ಹಾಸನ / ಬೆಂಗಳೂರು : ದೇವೇಗೌಡರು ಮತ್ತು ಕುಮಾರಸ್ವಾಮಿ ಹಾಗೂ ಅವರ ಕುಟುಂಬದ ವಿರುದ್ಧ ಪದೇ ಪದೆ ಕೆಟ್ಟದಾಗಿ ಪೋಸ್ಟ್ ಮಾಡುತ್ತಿದ್ದ ಪ್ರಶಾಂತ್ ಸಂಬರಗಿ ವಿರುದ್ಧ, ಚುನಾವಣಾ ಆಯುಕ್ತರ ಮೂಲಕ ಸೈಬರ್ ಕ್ರೈಂ ಡಿಸಿಪಿ ಅವರಿಗೆ ಆತನ ಎಲ್ಲಾ ಸಾಮಾಜಿಕ ಜಾಲತಾಣದ ಖಾತೆಗಳನ್ನು ವಶಪಡಿಸಿಕೊಳ್ಳುವಂತೆ ಮತ್ತು ಬೆಂಗಳೂರು ಪೊಲೀಸ್ ಆಯುಕ್ತರಿಗೆ ಆತನ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ವಕೀಲರ ಸಂಘ ದೂರು ಸಲ್ಲಿಸಿತ್ತು
ಈ ಸಮಯದಲ್ಲಿ ರಾಜ್ಯ ವಕೀಲರ ಸಂಘದ ಮಾಜಿ ಅಧ್ಯಕ್ಷರಾದ ಎ.ಪಿ ರಂಗನಾಥ್ ಮತ್ತು ಜೆಡಿಎಸ್ ವಕ್ತಾರರಾದ ಗಂಗಾಧರ ಮೂರ್ತಿ ಸೇರಿದಂತೆ ಹಲವಾರು ವಕೀಲರು ಹಾಜರಿದ್ದರು ಸದ್ಯದಲ್ಲೇ ಪ್ರಶಾಂತ್ ಸಂಬರ್ಗಿ ಬಂಧನ ಸಾಧ್ಯತೆ ಎನ್ನಲಾಗಿದೆ ,
ವಿಷಯ : ʻಎಲ್ಲ ಕಳ್ಳರ ಹೆಸರೂ ಮೋದಿ ಎಂದೇ ಯಾಕಿರುತ್ತದೆ?ʼ ಎಂಬ ಪ್ರಶ್ನೆ ಕೇಳುವ ಮೂಲಕ ವಿವಾದಕ್ಕೊಳಗಾಗಿ ಈಗ ಜೈಲು ಶಿಕ್ಷೆಗೂ ಒಳಗಾಗಿರುವ, ಜತೆ ಸಂಸತ್ ಸದಸ್ಯತ್ವವನ್ನೂ ಕಳೆದುಕೊಂಡಿರುವ ರಾಹುಲ್ ಗಾಂಧಿ ಅವರನ್ನು ಟೀಕಿಸುವ ಭರದಲ್ಲಿ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರ್ಗಿ ದೇವೇಗೌಡರ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದ್ದಾರೆ.,
ಬಿಗ್‌ಬಾಸ್‌ನಲ್ಲೂ ಭಾಗವಹಿಸಿ ಬಂದಿರುವ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರ್ಗಿ ನೇರ ನುಡಿ ಎಂಬ ಹೆಸರಿನಲ್ಲಿ ವಿವಾದಾತ್ಮಕ ಮಾತು ಹಾಗೂ ಅನವಶ್ಯ ಜಾತಿ ವಿಚಾರಗಳಿಗೆ ಮಾತು ತೂರಿಸಿ ಫೇಮಸ್ . ಇವರು ರಾಹುಲ್ ಗಾಂಧಿ ಅವರನ್ನು ಟೀಕಿಸಲು ಹೋಗಿ, ಹಾಸನದ ಮಣ್ಣಿನ ಮಗ , ಭವ್ಯ ಭಾರತ ದೇಶದ ಮಾಜಿ ಪ್ರಧಾನಿ ದೇವೇಗೌಡರ ಹೆಸರನ್ನು ಎಳೆದುತಂದು. ಇದೀಗ ಇದು ದೇವೇಗೌಡರ ಅಭಿಮಾನಿಗಳನ್ನು ಸಿಟ್ಟಿಗೇರುವಂತೆ ಮಾಡಿದೆ.,
ಹಾಗಿದ್ದರೆ ಅಷ್ಟಕ್ಕು ಸಂಬರ್ಗಿ ಹೇಳಿದ್ದೇನು ಫೇಸ್ ಬುಕ್ ಖಾತೆಯಲ್ಲಿ ಎಂಬುದಾದರೆ ?
ʻʻದೇವೇ ಗೌಡ ಕಳ್ಳ ಅನ್ನೋದಕ್ಕೂ,ಗೌಡರು ಅನ್ನೋರೆಲ್ಲ ಕಳ್ಳರೆ ಯಾಕಿರ್ತಾರೆ ಅನ್ನೋದಕ್ಕೂ ವ್ಯತ್ಯಾಸವಿದೆ. ಮೊದಲನೆಯದಕ್ಕೆ ದೇವೇ ಗೌಡ್ರು ಕೇಸ್ ಹಾಕಬೇಕು. ಎರಡನೆಯದಕ್ಕೆ ಅವನ ಮಗನೋ ಮೊಮ್ಮಗನೇ or any ಗೌಡ ಕೇಸು ಹಾಕಬಹುದು. ಸುಮ್ನೆ ಒಂದು ಉದಾಹರಣೆ ಕೊಟ್ಟೆ ಅಷ್ಟೇ ಸೀರಿಯಸ್ ಆಗಿ ತಗೋಬೇಡಿʼʼ ಎಂದು ಸಂಬರ್ಗಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದಾರೆ. ಈ ಪೋಸ್ಟ್ ವಿರುದ್ಧ ದೇವೆಗೌಡರ ಅಭಿಮಾನಿಗಳಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಸಂಬರ್ಗಿ ಕ್ಷಮೆ ಯಾಚಿಸಬೇಕು ಎಂದು ಹೇಳಿದ್ದಾರೆ. ,
ವಿಷಯ ಈಗಾಗಲೇ ಗಂಭೀರವಾಗಿದ್ದು, ಅನವಶ್ಯಕವಾಗಿ ದೇವೇಗೌಡರ ಹೆಸರು ಬಳಸಿಕೊಂಡಿದ್ದು ಜನರನ್ನು ಕೆರಳಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಜನರು ಬೆದರಿಸುವ ರೀತಿಯಲ್ಲಿ ಕಮೆಂಟ್ ವಾರ್ ಗಳು ನಡೆಯುತ್ತಿವೆ , ಇದಕ್ಕೆಲ್ಲ ಪ್ರಶಾಂತ್ ಸಂಬರಗಿಯಂತಹ ವ್ಯಕ್ತಿಗಳಿಂದ ಸಾರ್ವಜನಿಕ ನೆಮ್ಮದಿ ವಾತಾವರಣ ಕೆಡಿಸುವ ಹೇಳಿಕೆಗಳಿಂದ ಉದ್ರೇಕ ಘಟನೆಗೆ ಕಾರಣವಾಗಬಹುದು . , ಜೆಡಿಎಸ್ ಕಾನೂನು ವಿಭಾಗದಿಂದ ಸಂಬರ್ಗಿ ವಿರುದ್ಧ ಪೊಲೀಸರಿಗೆ ದೂರು ನೀಡಿದ ನಂತರದ ಬೆಳವಣಿಗೆಯಲ್ಲಿ
ಇದೀಗ ಪ್ರಶಾಂತ್ ಸಂಬರಗಿ ಅದೇ ಫೇಸ್ ಬುಕ್ ಖಾತೆಯಲ್ಲಿ ಕ್ಷಮೆ ಕೇಳಿದ್ದಾರೆ .,
ಜೆಡಿಎಸ್ ಕಾನೂನು ವಿಭಾಗದಿಂದ ದೂರು ಇಂದು ಬೆಳಿಗ್ಗೆ ನೀಡಿದ್ದು , ದೇವೇಗೌಡರ ಅವಹೇಳನವನ್ನು ಖಂಡಿಸಿರುವ ಜೆಡಿಎಸ್ ಪ್ರಶಾಂತ್ ಸಂಬರ್ಗಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪೊಲೀಸರಿಗೆ ದೂರು ನೀಡಿತ್ತು ., ಜೆಡಿಎಸ್ ಲೀಗಲ್ ಸೆಲ್‌ನಿಂದ ಡಿಸಿಪಿ ಶ್ರೀನಿವಾಸಗೌಡಗೆ ದೂರು ಸಲ್ಲಿಸಲಾಗಿದೆ. ಈ ಪ್ರಕರಣ ಮಾತ್ರವಲ್ಲ, ಸಂಬರ್ಗಿ ಈ ಹಿಂದೆಯೂ ಜೆಡಿಎಸ್ ನಾಯಕರನ್ನು ಅವಹೇಳನ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಪೊಲೀಸರು ಯಾವ ಕ್ರಮ ಕೈಗೊಳ್ಳಲಿದ್ದಾರೆ ಕಾದುನೋಡ ಬೇಕಿದೆ .