ಹಾಸನ : ಜಿಲ್ಲೆಯ ಸಕಲೇಶಪುರ ತಾಲೂಕು ವಳಲಹಳ್ಳಿ ಗ್ರಾಮಪಂಚಾಯಿತಿಯ ಹಿರಿಯೂರು ಗ್ರಾಮದ ವಳಲಹಳ್ಳಿ ಕೂಡಿಗೆಯಲ್ಲಿ ಕುಡಿಯುವ ನೀರಿನ ಬಾವಿಗೆ ದುಷ್ಕರ್ಮಿಗಳು ವಿಷ ಬೆರೆಸಿದ್ದು ಗೊತ್ತಾಗಿದೆ , ಗ್ರಾಮದ ಗೋಪಾಲಕೃಷ್ಣ (ಗೋಪಿ)ಎಂಬುವರು ತಮ್ಮ ಮನೆಯ ಮುಂದೆ ಕುಡಿಯಲು ತೆರೆದ ಬಾವಿಯೊಂದನ್ನು ಮಾಡಿಕೊಂಡಿದ್ದು ,ಇದರಿಂದ ಕುಡಿಯಲು ಹಾಗೂ ಮನೆ ಬಳಕೆಗೆ ನೀರ ಅನುಕೂಲ ಪಡೆಯುತ್ತಿದ್ದರು , ಅಂದು ಬೆಳಗ್ಗೆ ಮನೆ ಬಳಕೆಗೆ ನೀರನ್ನು ಮೋಟರಿನಿಂದ ಆನ್ ಮಾಡಿದ್ದಾಗ
ನೀಲಿ ಬಣ್ಣದಿಂದ ಕೂಡಿದ್ದು ನೊರೆ ಬರುವ ಹಾಗೆ ಕಂಡು ಬಂದಿದೆ. ನಂತರ ಇದನ್ನು ಚಿಕ್ಕ ಪಾತ್ರೆಗಳಿಗೆ ತುಂಬಿಸಿ ನೋಡಿದಾಗ ವಾಸನೆ ಹಾಗೂ ನೊರೆ ಹೆಚ್ಚಾಗಿದ್ದು, ಗೋಪಾಲಕೃಷ್ಣ ಅವರು ಬಾವಿಯ ಹತ್ತಿರ ನೋಡಿದಾಗ ಸುತ್ತಲೂ ಬಿಳಿಯ ಬಣ್ಣದ ಪೌಡರ್ ಬಿದ್ದಿರುವುದು ಗೊತ್ತಾಗಿದೆ , ಊರಿನ ಗ್ರಾಮಸ್ಥರನ್ನು ಕರೆದು ಎಲ್ಲರೂ ಪರೀಕ್ಷಿಸಿದಾಗ ಇದು ವಿಷಯುಕ್ತ ಪೌಡರ್ ಹಾಗೂ ಯಾರೋ ದುಷ್ಕರ್ಮಿಗಳು
ವಿಷದ ಪೌಡರ್ ಹಾಕಿರುವುದಾಗಿ ಕಂಡು ಬಂದಿದೆ. ಇದರಿಂದ ಆತಂಕ ಕೊಳಗಾದ ಗೋಪಾಲಕೃಷ್ಣ ಹಾಗೂ ಮನೆಯವರು ಸ್ಥಳೀಯ ಪೊಲೀಸ್ ಠಾಣೆಗೆ ದೂರು ದಾಖಲಿಸುವ ಮೂಲಕ ಕಿಡಿಗೇಡಿಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಬೇಡಿಕೆ ಇಟ್ಟಿದ್ದಾರೆ .