ಅರಸೀಕೆರೆಯ ಸರ್ವಧರ್ಮಿಯರಿಂದ ಸೇವ್ ದಿ ಡ್ರಿಮ್ಸ್ ಟ್ರಸ್ಟ್ ನ ಪದಾಧಿಕಾರಿಗಳಿಗೆ ಅಭಿನಂದನಾ ಕಾರ್ಯಕ್ರಮ

0

ಹಾಸನ ಜಿಲ್ಲೆ ಅರಸೀಕೆರೆ ಪಟ್ಟಣದ ಮೋಹನ್ ಕುಮಾರ್ ಮತ್ತು ಕವಿತಾ ದಂಪತಿಯ 12 ವರ್ಷದ ಮಗು ಮಾಸ್ಟರ್ ರುತನ್ ಕುಮಾರ್ ಕಳೆದ ಕೆಲವು ವರ್ಷಗಳಿಂದ ಕಿಡ್ನಿ ವೈಫಲ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಬೆಂಗಳೂರಿನ ಮಣಿಪಾಲನ ವೈದ್ಯರಾದ ಡಾ. ವಿಶ್ವನಾಥ್ ಸಿದ್ದಿನಿ ರವರ ತಂಡದಿಂದ ಕಿಡ್ನಿ ಟ್ರಾನ್ಸ್ ಪ್ಲಾಂಟ್ ಮಾಡಲು ಸುಮಾರು 10,000,00/- ರೂಪಾಯಿಗಳ ವೆಚ್ಚವಾಗುತ್ತದೆ ಎಂದು ತಿಳಿಸಿದ್ದು, ಕೂಲಿ ಕೆಲಸ ಮಾಡಿ ಜೀವನ ನಡೆಸುವ ಇವರ ಪರಿಸ್ಥಿತಿ ಇಷ್ಟೊಂದು ಹಣ ಅವಶ್ಯಕತೆ ಇದೆ ಎಂದು ತಿಳಿದು ಅರಸೀಕೆರೆ ಜನತೆ ಮಾಸ್ಟರ್ ರುತನ್ ಕುಮಾರ್ ನ ಪರಿಸ್ಥಿತಿಯನ್ನು ಸೇವ್ ದಿ ಡ್ರಿಮ್ಸ್ ನ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಗಮನಕ್ಕೆ ತಂದಾಗ ಕೆಲವೇ ದಿನಗಳಲ್ಲಿ ಶಸ್ತ್ರ ಚಿಕಿತ್ಸೆ ಮತ್ತು ಇತರೆ ಆಸ್ಪತ್ರೆಯ ಸೇರಿ ಒಟ್ಟು 20,15,300/- ಬೃಹತ್ ಮೊತ್ತದ ಸಹಕಾರ ನೀಡಿ ಶಸ್ತ್ರ ಚಿಕಿತ್ಸೆಗೆ ಸಹಕರಿಸಿದ ಸೇವ್ ದಿ ಡ್ರಿಮ್ಸ್ ಟ್ರಸ್ಟ್ ನ ಅಧ್ಯಕ್ಷರಾದ ಬಶೀರ್ ಈಶ್ವರಮಂಗಳ ಟ್ರಸ್ಟ್ ನ ಸಮನ್ವಯ ಸಮಿತಿಯ ಗುರುಗಳಾದ ಜಾಬಿರ್ ನಿಜಾಮಿ,

ಉಪಾಧ್ಯಕ್ಷರಾದ ನಾಜಿರ್ ಕೈನಾಡ್, ಪ್ರದಾನ ಕಾರ್ಯದರ್ಶಿ ನೌಷದ್ ಕೊಡಗು, ಅನ್ಸರ್, ರಝಕ್ ಕುಶಾಲನಗರ, ಮಹಾರೂಪ್ ಪರವಂದ, ಮುನಜಿರ್, ಜಾಷೀರ್, ಕಿರಣ್, ನೌಷದ್ ಕುಶಾಲನಗರ, ಝಕರಿಯ ರವರಗಳನ್ನು ಲಕ್ಷ್ಮಿಪುರದ ಶ್ರೀರಾಮ ಮಂದಿರದಲ್ಲಿ ಅಭಿನಂದಿಸಲಾಯಿತ್ತು ಈ ಸಮಯದಲ್ಲಿ ಕರವೇ ಮಹಿಳಾ ತಾಲ್ಲೋಕು ಅಧ್ಯಕ್ಷರಾದ ರುಕ್ಮಿಣಿ ಜಯಕುಮಾರ್, ಕರ್ನಾಟಕ ರಾಜ್ಯ ಅಲೆಮಾರಿ ದೊಂಬಿದಾಸ ಯುವಸೇನೆಯ ಮಾಜಿ ರಾಜ್ಯಾಧ್ಯಕ್ಷರಾದ ರಾಜು ಆರ್ ತಿಮ್ಮನಹಳ್ಳಿ, ಅನ್ಸರ್ ಮುಸ್ಲಿಂ ಮುಖಂಡರು ಲಕ್ಷ್ಮಿಪುರದ , ಅರಸೀಕೆರೆ ಪಟ್ಟಣ ಸಾರ್ವಜನಿಕರು ಮತ್ತು ರುತನ್ ಕುಮಾರ್ ಪೋಷಕರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here