ಕೋವಿಡ್ ಮುಂಜಾಗ್ರತಾ ಕ್ರಮಗಳ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಶ್ರವ್ಯ-ದೃಶ್ಯ ಮಾಧ್ಯಮದ ಮೂಲಕ ಬೃಹತ್ LED ಪರದೆ ಹೊಂದಿರುವ ಮೊಬೈಲ್ ವಾಹನಗಳ ಬಳಸಿಕೊಂಡು ಹಾಸನದ 180 ಹಳ್ಳಿಗಳಲ್ಲಿ ಜಾಗೃತಿ ಅಭಿಯಾನ !!

0

ಹಾಸನ.ನ.14.(ಹಾಸನ್_ನ್ಯೂಸ್):- ರಾಜ್ಯಾದ್ಯಂತ ಕೋವಿಡ್-19 ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ  ಹಮ್ಮಿಕೊಂಡಿರುವ ವಿಶೇಷ ಜಾಗೃತಿ ಪ್ರಚಾರ ವಾಹನಕ್ಕೆ ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಸಚಿವರಾದ ಜೆ.ಸಿ. ಮಾಧುಸ್ವಾಮಿ ಅವರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿಂದು  ಚಾಲನೆ ನೀಡಿದರು.

ಜಿಲ್ಲೆಯಲ್ಲಿ ಆಯ್ದ ಈ ಕೆಳಗಿನ 180 ಹಳ್ಳಿಗಳಲ್ಲಿ ಕೋವಿಡ್-19 ಕುರಿತು ಅರಿವು ಮೂಡಿಸಲಾಗುತ್ತಿದೆ.

ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಸಾರ್ವಜನಿಕರು ಸಮಾಜಕ್ಕೆ ಬಂದೊದಗಿರುವ ಈ ಪಿಡುಗನ್ನು ತಡೆಗಟ್ಟುವಲ್ಲಿ ಅನುಸರಿಸಬೇಕಾದ ಅಗತ್ಯ ಮುಂಜಾಗ್ರತಾ ಕ್ರಮಗಳ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಶ್ರವ್ಯ-ದೃಶ್ಯ ಮಾಧ್ಯಮದ ಮೂಲಕ ಬೃಹತ್ ಎಲ್.ಇ.ಡಿ ಪರದೆ ಹೊಂದಿರುವ ಮೊಬೈಲ್ ವಾಹನಗಳನ್ನು ಬಳಸಿಕೊಂಡು 15 ಜಿಲ್ಲೆಗಳಲ್ಲಿ ನ. 14 ರಿಂದ ವಿಶೇಷ ಜಾಗೃತಿ ಕಾರ್ಯಕ್ರಮ ಪ್ರಾರಂಭಿಸಲಾಗುತ್ತಿದೆ.

ವಾಹನವು ಜಿಲ್ಲೆಯ 8 ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಲಿದ್ದು,  ಆಲೂರು ತಾಲ್ಲೂಕಿನ ಅಬ್ಬನ, ಬೈರಾಪುರ, ಹುಣಸವಳ್ಳಿ, ದೊಡ್ಡಕಣಗಾಲು, ಕದಾಳು, ಮಲ್ಲಾಪುರ, ಮಡಬಲು, ಕಾರಗೋಡು, ಕಣತೂರು, ಕಾರ್ಜುವಳ್ಳಿ, ಪಾಳ್ಯ, ತಾಳೂರು, ಕುಂದೂರು, ಕೆಂಚಮ್ಮನ ಹೊಸಕೋಟೆ, ಮಗ್ಗೆ, ಗಂಜಿಗೆರೆ, ಚಿಕ್ಕಕಣಗಾಲು.

ಹಾಸನ ತಾಲ್ಲೂಕಿನ ಅಟ್ಟಾವರ ಹೊಸಳ್ಳಿ, ಕಬ್ಬಳ್ಳಿ, ದುದ್ದ, ಹೊನ್ನಾವರ, ಬಸವಾಘಟ್ಟ, ಅಂಬುಗ, ಅಂಕಪುರ, ಬೂವನಹಳ್ಳಿ, ಹನುಮಂತಪುರ, ಹೂವಿನಹಳ್ಳಿ ಕಾವಲು, ಕಾರ್ಲೆ, ಮೊಸಳೆಹೊಸಳ್ಳಿ, ಜಾಗರವಳ್ಳಿ, ಮಡೆನೂರು, ಮೆಳಗೋಡು, ಶಂಕರನಹಳ್ಳಿ, ಕಂದಲಿ, ಕಾಟೀಹಳ್ಳಿ, ಮಣಚನಹಳ್ಳಿ, ತೇಜೂರು.
ಸಕಲೇಶಪುರ ತಾಲ್ಲೂಕಿನ ಬಾಳ್ಳುಪೇಟೆ, ಬಾಗೆ, ಬೆಳಗೋಡು, ಹಲಸುಲಿಗೆ, ಉದೇವಾರ, ಉಚ್ಚಂಗಿ, ಯಸಳೂರು, ವಣಗೂರು, ಐಗೂರು, ಹೆತ್ತೂರು, ದೇವಾಲಕೆರೆ, ಹಾನುಬಾಳು, ಆನೇಮಹಲ್, ಹೆಬ್ಬಸಾಲೆ, ಹುರುಡಿ, ಶುಕ್ರವಾರಸಂತೆ, ಮಳಲಿ, ಚಂಗಡಿಹಳ್ಳಿ, ಹೊಸೂರು, ಕೂಡುರಸ್ತೆ.
ಬೇಲೂರು ತಾಲ್ಲೂಕಿನ ಅಡಗೂರು, ಗಂಗೂರು, ಹಳೇಬೀಡು, ಹೆಬ್ಬಾಳು, ಚಟಾಚಟ್ನಳ್ಳಿ, ಹಗರೆ, ಯಲಹಂಕ, ಇಬ್ಬೀಡು, ಗೋಣಿಸೋಮನಹಳ್ಳಿ, ಬಂಟೇನಹಳ್ಳಿ, ಚೀಕನಹಳ್ಳಿ, ಗೆಂಡೆಹಳ್ಳಿ, ಯಮಸಂದಿ, ಸನ್ಯಾಸಿಹಳ್ಳಿ, ತೊಳಲು, ಬೇಲೂರು ಬಸ್ ನಿಲ್ದಾಣ, ಕೋಗಿಲೆ ಮನೆ, ಬಿಕ್ಕೋಡು, ಮಲಸಾವರ, ಅರೇಹಳ್ಳಿ.
ಚನ್ನರಾಯಪಟ್ಟಣ ತಾಲ್ಲೂಕಿನ ಕುಂದೂರು ಮಠ, ಬ್ಯಾಡರಹಳ್ಳಿ, ಬಾಗೂರು, ಕೆಂಬಾಳು, ಅಣತಿ, ಎಂ. ಶಿವರ, ಸಾತೇನಹಳ್ಳಿ, ಅಕ್ಕನಹಳ್ಳಿ ಕೂಡು, ಕಬ್ಬಳ್ಳಿ, ದಿಡಗ, ನುಗ್ಗೇಹಳ್ಳಿ, ಹಿರೀಸಾವೆ, ಶ್ರವಣಬೆಳಗೊಳ, ಕಾಂತರಾಜಪುರ, ಕಬ್ಬಾಳು, ಸುಂಡಹಳ್ಳಿ, ಜುಟ್ಟನಹಳ್ಳಿ ಬಾರೆ, ಕಾರೆಹಳ್ಳಿ, ನವಿಲೆ ಗೇಟ್, ಜಂಬೂರು, ಕಲ್ಕೆರೆ, ಬಳದರೆ(ಉದಯಪುರ ಸರ್ಕಲ್), ಡಿ. ಕಾಳೇನಹಳ್ಳಿ, ಬರಗೂರು, ಆನೆಕೆರೆ, ಕುಂಬೇನಹಳ್ಳಿ, ನಲ್ಲೂರು (ಶ್ರೀನಿವಾಸಪುರ), ನೊರನಕ್ಕಿ, ಮಟ್ಟನವಿಲೆ, ಗೌಡಗೆರೆ.
ಹೊಳೆನರಸೀಪುರ ತಾಲ್ಲೂಕಿನ ದೊಡ್ಡಹಳ್ಳಿ, ಆನೇಕನ್ನಂಬಾಡಿ, ದೊಡ್ಡಕಾಡನೂರು, ಕಟ್ಟೆಬೆಳಗುಲಿ, ಬಾಗೇವಾಳು ತಾತನಹಳ್ಳಿ, ಹಳ್ಳಿ ಮೈಸೂರು, ಬಿದರಕ್ಕ, ಓಡನಹಳ್ಳಿ, ನಿಡುವಾಣಿ, ಮೂಡಲಹಿಪ್ಪು, ನಗರನಹಳ್ಳಿ, ಶ್ರವಣೂರು, ಹಳೇಕೋಟೆ, ಹಂಗರಹಳ್ಳಿ, ಹರಿಹರಪುರ, ದೊಡ್ಡಕುಂಚೇವು, ಕೋಡಿಹಳ್ಳಿ, ಪಡುವಲಹಿಪ್ಪೆ, ಸಂಕನಹಳ್ಳಿ, ದೊಡ್ಡಬ್ಯಾಗತವಳ್ಳಿ, ಕೆರಗೂಡು.
ಅರಕಲಗೂಡು ತಾಲ್ಲೂಕಿನ  ಗಂಜಲಗೂಡು, ಹೆಬ್ಬಾಲೆ, ಬೈಚನಹಳ್ಳಿ, ಯಲಗತ್ತಹಳ್ಳಿ, ಬೆಳವಾಡಿ, ಕೆರಳಾಪುರ, ಕಾಳೇನಹಳ್ಳಿ, ರಾಮನಾಥಪುರ, ರುದ್ರಪಟ್ಟಣ, ಹನ್ಯಾಳು, ಲಕ್ಕೂರು, ಗಂಗೂರು, ಕಟ್ಟೇಪುರ, ರಾಗಿಮರೂರು, ಕೊಣನೂರು, ಸಿದ್ದಾಪುರ ಗೇಟ್, ಮರಿಯಾನಗರ, ಬನ್ನೂರು, ದೊಡ್ಡಬೆಮ್ಮತ್ತಿ, ಮಲ್ಲಿಪಟ್ಟಣ, ಹುಲಿಕಲ್ಲು.
ಅರಸೀಕೆರೆ ತಾಲ್ಲೂಕಿನ ಅರಸೀಕೆರೆ ಬಸ್ ನಿಲ್ದಾಣ, ಮಾಡಾಳು, ಕಣಕಟ್ಟೆ, ಶಂಕರನಹಳ್ಳಿ, ಜೆ.ಸಿ.ಪುರ, ಅಗ್ಗುಂದ, ದುಮ್ಮೇನಹಳ್ಳಿ, ಬಾಗೇಶಪುರ, ಹಾರನಹಳ್ಳಿ, ಹಬ್ಬನಘಟ್ಟ, ಬೆಂಡೆಕೆರೆ, ಕುರುವಂಕ, ಬಾಣಾವಾರ, ಕಾಚೀಘಟ್ಟ, ಜಾಜೂರು, ಶ್ಯಾನೆಗೆರೆ, ಕೊಳಗುಂದ, ಬಂದೂರು, ಜಾವಗಲ್, ರಂಗಾಪುರ, ಉಂಡಿಗನಾಳು, ಮುದುಡಿ, ಲಾಳನಕೆರೆ, ಕೆಂಕೆರೆ, ಹೆಗ್ಗಟ್ಟ, ಗಂಡಸಿ, ಬಾಗೇವಾಳು, ಗೀಜಿಹಳ್ಳಿ, ರಾಂಪುರ, ಕಾಮಸಮುದ್ರ ಗ್ರಾಮಗಳಲ್ಲಿ ಸಂಚರಿಸಿ ಕೋವಿಡ್-19 ಬಗ್ಗೆ ಜಾಗೃತಿ ಮೂಡಿಸಲಿದೆ.

ಇದೇ ಸಂದರ್ಭದಲ್ಲಿ ಶಾಸಕರುಗಳಾದ ಎ.ಟಿ. ರಾಮಸ್ವಾಮಿ, ಕೆ.ಎಂ.ಶಿವಲಿಂಗೇಗೌಡ,  ಹೆಚ್.ಕೆ. ಕುಮಾರಸ್ವಾಮಿ, ಕೆ.ಎಸ್. ಲಿಂಗೇಶ್ ಹಾಗೂ ಜಿಲ್ಲಾಧಿಕಾರಿ ಆರ್. ಗಿರೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್‍ಗೌಡ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ. ಪರಮೇಶ್ ಮತ್ತಿತರರು ಹಾಜರಿದ್ದರು.

” ಸಮಸ್ತ ಹಾಸನ ಜನತೆಗೆ ” ನರಕ ಚತುರ್ದಶಿ ಮತ್ತು ದೀಪಾವಳಿ ಹಬ್ಬದ ಶುಭಾಶಯಗಳು ” ಹಬ್ಬದ ಶುಭಾಶಯಗಳು ” – ಶುಭಕೋರುವವರು – ನಂದಗೋಕುಲ ಕನ್ವೆನ್ಷನ್ ಸೆಂಟರ್ !!
ಬುಕಿಂಗ್ ಸ್ವೀಕರಿಸಲಾಗುತ್ತಿದೆ 👇
ಮದುವೆ, ಪುರಸ್ಕಾರ, ನಿಶ್ಚಿತಾರ್ಥ, ಅನುಸ್ಥಾಪನಾ ಸಮಾರಂಭ, ಸಭೆಗಳು, ಜನ್ಮದಿನ ಸಂಭ್ರಮಗಳು, ಕಾಕ್ಟೈಲ್ ಪಾರ್ಟಿ ಇವೆಂಟ್ !!
ರುಚಿಕರ ಆಹಾರ, ಅಲಂಕಾರ ಮತ್ತು ಸಂಪೂರ್ಣ ವ್ಯವಸ್ಥೆಗಳ ಪ್ಯಾಕೇಜ್ ಲಭ್ಯವಿದೆ
ಸಂಪರ್ಕಿಸಿ: 9480928556/6364545555
@nandagokula_convention_centre

LEAVE A REPLY

Please enter your comment!
Please enter your name here