ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ಕೆ.ಆರ್ ಪುರಂ, ಉದಯಗಿರಿ, ರಿಂಗ್‍ರೋಡ್, ಭುವನಹಳ್ಳಿ, ಸತ್ಯಮಂಗಲ, ಶಂಕರಿಪುರಂ, ದೊಡ್ಡಪುರ ಮತ್ತು ಸುತ್ತಮುತ್ತಲ ವಿದ್ಯುತ್ ಸ್ಥಾವರಗಳಿಗೆ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಹಾಗೂ ಹಾಸನದ 220 ಕೆ.ವಿ ಸ್ವೀಕರಣಾ ಕೇಂದ್ರದಲ್ಲಿ ಶಕ್ತಿ ಪರಿವರ್ತಕದ ತುರ್ತು ನಿರ್ವಹಣೆಯನ್ನು ಹಮ್ಮಿಕೊಂಡಿರುವುದರಿಂದ ಸಕಲೇಶಪುರ, ಆಲೂರು, ಹಾಸನ, ಅರಕಲಗೂಡು, ಸೋಮವಾರಪೇಟೆ ತಾಲ್ಲೂಕುಗಳಿಗೆ ಹಲವು ಸಂದರ್ಭಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಕವಿಪ್ರನಿನಿ ಟಿ.ಎಲ್ ಮತ್ತು ಎಸ್.ಎಸ್ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.
#powersheduleupdateshassan #cescomhassan #CESCOMUPDATESHASSAN #hassan #hassannews