SPEAK FOR INDIA” ಎಂಬ ಚರ್ಚಾ ಕೂಟದಲ್ಲಿ ಹಾಸನದ ಹೆರಗು ಮೂಲದವರಾದ ಚಂದನ ರನ್ನರ್ ಅಫ್

0

ಬೆಂಗಳೂರು / ಹಾಸನ : ಫೆಡರಲ್ ಬ್ಯಾಂಕ್ , ದಿ ಟೈಮ್ಸ್ ಆಫ್ ಇಂಡಿಯಾ ಮತ್ತು ವಿಜಯ ಕರ್ನಾಟಕ ಸಹಯೋಗದಲ್ಲಿ ಏರ್ಪಡಿಸಿದ್ದ “SPEAK FOR INDIA 2022-2023” ರ ಆವೃತ್ತಿಯ ರನ್ನರ್ ಅಪ್ ಆಗಿ ಹಾಸನದ ಹೆರಗು ಮೂಲದ ಚಂದನ ಆಯ್ಕೆಯಾಗಿದ್ದಾರೆ. ಹಾಗೂ ಉನ್ನತ ಶಿಕ್ಷಣ ಸಚಿವರಾದ ಸಿ ಎನ್ ಅಶ್ವತ್ ನಾರಾಯಣ್ , ನಟ ಡಾಲಿ ಧನಂಜಯ್ ಮತ್ತು  ನಟಿ ಸಪ್ತಮಿಗೌಡ ಅವರಿಂದ ಪ್ರಶಸ್ತಿ ಸ್ವೀಕರಿಸಿದ್ದಾರೆ.  “ತಾನು ಮಧ್ಯಮ ವರ್ಗದ ಹೆಣ್ಣು ಮಗಳಾಗಿದ್ದು, ಇದು ಕರ್ನಾಟಕದ ಮಧ್ಯಮ ವರ್ಗದ ಹೆಣ್ಣು ಮಕ್ಕಳ ಗೆಲುವು” ಎಂದು ಹೆಮ್ಮೆಯಿಂದ ಹೇಳಿದ್ದಾರೆ.

ಇವರಿಗೆ ಹಾಸನದ ಸಮಸ್ತ ಜನತೆಯ ಪರವಾಗಿ ಹೃದಯ ಪೂರ್ವಕ ಅಭಿನಂದನೆಗಳು. ಈ ವೇಳೆ ಫೆಡರಲ್ ಬ್ಯಾಂಕ್ ನ ಸಿಇಒ ಮತ್ತು ಎಂ ಡಿ ಶ್ಯಾಮ್ ಶ್ರೀನಿವಾಸನ್ , ನಿರ್ದೇಶಕ ಶಂಕರ್ ಶಾನ್ ಬಸು, ದಿ ಟೈಮ್ಸ್ ಆಫ್ ಇಂಡಿಯಾ ಗ್ರೂಪ್ ನಿರ್ದೇಶಕ ದೀಪಕ್ ಸಲೂಜಾ, ವಿಜಯ ಕರ್ನಾಟಕ ಸಂಪಾದಕ  ಸುದರ್ಶನ್ ಚಿನ್ನಂಗಿಹಳ್ಳಿ ಉಪಸ್ಥಿತರಿದ್ದರು. ಸ್ಪರ್ಧೆಯ ತೀರ್ಪುಗಾರರಾಗಿ ನಿರ್ದೇಶಕ ಪವನ್ ಒಡೆಯರ್, ವಕೀಲರಾದ ಸುಷ್ಮಾ ನವೀನ್, ಸಂಘಟಕ ಶ್ರೀನಿವಾಸ್ ಆಲವಿಲ್ಲಿ ಭಾಗವಹಿಸಿದ್ದರು.,

# ವಿಕ ಸುದ್ದಿಲೋಕ ಬೆಂಗಳೂರು ಫೆಡರಲ್ ಬ್ಯಾಂಕ್, ಟೈಮ್ಸ್ ಆಫ್ ಇಂಡಿಯಾ ಮತ್ತು ವಿಜಯ ಕರ್ನಾಟಕ ಸಹಯೋಗದಲ್ಲಿ ನಡೆದ ‘ಸ್ಪೀಕ್ ಫಾರ್ ಇಂಡಿಯಾ’ 2022-23ನೇ ಸಾಲಿನ ಚರ್ಚಾ ಸ್ಪರ್ಧೆಯ ಅಂತಿಮ ಸ್ಪರ್ಧೆಯಲ್ಲಿ ವಿನ್ನರ್ ಆಗಿ ಸ್ಫೂರ್ತಿ ಹೊರಹೊಮ್ಮಿದ್ದಾರೆ. ರನ್ನರ್‌ ಅಪ್ ಸ್ಥಾನವನ್ನು ಎಚ್.ವಿ.ಚಂದನಾ ಪಡೆದಿದ್ದಾರೆ.

ನಗರದ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ನಡೆದ ಅಂತಿಮ ಸ್ಪರ್ಧೆಯಲ್ಲಿ ಭಾಗವಹಿಸಿದ್ದ 8 ವಿದ್ಯಾರ್ಥಿಗಳ ಪೈಕಿ, ಅತ್ಯುತ್ತಮ ವಾಗಿ ವಿಷಯ ಮಂಡಿಸಿದ ವಿಜೇತರೆಂದು

ಅಂತಿಮ ಸ್ಪರ್ಧೆಯಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ, ನಟ ಡಾಲಿ ಧನಂಜಯ ಮತ್ತು ನಟಿ ಸಪ್ತಮಿಗೌಡ ಅವರು ಪ್ರಥಮ ಸ್ಥಾನ ಗಳಿಸಿದ ಸ್ಫೂರ್ತಿಗೆ 2.5 ಲಕ್ಷ ರೂ. ಹಾಗೂ ದ್ವಿತೀಯ ಸ್ಥಾನ ಪಡೆದ ಚಂದ್ರನಾಗೆ 1.5 ಲಕ್ಷ ರೂ.ಗಳ ಚೆಕ್‌ ನೀಡಿ ಅಭಿನಂದಿಸಿದರು. ಸ್ಪರ್ಧೆಯಲ್ಲಿ ಅಂತಿಮ ಸುತ್ತಿನಲ್ಲಿ ಭಾಗವಹಿಸಿದ್ದ ಉಳಿದ ಆರು ವಿದ್ಯಾರ್ಥಿಗಳಿಗೆ ತಲಾ 35,000 ರೂ.ಗಳ ಚೆಕ್‌ ವಿತರಿಸಲಾಯಿತು.

ಈ ವೇಳೆ ಫೆಡರಲ್ ಬ್ಯಾಂಕ್‌ನ ಸಿಇಒ ಮತ್ತು ಎಂಡಿ ಶ್ಯಾಮ್ ಶ್ರೀನಿವಾಸನ್, ನಿರ್ದೇಶಕ ಶಂಕರ್‌ಶಾನ್ ಬಸು, ದಿ ಟೈಮ್ಸ್ ಆಫ್ ಇಂಡಿಯಾ ಗ್ರೂಪ್ ನಿರ್ದೇಶಕ ದೀಪಕ್ ಸಲೂಜಾ, ವಿಜಯ ಕರ್ನಾಟಕದ ಸಂಪಾದಕ ಸುದರ್ಶನ ಚನ್ನಂಗಿಹಳ್ಳಿ ಉಪಸ್ಥಿತರಿದ್ದರು. ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ:

ನಮ್ಮ ದೇಶದಲ್ಲಿ ಪ್ರತಿಯೊಬ್ಬರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ. ಇದನ್ನು ನಾವು ವ್ಯಕ್ತಪಡಿಸಬೇಕಿದೆ. ಇಂದು ಭಾಗವಹಿಸಿದ್ದ ಪ್ರತಿಯೊಬ್ಬ ವಿದ್ಯಾರ್ಥಿಯೂ ಬಹಳ ಸೊಗಸಾಗಿ ತಮ್ಮ ಚರ್ಚೆ ಮಂಡಿಸಿದ್ದಾರೆ ಎಂದು ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು. ವಿಷಯ ಏನು?

‘ಮೂನ್‌ಲೈಟಿಂಗ್-ಇದು ಭವಿಷ್ಯದ ವೃತ್ತಿ ಸಂಸ್ಕೃತಿಯೇ?’, ‘ಓಟಿಟಿ ವೇದಿಕೆಗೆ ಸೆನ್ಸಾರ್‌ಶಿಪ್‌ ಅವಶ್ಯಕತೆ ಇದೆಯಾ?’ ಎಂಬ ವಿಷಯಗಳು ಅಂತಿಮ ಸ್ಪರ್ಧೆಯ ಮೊದಲ ಎರಡು ಸುತ್ತಿನ ಚರ್ಚಾ ವಿಷಯಗಳಾಗಿದ್ದವು. ಅಂತಿಮ ಸುತ್ತಿಗೆ ‘ಮಾನವ ಕೇಂದ್ರೀತ ಕಾನೂನುಗಳು ಮಾನವ ಮತ್ತು ಪ್ರಾಣಿ ಸಂಘರ್ಷ ತಡೆಗೆ ಅವಶ್ಯಕತೆಯೇ?’ ಎಂಬ ವಿಷಯ ನೀಡಲಾಗಿತ್ತು.

ಅಂತಿಮ ಸ್ಪರ್ಧೆಯ ತೀರ್ಪುಗಾರರಾಗಿ ನಿರ್ದೇಶಕ ಪವನ್ ಒಡೆಯರ್, ವಕೀಲರಾದ ಸುಷ್ಮಾ ನವೀನ್, ಸಂಘಟಕ ಶ್ರೀನಿವಾಸ ಅಲವಿಲ್ಲಿ ಭಾಗವಹಿಸಿದ್ದರು.

ನನಗೆ ತೃಪ್ತಿ ಇದೆ: ಚಂದನಾ

”ನನಗೆ ದ್ವಿತೀಯ ಬಹುಮಾನ ಸಿಕ್ಕರೂ ಇದು ನನಗೆ ತೃಪ್ತಿ ನೀಡಿದೆ. ಇದು ನನ್ನಂತಹ ಬಡ ವಿದ್ಯಾರ್ಥಿಗಳಿಗೆಲ್ಲರಿಗೂ ಸಿಕ್ಕ ಜಯವೆಂದು ಭಾವಿಸುತ್ತೇನೆ” ಎಂದು ಸ್ಪೀಕ್ ಫಾರ್ ಇಂಡಿಯಾದಲ್ಲಿ ದ್ವಿತೀಯ ಬಹುಮಾನ ಪಡೆದ ಎಚ್.ವಿ.ಚಂದನಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಹಾಸನದ ಹೆರಗೂರು ಮೂಲದವರಾದ ಚಂದನಾ ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎಸ್ಸಿ ವ್ಯಾಸಂಗ ಮಾಡುತ್ತಿದ್ದಾರೆ. ತಂದೆ ಮತ್ತು ತಾಯಿ ಖಾಸಗಿ ಉದ್ಯೋಗಿಯಾಗಿದ್ದಾರೆ. ‘ನಾನು ಬಡ ಕುಟುಂಬದಿಂದ ಬಂದಿರುವ ಹುಡುಗಿಯಾಗಿದ್ದು, ನನಗೆ ಈ ಮಟ್ಟಕ್ಕೆ ಬಂದಿರುವುದಕ್ಕೆ ಖುಷಿಯಾಗುತ್ತದೆ. ನನಗೆ ಸಿಕ್ಕಿರುವ 1.5 ಲಕ್ಷ ರೂ.ಗಳು ಸಹ ನನಗೆ ಬಹಳ ದೊಡ್ಡದಾಗಿದೆ,” ಎಂದರು.

‘ಇನ್ನು ಪ್ರಥಮ ಸ್ಥಾನ ಕೈತಪ್ಪಿದ್ದಕ್ಕೆ ಕಾರಣವೇನು?’ ಎಂಬ ವಿಚಾರವಾಗಿ ಮಾತನಾಡಿದ ಅವರು, “ನಾನು ಇನ್ನೂ ಸ್ವಲ್ಪ ಓದಿಕೊಂಡು ಬರಬೇಕಿತ್ತು ಎನಿಸಿತು” ಎಂದಷ್ಟೇ ಉತ್ತರಿಸಿದರು. ‘ಇದು ನನ್ನ 3ನೇ ಪ್ರಯತ್ನವಾಗಿದ್ದು, ಪ್ರತಿ ಬಾರಿ ವಲಯದ ಮಟ್ಟಕ್ಕೆ ಬಂದು ವಾಪಸ್ ಹೋಗುತ್ತಿದ್ದೆ,” ಎಂದರು.

LEAVE A REPLY

Please enter your comment!
Please enter your name here