ಪ್ರಿಯ ಹಾಸನಿಗರೇ ಮರೆಯಬೇಡಿ , ಮರೆತು ನಿರಾಶರಾಗಬೇಡಿ ! , ಇದೇ ಜ.31 ಭಾನುವಾರ ನಿಮ್ಮ ಸ್ಥಳೀಯ ಆರೋಗ್ಯ ಕೇಂದ್ರಗಳಲ್ಲಿ : 5 ವರ್ಷದೊಳಗಿನ ನಿಮ್ಮ ಮಗುವಿಗೂ ಪೋಲಿಯೊ ಲಸಿಕೆ ಹಾಕಿಸಿ 💧

0

ಹಾಸನ ಜ.28 : (ಹಾಸನ್_ನ್ಯೂಸ್ !, 5 ವರ್ಷದೊಳಗಿನ  ಪ್ರತಿಯೊಂದು ಮಗುವಿಗೂ   ಕಡ್ಡಾಯವಾಗಿ ಪಲ್ಸ್ ಪೋಲಿಯೋ ಲಸಿಕೆಯನ್ನು ಹಾಕಿಸುವಂತೆ  ತಹಶೀಲ್ದಾರ್ ಶಿವಶಂಕರಪ್ಪ ತಿಳಿಸಿದ್ದಾರೆ. 


    ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿಂದು  ಪಲ್ಸ್ ಪೋಲಿಯೋ ಚಾಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ  ಅವರು ಪಲ್ಸ್ ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ರಮವು ಜ. 31 ರಂದು ನಡೆಯುತ್ತಿದ್ದು ಯಾವುದೇ ಮಗು ಲಸಿಕೆಯಿಂದ ವಂಚಿತವಾಗದಂತೆ  ಲಸಿಕೆ ಹಾಕುವ ಸಂಪೂರ್ಣ ಜವಾಬ್ದಾರಿ ಹಾಗೂ ಕರ್ತವ್ಯ ನಮ್ಮದಾಗಿರುತ್ತದೆ ಎಂದರು.


ತಾಲ್ಲೂಕು ಆರೋಗ್ಯಾಧಿಕಾರಿ ಡಾ|| ವಿಜಯ್ ಅವರು ಮಾತನಾಡಿ 31ರಂದು ಅಂಗನವಾಡಿ ಹಾಗೂ ಶಾಲೆಗಳಲ್ಲಿ ಪಲ್ಸ್ ಪೋಲಿಯೋ ಲಸಿಕೆ ಹಾಕುವ ಕೇಂದ್ರಗಳನ್ನು ತೆರೆದು ಲಸಿಕೆ ಹಾಕಲಾಗುವುದು  ಎಂದು ತಿಳಿಸಿದರು.


   5 ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯವಾಗಿ ಪಲ್ಸ್ ಪೋಲಿಯೋ ಲಸಿಕೆಯನ್ನು ಹಾಕಲಾಗುತ್ತದೆ  ಬಸ್‍ಗಳು ಹಾಗೂ ರೈಲ್ವೆ ನಿಲ್ದಾಣಗಳಲ್ಲಿ   ಸಂಚರಿಸುವ ಮಕ್ಕಳಿಗೆ ಲಸಿಕೆ ಹಾಕಲು ನಿಲ್ದಾಣಗಳಲ್ಲಿ ಲಸಿಕಾ ಕೇಂದ್ರ ತೆಗೆಯಲಾಗುದು ಎಂದರು.
     ರೆಡ್ ಕ್ರಾಸ್, ಲಯನ್ಸ್ ಕ್ಲಬ್ ಮತ್ತಿತರ ಸಂಸ್ಥೆಗಳು  ಈ ಕಾರ್ಯಕ್ರಮದಲ್ಲಿ ಕೈ ಜೋಡಿಸಲಿವರು.     ಹಾಸನ ತಾಲೂಕಿನಲ್ಲಿ 30262 ಮಕ್ಕಳಿಗೆ ಲಸಿಕೆಯನ್ನು ಹಾಕಲಾಗುತ್ತಿದ್ದು     ಕಾರ್ಮಿಕ ಇಲಾಖೆ ಹಾಗೂ ತೋಟಗಾರಿಕಾ ಇಲಾಖೆ ವತಿಯಿಂದ ಫಾರ್ಮಹೌಸ್ ಗಳಲ್ಲಿ ಹಾಗೂ ಕ್ವಾರೆಗಳಲ್ಲಿ ಕೆಲಸ ಮಾಡುವ ಕುಟುಂಬಗಳಿಗೆ  ಮಾಹಿತಿ ನೀಡಿ ಮಕ್ಕಳಿಗೆ ಲಸಿಕೆ ಹಾಕುವ ವ್ಯವಸ್ಥೆಯನ್ನು ಮಾಡಬೇಕು ಎಂದು ತಿಳಿಸಿದರು.


ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

#pulsepoliohassan

LEAVE A REPLY

Please enter your comment!
Please enter your name here