ಹಾಸನ ಜಿಲ್ಲಾಡಳಿತದ ವತಿಯಿಂದ SDM ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಕೋವಿಡ್ ವಾರ್ ರೂಮ್’ಗೆ ಭೇಟಿ ನೀಡಿ ಅಧಿಕಾರಿಗಳು ಮತ್ತು
ಸಿಬ್ಬಂದಿಯಿಂದ ವಾರ್ ರೂಮ್’ನ ಕಾರ್ಯವೈಖರಿಯ ಬಗ್ಗೆ ಮಾಹಿತಿ ಪಡೆದು ಪರಿಶೀಲಿಸಿ ಕೆಲವೊಂದು ಸಲಹೆ ಸೂಚನೆಗಳನ್ನು ನೀಡಿದ ಹಾಸನ ಲೋಕಸಭಾ ಕ್ಷೇತ್ರದ ಸಂಸದರು ಪ್ರಜ್ವಲ್ ರೇವಣ್ಣ
ನಂತರ ಜಿಲ್ಲಾಡಳಿತದ ಆರಂಭಿಸಿರುವ ಕೋವಿಡ್ ಕೇರ್ ಸೆಂಟರ್’ಗೆ ಭೇಟಿ ನೀಡಿ
ಕೊರೊನಾ ಸೋಂಕಿತರ ಚಿಕಿತ್ಸೆಗೆ ಕೈಗೊಂಡಿರುವ ಕ್ರಮಗಳನ್ನು ಪರಿಶೀಲನೆ ನಡೆಸಿದರು
” ಹಾಸನದಲ್ಲಿ ಮರಣ ಪ್ರಮಾಣ ಕಡಿಮೆಯಾಗಿಲ್ಲ, ಪ್ರತಿದಿನ 10 ರಿಂದ 15 ಜನ ಸಾವನ್ನಪ್ಪುತ್ತಿದ್ದಾರೆ. ಸಾರ್ವಜನಿಕರೆಲ್ಲರಿಗೂ ಕೋವಿಡ್ ಪರೀಕ್ಷೆ ಮಾಡುತ್ತಿಲ್ಲ, ರೋಗ ಲಕ್ಷಣಗಳಿದ್ದವರಿಗೆ ಮಾತ್ರ ಮಾಡಲಾಗುತ್ತಿದೆ ಇದರಿಂದ
ಸೋಂಕು ಹೆಚ್ಚಾಗುವ ಸಾಧ್ಯತೆಯಿದೆ.
ವ್ಯಾಕ್ಸಿನ್ ಡ್ರೈವ್ ಅನ್ನು ಆದ್ಯತೆಯ ಮೇರೆಗೆ ಮಾಡುವುದರ ಬದಲು
ವಾರ್ಡ್ ಮಟ್ಟದಲ್ಲಿ ಜನಸಂಖ್ಯೆಯ ಆದರಾದ ಮೇಲೆ ಮಾಡಿದರೆ ದೊಡ್ಡ ಮಟ್ಟದಲ್ಲಿ ಯಶಸ್ಸು ಸಿಗುತ್ತದೆ ” . – ಪ್ರಜ್ವಲ್ ರೇವಣ್ಣ (ಸಂಸದರು)