ಸೂಪರ್ ಓವರ್ನಲ್ಲಿ ಮುಂಬೈ ಪರ ಹಾರ್ದಿಕ್ ಪಾಂಡ್ಯ ಹಾಗೂ ಪೊಲಾರ್ಡ್ ಬ್ಯಾಟ್ ಬೀಸಿದರು. ಸೈನಿಯ ಮೊದಲ ಎಸೆತದಲ್ಲಿ ಪೊಲಾರ್ಡ್ ಸಿಂಗಲ್ ರನ್ ತೆಗೆದರು. 2ನೇ ಎಸೆತದಲ್ಲೂ ಒಂದು ರನ್ ಮಾತ್ರ. 3ನೇ ಎಸೆತದಲ್ಲಿ ಯಾವುದೇ ರನ್ ಇಲ್ಲ. 4ನೇ ಎಸೆತದಲ್ಲಿ ಬೌಂಡರಿ. 5ನೇ ಬಾಲ್ನಲ್ಲಿ ಪೊಲಾರ್ಡ್ ಔಟ್. ಕೊನೆಯ ಎಸೆತದಲ್ಲಿ ಒಂದು ರನ್. ಸೈನಿ ಮಾರಕ ದಾಳಿ ಮುಂದೆ ರನ್ಗಾಗಿ ಪರದಾಡಿದ ಮುಂಬೈ ಬ್ಯಾಟ್ಸ್ಮನ್ಗಳು.
ಆರ್ಸಿಬಿಗೆ ಗೆಲ್ಲಲು 6 ಎಸೆತಗಳಲ್ಲಿ 8 ರನ್ಗಳ ಅವಶ್ಯಕತೆ. ಮುಂಬೈ ಪರ ಜಸ್ಪ್ರೀತ್ ಬುಮ್ರಾ ಬೌಲಿಂಗ್. ಬೆಂಗಳೂರು ಪರ ಕೊಹ್ಲಿ ಡಿವಿಲಿಯರ್ಸ್ ಬ್ಯಾಟಿಂಗ್. ಮೊದಲ ಎಸೆತದಲ್ಲಿ 1 ರನ್. ಎರಡನೇ ಬಾಲ್ನಲ್ಲಿ ಕೊಹ್ಲಿ ಬ್ಯಾಟ್ನಿಂದ 1 ರನ್. 3ನೇ ಎಸೆತದಲ್ಲಿ ಯಾವುದೇ ರನ್ ಇಲ್ಲ. 4ನೇ ಬಾಲ್ನಲ್ಲಿ ಎಬಿಡಿ ಬ್ಯಾಟ್ನಿಂದ ಸೂಪರ್ ಫೋರ್. 5ನೇ ಎಸೆತದಲ್ಲಿ 1 ರನ್ (ಪಂದ್ಯ ಟೈ). ಕೊನೆಯ ಎಸೆತದಲ್ಲಿ ಒಂದು ರನ್ ಅವಶ್ಯಕತೆ ಇದ್ದಾಗ ಬೌಂಡರಿ ಬಾರಿಸಿ ಕೊಹ್ಲಿ ಆರ್ಸಿಬಿ ಗೆಲುವು ತಂದುಕೊಟ್ಟರು.