ಪರಿಸ್ಥಿತಿ ಬಿಗಡಾಯಿಸುವುದ ತಡೆಯಲು ಸಕಲೇಶಪುರ ಕ್ರಾಫರ್ಡ್ ಆಸ್ಪತ್ರೆಗೆ ಬೇಕು ಅಗತ್ಯ ಹಲವು ವೈದ್ಯರು

1

ಅಗತ್ಯವೈದ್ಯರ ನೇಮಕಕ್ಕೆ 8 ದಿನದ ಗಡುವು:
ಉಗ್ರ ಹೋರಾಟ ಎಚ್ಚರಿಕೆ:
ಎಚ್ ಡಿ ರೇವಣ್ಣ.

ಸಕಲೇಶಪುರ: ಕ್ರಾಫರ್ಡ್ ಆಸ್ಪತ್ರೆಗೆ ಅಗತ್ಯ ವೈದ್ಯರನ್ನು ಎಂಟು ದಿನಗಳಲ್ಲಿ ನೇಮಿಸಿದ್ದರೆ
ಉಗ್ರ ಹೋರಾಟ ನಡೆಸುವುದಾಗಿ
ಮಾಜಿ ಸಚಿವ ಜೆಡಿಎಸ್ ವರಿಷ್ಠ ಎಚ್ ಡಿ ರೇವಣ್ಣ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಕಾರ ಅಗತ್ಯ ವೈದ್ಯರನ್ನು ನಿಮಿಸಿದ ಕಾರಣ
ಜನರು ಸಂಕಷ್ಟಕ್ಕೆ ಈಡಾಗಿದ್ದಾರೆ ಎಂದರು.
ವೈದ್ಯರನ್ನು ನೀಡುವಂತೆ ಅನೇಕ ಬಾರಿ ಸರಕಾರಕ್ಕೆ ಒತ್ತಾಯಿಸಲಾಗಿದೆ.ಜಿಲ್ಲಾ ಮಂತ್ರಿಗಳಿಗೆ ಮನವಿಯನ್ನು ನೀಡಿ ಮನವರಿಕೆ ಮಾಡಲಾಗಿದೆ ಆದರೂ ಸಹ ಕಾರ್ಯಗತವಾಗಿಲ್ಲ
ಇವರಿಗೆ ಜನರ ಕಷ್ಟ ಅರ್ಥವಾಗುವುದಿಲ್ಲ
ಎಂದು ಕಿಡಿಕಾರಿದರು.

ರಾಜ್ಯ ಸರ್ಕಾರ ಭ್ರಷ್ಟರ ಸರ್ಕಾರವಾಗಿದೆ ಹಣ ನೀಡಿದರೆ ಮಾತ್ರ ಅಧಿಕಾರಿಗಳನ್ನು
ನಿರ್ದಿಷ್ಟ ಸ್ಥಳಕ್ಕೆ ವರ್ಗಾವಣೆ ಮಾಡುತ್ತಿದ್ದಾರೆ. ವೈದ್ಯರುಗಳು ಹಣ ನೀಡದೆ ಇರುವ ಕಾರಣಕ್ಕಾಗಿ
ಆಸ್ಪತ್ರೆಗೆ ವೈದ್ಯರನ್ನು ನೇಮಕ ಮಾಡುತ್ತಿಲ್ಲ ಎಂದು ಆರೋಪಿಸಿದರು.

ಸರ್ಕಾರದ ಪ್ರಮುಖರು ಹುಂಡಿ ಇಟ್ಟುಕೊಂಡು ಅಧಿಕಾರ ನಡೆಸುತ್ತಿದ್ದಾರೆ ಯಾರು ಹಣ ನೀಡುತ್ತಾರೆ ಅವರ ಪರವಾಗಿ ವರ್ಗಾವಣೆಗಳನ್ನು ಮಾಡುತ್ತಿದ್ದಾರೆ. ಇಂತಹ ಕೆಟ್ಟ ಪರಿಸ್ಥಿತಿ ನನ್ನ ಜೀವನದಲ್ಲಿ ನೋಡಿಲ್ಲ ಎಂದರು

ಕೋವಿಂಡ್ ಸಂಕಷ್ಟಕ್ಕೆ ಸರಕಾರ ಸ್ಪಂದಿಸುತ್ತಿಲ್ಲ . ಹಾಸನ ಜಿಲ್ಲೆಗೆ ತಾರತಮ್ಯ ಮಾಡುತ್ತಿದ್ದಾರೆ. ಕೆಲವು ಜಿಲ್ಲೆಗಳಿಗೆ ಗರಿಷ್ಠ ಸಹಕಾರ ನೀಡದ್ದರೆ. ನಮ್ಮ ಜಿಲ್ಲೆಗೆ ಕನಿಷ್ಠ ಸಹಾಯವನ್ನು ಮಾಡುತ್ತಿಲ್ಲ ಇದರಿಂದ ಕೋವಿಂಡ್ ಸಂಖ್ಯೆ ಹೆಚ್ಚಾಗುತ್ತಿದೆ, ಸಾವಿನ ಸಂಖ್ಯೆಯೂ ಹೆಚ್ಚಾಗುತ್ತಿದೆ ಎಂದರು.

ವೈದ್ಯರನ್ನು ನೇಮಕ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ನಾವು ಯಾವುದೇ ರಾಜಕಾರಣ ಮಾಡಲು ಮುಂದಾಗುವುದಿಲ್ಲ ಆದರೆ ಜನರ ಸಂಕಷ್ಟಗಳನ್ನು ಸಾವು-ನೋವುಗಳನ್ನು ನೋಡುತ್ತಾ ಕೂರಲಾಗುವುದಿಲ್ಲ ಈ ನಿಟ್ಟಿನಲ್ಲಿ ನಾವು ಹೋರಾಟ ಮಾಡವುದು ಅನಿವಾರ್ಯ ವಾಗಿದೆ ಎಂದರು.

ಕ್ರಾಫರ್ಡ್ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರೊಂದಿಗೆ ಸಮಾಲೋಚನೆ ನಡೆಸಿದ ಎಚ್ ಡಿ ರೇವಣ್ಣ,
ಆಸ್ಪತ್ರೆಗೆ ಅಗತ್ಯವಿರುವ ಕುಂದುಕೊರತೆಗಳ ಮಾಹಿತಿಯನ್ನು ಪಡೆದರು.

ಪ್ರಭಾರಿ ವೈದ್ಯಾಧಿಕಾರಿ ಡಾಕ್ಟರ್ ಹೇಮಂತ್ ಹಾಗೂ ಕ್ರಾಫರ್ಡ್ ಆಸ್ಪತ್ರೆ ವೈದ್ಯಾಧಿಕಾರಿ ಡಾಕ್ಟರ್ ಮಧುಸೂದನ್, ಹಿರಿಯರ
ನರ್ಸ್ ಶಕುಂತಲಾ ಮಾಹಿತಿಯನ್ನು ನೀಡಿದರು.

ಈ ಸಂದರ್ಭದಲ್ಲಿ ಶಾಸಕರಾದ ಎಚ್ ಕೆ ಕುಮಾರಸ್ವಾಮಿ. ಪುರಸಭೆ ಅಧ್ಯಕ್ಷ ಕಾಡಪ್ಪ,
ಜೆಡಿಎಸ್ ಪ್ರಮುಖರಾದ
ಬೆಕ್ಕನಳ್ಳಿ ನಾಗರಾಜ್, ಸ ಬ ಭಾಸ್ಕರ್ , ಅಸ್ಲಮ್ ಪಾಶ,ಪ್ರಜ್ವಲ್, ಶಾಸಕರ ಆಪ್ರಕಾರ್ಯದರ್ಶಿ ಮಹೇಂದ್ರ ಮುಂತಾದವರು ಇದ್ದರು

– ಭೀಮ ವಿಜಯ ಸಕಲೇಶಪುರ / ಸಕಲೇಶಪುರ ಸುದ್ದಿ ಉದ್ಯೋಗ

1 COMMENT

LEAVE A REPLY

Please enter your comment!
Please enter your name here