ಹಾಸನ: ಜಿಲ್ಲೆಯಲ್ಲಿ ಕಳೆದ ಎರಡು ಮೂರು ದಿನಗಳಿಂದ ಭರ್ಜರಿ ಮಳೆಯಾಗುತ್ತಿದೆ ಇಂದು ಸಹ ನಗರ ಸೇರಿದಂತೆ ಕೆಲ ತಾಲೂಕುಗಳಲ್ಲಿ ಗುಡುಗು ಗಾಳಿ ಸಹಿತ ಬಾರಿ ಮಳೆಯಾಗಿದೆ.

ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಭರದ ಛಾಯೆ ಆವರಿಸಿತ್ತು ಇದರಿಂದ ರೈತರು ತೀವ್ರ ಸಂಕಷ್ಟ ಹೆದರಿಸುತ್ತಿದ್ದರು ಆದರೆ ಹೆಂಗಾರಿನಲ್ಲಿ ಉತ್ತಮ ಮಳೆಯಾಗುವ ಸೂಚನೆ ಸಿಕ್ಕಿರುವುದರಿಂದ ಅನ್ನದಾತ ನಿಟ್ಟಿಸಿರು ಬಿಟ್ಟಿದ್ದಾನೆ.

ಹಾಸನಂಬ ದೇವಿ ದರ್ಶನದ ಹಿನ್ನೆಲೆಯಲ್ಲಿ ಮಳೆ ಆಗುತ್ತಿರುವುದು ಮಭ ಸೂಚನೆ ಎಂಬ ಮಾತುಗಳು ಕೂಡ ಕೇಳಿ ಬರತೊಡಗಿದೆ ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿತ್ತು.

ಇಂದು ಭಾರಿ ಗಾಳಿ ಹಾಗೂ ಗುಡುಗಿನಿಂದ ಜಿಲ್ಲೆಯ
ಬೆಳೆಗಳನ್ನ ಕಟಾವು ಮಾಡಲು ರೈತರು ಆಣಿಯಾಗಿದ್ದರು ಈ ಮಳೆಯಿಂದ ಜೋಳ ಬೆಳೆದ ರೈತರಿಗೆ ತೀವ್ರ ಸಂಕಷ್ಟ ಎದುರಾಗಿದೆ.

ಬರಪೀಡಿತ ಎನ್ನಲೆಯಲ್ಲಿ ಇಂದು ಬಿಜೆಪಿಯ
ಹಿರಿಯ ನಾಯಕ ಹಾಗೂ ಸಂಸದ ಡಿ.ವಿ.ಸದಾನಂದ ಗೌಡ ನೇತೃತ್ವದ ತಂಡ ಜಿಲ್ಲೆ ಹಲವು ಭಾಗಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಮುಂಗಾರಿನಲ್ಲಿ ಉತ್ತಮ ಮಳೆಯಾಗದ ಹಿನ್ನೆಲೆಯಲ್ಲಿ ರೈತರು ಸಹ ಬೆಳೆ ಕೈ ಸಿಗದ ತೀವ್ರ ಸಂಕಷ್ಟ ಎದುರಾಗಿದ್ದರು ಹಿಂಗಾರು ಕೂಡ ಇದೇ ಕೆಲವು ಭಾಗದಲ್ಲಿ ಉತ್ತಮ ಮಳೆಯಾಗಿದೆ. ಇದರಿಂದ ಕೆಲವು ಕೆರೆಕಟ್ಟೆಗಳಿಗೆ ನೀರಾಗಿದ್ದು ಜಾನುವಾರುಗಳಿಗೆ ಮೇವು ರೀತಿ ಆಗುತ್ತದೆ ಎಂಬ ಅನುಮಾನದಲ್ಲಿದ್ದ ರೈತರಿಗೆ ವರುಣನ ಕೃಪೆ ಅನುಕೂಲವಾಗಲಿದೆ ಆದರೆ ಈಗಾಗಲೇ ಜೋಳ ಸೇರಿದಂತೆ ಎಲ್ಲ ತೋರಿದ್ದು ಅನ್ನದಾತ ಸ್ವಲ್ಪ ನಿಟ್ಟಿಸಿರು ಬಿಟ್ಟಿದ್ದಾರೆ.

ಹಾಸನಾಂಬೆ ಭಕ್ತರ ಪರದಾಟ
ಹಾಸನಂಬ ದೇವಾಲಯಕ್ಕೆ ಇಂದು ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು ಆದರೆ ಭಾರಿ ಮಳೆಯಾಗಿದ್ದರಿಂದ ಭಕ್ತರಿಗೆ ತೀವ್ರ ತೊಂದರೆ ಉಂಟಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.