ಪತ್ನಿಯ ಕುತ್ತಿಗೆಗೆ ಕೈ ಹಾಕಿ ಕಳ್ಳ ಚಿನ್ನದ ಸರಕೀಳಲು ಯತ್ನ , ಮೊಪೆಡ್ ನಿಯಂತ್ರಣ ತಪ್ಪಿ ಗಂಡಹೆಂಡತಿ ರಸ್ತೆಗೆ ಬಿದ್ದಿದ್ದಾರೆ

0

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಜನತಾ ಹೌಸ್ ಬಡಾವಣೆ ವಾಸಿ ಹರೀಶ್ ಎಂಬುವರು ತನ್ನ ಪತ್ನಿ ರಾಧಾರನ್ನು ಟಿವಿಎಸ್ ಮೊಪಡ್‌‌ನಲ್ಲಿ ಕೂರಿಸಿಕೊಂಡು ನುಗ್ಗೇಹಳ್ಳಿಗೆ ಹೋಗುತ್ತಿದ್ದ ವೇಳೆ , ಬೆಳಗೀಹಳ್ಳಿ ಗೇಟ್ ಬಳಿ ಹಿಂದಿನಿಂದ ಪಲ್ಸರ್ ಬೈಕ್‌‌‌ನಲ್ಲಿ ಬಂದ ಅಪರಿಚಿತ ವ್ಯಕ್ತಿ , ಕತ್ತಿನ ಸರವನ್ನು ಕಸಿದುಕೊಳ್ಳಲು ಹಿಂದಿನಿಂದ ಕುತ್ತಿಗೆಗೆ ಕೈ ಹಾಕಿ ಎಳೆದಿದ್ದಾನೆ. , ಸರ ಅವನ ಕೈ

ಸೇರಿಲ್ಲ , ಈ ಸಮಯದಲ್ಲಿ ದಂಪತಿ ಇದ್ದ ಮೊಪೆಡ್ ನಿಯಂತ್ರಣ ತಪ್ಪಿ ಗಂಡಹೆಂಡತಿ ರಸ್ತೆಗೆ ಬಿದ್ದಿದ್ದು ಇಬ್ಬರು ಹೆಲ್ಮೆಟ್ ಧರಿಸದ ಕಾರಣ, ಕೈಕಾಲು ಮತ್ತು ತಲೆಗೆ ಪೆಟ್ಟುಮಾಡಿ ಕೊಂಡಿದ್ದಾರೆ ,  ಮಹಿಳೆಯ ತಲೆಯ ಹಿಂಭಾಗಕ್ಕೆ ತೀವ್ರ ಗಾಯವಾಗಿತ್ತು ನೆರೆದವರಿಗೆ ಗಾಬರಿ ಗೊಳಿಸಿತ್ತು , ನಂತರ ಸ್ಥಳೀಯರ ಸಹಾಯದಿ ಹಿರೀಸಾವೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ನಂತರ ಬೆಂಗಳೂರಿನ ನಿಮಾನ್ಸ್‌‌‌ನಲ್ಲಿ

ಹೆಚ್ಚಿನ ಚಿಕಿತ್ಸೆ ಕೊಡಿಸಲೊಯ್ಯಲಾಗಿದೆ , ಘಟನೆಯಲ್ಲಿ ಮಾಂಗಲ್ಯ ಸರ ಕಿತ್ತುಕೊಳ್ಳವ ಯತ್ನ ವಿಫಲವಾಗಿದ್ದು, ಅಂತೆಯೇ ದಂಪತಿ ಅಪಾಯದಿಂದ ಪಾರಾದ ಘಟನೆ ಬುಧವಾರ ಹಿರೀಸಾವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. , ಈ ಬಗ್ಗೆ ಸ್ಕೂಟರ್ ಸವಾರ ಹರೀಶ್ ಪೊಲೀಸರಿಗೆ ದೂರು ನೀಡಲಾಗಿ , ಹಿರೀಸಾವೆ ಪೊಲೀಸ್ ಠಾಣೆಯಲ್ಲಿ

ಪ್ರಕರಣ ದಾಖಲಾಗಿದ್ದು , ರವಿಪ್ರಸಾದ್ (DYSP), ಚಂದ್ರಶೇಖರ್ (SI) ಸ್ಥಳಕ್ಕೆ ಭೇಟಿ ನೀಡಿ , ಪೊಲೀಸರು ಸರಗಳ್ಳರ ಬಂಧಿಸಲು ವಿಶೇಷ ತಂಡ ರಚಿಸಿ, ಕಾರ್ಯಾಚರಣೆ ನಡೆಸುತ್ತಿದ್ದಾರೆ .

LEAVE A REPLY

Please enter your comment!
Please enter your name here