ಹಾಸನ : ಸ್ನೇಹದ ಹೆಸರಲ್ಲಿ ಅವಶ್ಯಕತೆ ಇದ್ದಾಗಲೇಲ್ಲ ಹಣ ಪಡೆದು ವಂಚಿಸಿರುವ ಘಟನೆ ನಗರ ಬಸಟ್ಟಿ ಕೊಪ್ಪಲಿನಲ್ಲಿ ನಡೆದಿದೆ. ನಗರದ ಬಸಟ್ಟಿ ಕೊಪ್ಪಲಿನ ವಾಸಿಯಾಗಿರುವ ವಯಸ್ಕರ ಶಿಕ್ಷಣ ಇಲಾಖೆಯಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದ ಪಿ.ರಾಮಯ್ಯ ಅವರು ಮಲ್ಲಿಕಾರ್ಜುನ್ ಎಂಬ ವ್ಯಕ್ತಿಯ ಬಣ್ಣದ ಮಾತುಗಳಿಗೆ ಮಾರುಹೋಗಿ ತಮ್ಮ ವೃತ್ತಿಜೀವನದಲ್ಲಿ ಉಳಿಸಿಕೊಂಡು ಬಂದಿದ್ದ 58 ಲಕ್ಷ ಹಣ ಕಳೆದು ಕೊಂಡು ಹತಾಶರಾಗಿದ್ದಾರೆ. , ಹಣ ಪಡೆದು ವಂಚನೆ ಮಾಡಿರುವ ಬಿ.ಜಿ.ಮಲ್ಲಿಕಾರ್ಜುನ್ ಸ್ವಾಮಿ ಎಂಬಾತನು ಮೂಲತಃ
ಅರಸೀಕೆರೆ ತಾಲೂಕಿನ ಬಂದೂರು ಗ್ರಾಮದ ಗಂಗೆಗೌಡ ಎಂಬುವರ ಮಗನಾಗಿದ್ದು, ಹಾಸನದ ಹೇಮಾವತಿ ನಗರದಲ್ಲಿ ವಾಸವಿದ್ದು, ನಿವೇಶನ ಕೊಡಿಸುವ ಕೆಲಸ ಮಾಡುತ್ತಿದ್ದು, ನಿವೇಶನ ಕೊಡಿಸುವಂತೆ ತನ್ನ ಸಂಪರ್ಕಕ್ಕೆ ಬಂದ ರಾಮಯ್ಯ ಅವರು ತಮ್ಮ ವೃತ್ತಿಜೀವನದ ಉದ್ದಕ್ಕೂ ದುಡಿದು ಕೂಡಿಟ್ಟಿದ್ದ 58 ಲಕ್ಷ ರೂ. ಹಣ ಪಡೆದು, ನಾಪತ್ತೆ ಯಾಗಿದ್ದಾನೆ. , ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸ್ ಅಧಿಕಾರಿಗಳು ಈತನನ್ನು ಹುಡುಕಿಕೊಡುವಂತೆ ವಂಚನೆಗೆ ಒಳಗಾದ ರಾಮಯ್ಯ ಅವರು ಮನವಿ ಮಾಡಿದ್ದಾರೆ. , ಜ್ಯೋತಿಷಿಯಿಂದಲೂ ಮೋಸ ಇವರಿಗೆ ; 58 ಲಕ್ಷ ರೂ. ಕಳೆದುಕೊಂಡ ರಾಮಯ್ಯ ಅವರು, ತೀರಾ ದಿಕ್ಕೆಟ್ಟ ಸಮಯದಲ್ಲಿ, ಎಲ್ಲಿಯಾದರೂ ಸಹಾಯ ಸಿಕ್ಕೀತೆ ! ಎಂದು ಹುಡುಕುತ್ತಿರುವಾಗ ಕಣ್ಣಿಗೆ ಬಿದ್ದದ್ದು ಕೇರಳ ಕುಟ್ಟಿಚಾತನ್ ಎಂಬ ಮಾಂತ್ರಿಕ ಎಸ್.ರಾಜು
ಹಾಸನ ನಗರದ ಸಂತ ಫಿಲೋಮಿನಾ ಶಾಲೆ ಬಳಿಯ ಗಲ್ಲಿಯಲ್ಲಿದ್ದ ರಾಜು ಪೊದುವಾಳ್ ಬಳಿ ರಾಮಯ್ಯ ಅವರು ತಮ್ಮ ಕಷ್ಟವನ್ನೆಲ್ಲಾ ಹೇಳಿಕೊಂಡಿದ್ದಾರೆ. ಕೂಡಲೇಟಿಟಿ ರಾಜು ಪೊದುವಾಳ್ ಮಂತ್ರ ಶಕ್ತಿಯಿಂದ ಹಣ ಹಿಂತಿರುಗಿಸುವುದಾಗಿ ಹೇಳಿ, ಕೇರಳ ಮಾಂತ್ರಿಕರಿಂದ ಭಾರೀ ಮಂತ್ರ ಮಾಡಿಸಿ ಮಲ್ಲಿಕಾರ್ಜುನ ಸ್ವಾಮಿ ವಾಪಸ್ ಬಂದು ಹಣ ಹಿಂದಿರುಗಿಸುವಂತೆ ಮಾಡುತ್ತೇನೆ ಎಂದು ನಂಬಿಸಿದ ರಾಜು ಪೊದುವಾಳ್, ಮೊದಲಿಗೆ 1 ಲಕ್ಷ ರೂ. ಆಮೇಲೆ 3 ಲಕ್ಷ ರೂ. ಹೀಗೆ ಒಟ್ಟು
7 ಲಕ್ಷದ 20 ಸಾವಿರ ರೂಪಾಯಿಗಳನ್ನು ದೋಚಿದ್ದಾನೆ. ಆದರೆ ಮಾಂತ್ರಿಕ ರಾಜು ಪೊದುವಾಳ್ ಈಗ ಹಾಸನ ಬಿಟ್ಟು ದೂರದ ಮಂಗಳೂ- ರಿನಲ್ಲಿ ನೆಲೆಸಿದ್ದಾನೆ. , ರಾಮಯ್ಯ ಈಗ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಮಾಂತ್ರಿಕ ರಾಜು ಪೋದುವಾಳ್ ಮೇಲೆ ಮೋಸ ಮಾಡಿದ ಕೇಸು ಸಹ ದಾಖಲಿಸಿದ್ದಾರೆ.