ಸರಕಾರಿ ಶಾಲೆಗೆ ಸೌಕರ್ಯ ಕಲ್ಪಿಸಿದರೇ ವಿದ್ಯಾರ್ಥಿಗಳು ರ್‍ಯಾಂಕ್ ಬರ್‍ತಾರೆ

0

ವಿಧ್ಯೆ ಒಂದು ಮಾರಾಟದ ಕೇಂದ್ರವಾಗಿದೆ: ಹೆಚ್.ಡಿ. ರೇವಣ್ಣ ಬೇಸರ

ಹಾಸನ: ಸರಕಾರಿ ಶಾಲೆಗೆ ಅಗತ್ಯ ಸೌಲಭ್ಯ ಕಲ್ಪಿಸಿದರೇ ಇಲ್ಲಿನ ವಿದ್ಯಾರ್ಥಿಗಳು ರ್‍ಯಾಂಕ್ ಬರುವುದರಲ್ಲಿ ಯಾವ ಸಂಶಯವಿಲ್ಲ. ಇನ್ನು ವಿಧ್ಯೆ ಎಂಬುದು ಮಾರಾಟದ ಕೇಂದ್ರವಾಗಿದೆ ಎಂದು ನೊಂದು ಹೇಳುತ್ತಿರುವುದಾಗಿ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಬೇಸರವ್ಯಕ್ತಪಡಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ದೇಶಕ್ಕೆ ಸ್ವಾತಂತ್ರ್ಯ ಬಂದು ೭೫ ವರ್ಷವಾದರು ರಾಜ್ಯದಲ್ಲಿ ಬಡವರ ಮಕ್ಕಳಿಗೆ ಶಿಕ್ಷಣ ಕೊಡಲು ಆಗುತ್ತಿಲ್ಲ. ಪ್ರಾಥಮಿಕ ಶಿಕ್ಷಣವಂತು ಕುಸಿದು ಹೋಗಿದೆ. ಶಾಲಾ-ಕಾಲೇಜುಗಳಿಗೆ ಮೂಲಭೂತ ಸೌಕರ್ಯಗಳ ಇಲ್ಲ. ಟೀಚರ್‍ಸ್ ಇಲ್ಲ, ಲ್ಯಾಬ್, ಡೆಸ್ಕ್.ಗಳಿಲ್ಲ. ಹೆಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದಲ್ಲಿ ೧೦೦೦ ಪಿ.ಯು. ಕಾಲೇಜು. ೫೦ ಪ್ರಥಮ ದರ್ಜೆ ಕಾಲೇಜು ಮಂಜೂರಾತಿ ಮಾಡಿಸಿದ್ದೆನು. ಹಾಸನ ಡೈರಿಯಿಂದ ಸುಮಾರು ೨.೩೦ ಕೋಟಿ ವೆಚ್ಚದಲ್ಲಿ ಶಾಲೆ ಕಾಲೇಜುಗಳಿಗೆ ಕಂಪೂಟರ್, ಡೆಸ್ಕ್ ಕೊಡಿಸಲಾಗಿತ್ತು. ಸರಕಾರಿ ಶಾಲೆಯಲ್ಲಿ ಸರಿಯಾಗಿ ಶಿಕ್ಷಣ ಕೊಟ್ಟರೇ ವಿದ್ಯಾರ್ಥಿಗಳು ರ್‍ಯಾಂಕ್ ಬರುತ್ತಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ಹೊಸ ಪಾರ್ಲಿಮೆಂಟ್ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ. ಜಿಲ್ಲಾಡಳಿತ ಕಾರ್ಖಾನೆಗಳ ಸಿ.ಎಸ್.ಆರ್. ಫಂಡ್ ಜಾಸ್ತಿ ಮಾಡಲಿ. ಸುರೇಶ್ ಕುಮಾರ್ ಬೂರಿ ಬುಡುವ ಸುಳ್ಳು ಹೇಳುವ ಶಿಕ್ಷಣ ಸಚಿವ ಎಂದು ಕಿಡಿಕಾರಿದರು.

ಮೊಸಳೆ ಹೊಸಹಳ್ಳಿಯಲ್ಲಿರುವ ಶಾಲೆಯನ್ನು ದತ್ತು ಪಡೆದು ಶಾಲಾ ಮಕ್ಕಳಿಗೆ ಯೂನಿಫಾರಂ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತೆನೆ. ರಾಜ್ಯ ಸರ್ಕಾರವು ಶಿಕ್ಷಣ ಇಲಾಖೆಗೆ ೫ ಸಾವಿರ ಕೋಟಿ ಹಣ ಕೊಡಬೇಕು. ಉಪನ್ಯಾಸಕರು, ಶಿಕ್ಷಕರ ಕೊರತೆ ಇದ್ದು, ಸರ್ಕಾರವು ಕೂಡಲೇ ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು. ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ೨ ವರ್ಷ ಅಧಿಕಾರವಿದ್ದು, ಈ ಅವಧಿಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಮಾಡಿಕೊಂಡು ಹೊಗಲು ಸಿದ್ದರಿದ್ದಾರೆ ಎಂದು ವ್ಯಂಗ್ಯವಾಡಿದರು. ಜಿಲ್ಲಾ ಪಂಚಾಯತಿ ತಾಲ್ಲೂಕು ಪಂಚಾಯತಿ ಮಿಸಲಾತಿ ನಿಗಧಿ ಆಗಿದೆ. ಆದರೇ ಸರ್ಕಾರ ನಮ್ಮ ಕೈಯಲಿಲ್ಲ ಎಲ್ಲಾ ಅವರೇ ಮಿಸಲಾತಿ ನಿಗದಿ ಮಾಡಿದ್ದಾರೆ. ಹೈಕೋರ್ಟ್ ಎಚ್ಚರಿಕೆ ನೀಡಿದ ಮೇಲೆ ಜಿಲ್ಲಾ ಪಂಚಾಯತಿ.ತಾಲ್ಲೂಕು ಪಂಚಾಯತಿ ಮಿಸಲಾತಿ ನಿಗದಿ ಮಾಡಿದ್ದಾರೆ. ಅರಸೀಕೆರೆ ಜಿ.ಪಂ ಕ್ಷೇತ್ರಕ್ಕೆ ಒಂದು ಸಾಮಾನ್ಯ ವರ್ಗಕ್ಕೆ ಮಾಡಿಲ್ಲ. ಚುನಾವಣೆ ಯಾವತ್ತಾದರೂ ಮಾಡಿದರೇ ನಾವು ಸಿದ್ಧರಿದ್ದೇವೆ. ನನ್ನ ಪತ್ನಿ ಭವಾನಿ ಜಿ.ಪಂ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ. ಕಾರ್ಯಕರ್ತರು ಏನು ಹೇಳುತ್ತಾರೆ ಅದಕ್ಕೆ ನಾನು ಬದ್ಧ ಎಂದು ಹೇಳಿದರು.

LEAVE A REPLY

Please enter your comment!
Please enter your name here