ಹಾಸನ ಜಿಲ್ಲೆಯ ಹೊಳೆನರಸೀಪುರದ ಒಗ್ಗರಣೆ ಬೀದಿಯಲ್ಲಿ ವ್ಯಕ್ತಿಯೊಬ್ಬ ಮಂಗಳವಾರ (10May2022) ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಾವಿನ ಸುತ್ತ ಅನುಮಾನದ ಹುಟ್ಟಿಕೊಂಡಿದೆ. ಈತನ ಸಾವಿಗೂ PSI ಹುದ್ದೆಯಲ್ಲಿನ ಅಕ್ರಮ ಪ್ರಕರಣಕ್ಕೂ ಲಿಂಕ್ ಇರುವ ಶಂಕೆ ವ್ಯಕ್ತವಾಗಿದೆ ಎನ್ನಲಾಗಿದೆ
ವಾಸು(36) ಮೃತ ದುರ್ದೈವಿ. ಹೊಳೆನರಸೀಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಡಿ ಗ್ರೂಪ್ ನೌಕರನಾಗಿ ಕೆಲಸ ಮಾಡುತ್ತಿದ್ದ ವಾಸುವನ್ನು ಇತ್ತೀಚೆಗೆ ಕೆಲಸದಿಂದ ವಜಾ ಮಾಡಲಾಗಿತ್ತು. ವಾಸು ಸಹೋದರ ಮನುಕುಮಾರ್ ಪಿಎಸ್‌ಐ ಹುದ್ದೆಗೆ ಆಯ್ಕೆಯಾಗಿದ್ದ. ಪಿಎಸ್‌ಐ ಹುದ್ದೆ ಹಗರಣ ಬಯಲಾಗುತ್ತಿದ್ದಂತೆ ಮನುಕುಮಾರ್‌ನನ್ನು ಇತ್ತೀಚಿಗೆ ಸಿಐಡಿ ಪೊಲೀಸರು ಬಂಧಿಸಿದ್ದರು. ಇದೀಗ ಮಂಗಳವಾರ ರಾತ್ರಿ ಮನುಕುಮಾರ್‌ನ ಅಣ್ಣ ವಾಸು ಮನೆಯಲ್ಲೇ ನೇಣಿಗೆ ಶರಣಾಗಿದ್ದಾರೆ.
ಮಗನ ಸಾವಿನ ನೋವಿನಲ್ಲೇ ಸುದ್ದಿಗಾರರೊಂದಿಗೆ ಮಾತನಾಡಿದ ತಾಯಿ ತಾಯಿ ಶಿವಮ್ಮ, ನನ್ನ ಮಗ ವಾಸು ಆತ್ಮಹತ್ಯೆಗೂ ಮನುಕುಮಾರ್ ಪಿಎಸ್‌ಐ ಆಯ್ಕೆಗೂ ಯಾವುದೇ ಸಂಬಂಧವಿಲ್ಲ. ನನ್ನ ಮಗ ಮನುಕುಮಾರ್ ತುಂಬಾ ಚೆನ್ನಾಗಿ ಓದುತ್ತಿದ್ದ. ಅವನು ಓದಿದ ಕಡೆಯೆಲ್ಲ ಹಲವು ಬಹುಮಾನ ತೆಗೆದುಕೊಂಡಿದ್ದ. ವಾಸು ಆತ್ಮಹತ್ಯೆಗೂ ಮನುಕುಮಾರ್‌ಗೂ ಸಂಬಂಧವಿಲ್ಲ. ನಾನು ಬಡವರು, ಒಂದು ಎಕರೆ ಜಮೀನಿದೆ. ಹೀಗಿರುವಾಗ ಹಣ ಕೊಟ್ಟು ಪಿಎಸ್‌ಐ ಕೆಸಲ ಪಡೆಯಲು ಹೇಗೆ ಸಾಧ್ಯ? ಪಿಎಸ್‌ಐ ಆಗಿ ಆಯ್ಕೆಯಾದ ಬಗ್ಗೆ ತಮ್ಮನನ್ನು ವಾಸು ಸರಿಯಾಗಿ ವಿಚಾರಿಸಿಯೂ ಇರಲಿಲ್ಲ. ಹೀಗಿರುವಾಗ ವಾಸು ಸಾವಿಗೂ, ಮನುಕುಮಾರ್ ಆಯ್ಕೆಗೂ ಸಂಬಂಧವೇನು? ನನ್ನ ಮಗ ಹಣ ಕೊಟ್ಟು ಖಂಡಿತ ಕೆಲಸ ಪಡೆದಿಲ್ಲ. ಆ ಶಕ್ತಿಯೂ ನಮಗಿಲ್ಲ ಎಂದು ಕಣ್ಣೀರಿಟ್ಟರು. ಮಗ ವಾಸು ಮತ್ತು ಸೊಸೆ ನಡುವೆ ಸಣ್ಣಪುಟ್ಟ ಜಗಳಗವಾಗಿತ್ತು. ಆದರೆ ಆತನ ಸಾವಿಗೆ ಕಾರಣ ಏನೆಂದು ತಿಳಿದಿಲ್ಲ ಎಂದರು. sadnewshassan