ಅಧಿಕಾರ ಇರುವ ತನಕ ಅಭಿವೃದ್ಧಿ ಮಾಡುತ್ತೇನೆ ಶಾಸಕ ಕೆ ಎಂ ಶಿವಲಿಂಗೇಗೌಡ

0

ಅರಸೀಕೆರೆ ಕ್ಷೇತ್ರದ ಜನರಿಗೆ ಹೇಮಾವತಿ ನದಿ ಮೂಲದಿಂದ ಶುದ್ಧ ಕುಡಿಯುವ ನೀರನ್ನು ಅರಸೀಕೆರೆ ತಾಲ್ಲೂಕಿನ ಪ್ರತಿಯೊಂದು ಹಳ್ಳಿಗೂ ಬಹು ಗ್ರಾಮ ಕುಡಿಯುವ ನೀರು ಯೋಜನೆಯಡಿ ಕುಡಿಯುವ ನೀರು ಒದಗಿಸುವ ಕಾರ್ಯ ಮಾಡುವ ಮೂಲಕ ಬಹು ದಿನಗಳ ಬೇಡಿಕೆಯನ್ನು ನೆರವೇರಿಸಿದ್ದೇನೆ.
ತಾಲ್ಲೂಕಿನ ಕಣಕಟ್ಟೆ, ಕಲ್ಗುಂಡಿ,ನರಸೀಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ವತಿಯಿಂದ ಜಲಜೀವನ್ ಮಿಷನ್ ಅಡಿ ಮನೆ ಮನೆಗೆ ಗಂಗೆ ಯೋಜನೆಯಡಿ ಪ್ರತಿ ಮನೆಗೂ ನಳ ನೀರು ಒದಗಿಸಲು ನಲ್ಲಿ ಅಳವಡಿಸುವ ಕಾಮಗಾರಿಗೆ ನರಸೀಪುರದಲ್ಲಿ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಹೇಮಾವತಿ ನದಿ ಮೂಲದಿಂದ ತಾಲ್ಲೂಕಿನ ಎಲ್ಲಾ ಹಳ್ಳಿಗಳಿಗೆ ಕುಡಿಯುವ ನೀರು ತಂದಿದ್ದು,ಮನೆ ಮನೆಗಳಲ್ಲಿ ಅಳವಡಿಸಲು ಸುಮಾರು 200 ಕೋಟಿ ರೂ ಅನುಧಾನ ಮಂಜೂರಾಗಿದೆ ಈ ಯೋಜನೆಯಲ್ಲಿ ಸುಮಾರು 450 ಓವರ್ ಹೆಡ್ ಟ್ಯಾಂಕ್ಗಳನ್ನು ನಿರ್ಮಾಣ ಮಾಡಿ ನಲ್ಲಿ ಮುಖಾಂತರ ನೀರನ್ನು ಮನೆ ಮನೆಗೆ ಸರಬರಾಜು ಮಾಡಲಾಗುವುದು ಎಂದರು.
ಇತ್ತೀಚೆಗೆ ಕೆಲವು ರಾಜಕೀಯ ಬದಲಾವಣೆಗಳನ್ನು ಜನತೆ ಸೂಕ್ಷ್ಮವಾಗಿ ಗಮಣಿಸುತ್ತಿದ್ದಾರೆ ಕೇವಲ ಹಣ ಮುಖ್ಯ ಎನ್ನುವವರಿಗೆ ಮುಂದಿನ ದಿನಗಳಲ್ಲಿ ಜನತೆ ತಕ್ಕ ಪಾಠ ಕಳಿಸುತ್ತಾರೆ ,ನನ್ನದು ಅಭಿವೃದ್ಧಿ ಪರ ನಾನು ಅಧಿಕಾರದಲ್ಲಿರುವವರೆಗೂ ಕ್ಷೇತ್ರದ ಅಭಿವೃದ್ಧಿ ಮಾಡುತ್ತೇನೆ ಎಂದರು

ಈ ಸಂದರ್ಭದಲ್ಲಿ ನರಸೀಪುರ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಸುಧಾರಾಣಿ ಸೋಮಣ್ಣ, ಉಪಾಧ್ಯಕ್ಷೆ ಗಾಯತ್ರಮ್ಮ ಕುಮಾರ್,ಸದಸ್ಯರಾದ ದುಬ್ಬರಂಗಪ್ಪ,ಶಿವಶಂಕರ್,ಸಿದ್ದಮ್ಮ ,ಹೇಮಾವತಿ,ದಾನಪ್ಪ,ಬಸಣ್ಣ,ಬಸವರಾಜು, ಪಾಂಡುರಂಗಪ್ಪ,ಗಾಯತ್ರಮ್ಮ ಹಾಗೂ ಗ್ರಾಮಸ್ಥರು ಹಾಜರಿದ್ದರು

LEAVE A REPLY

Please enter your comment!
Please enter your name here