23 ವರ್ಷದೊಳಗಿನ ಪುರುಷರ ಲಾಂಗ್‌ಜಂಪ್‌ನಲ್ಲಿ ದಾಖಲೆ ಮಾಡಿದ ಹಾಸನದ ಪುರುಷೋತ್ತಮ ಜಿಗಿತದ ಭಂಗಿ

0

ರಾಜ್ಯ ಜೂನಿಯರ್‌, ಯೂಥ್ ಅಥ್ಲೆಟಿಕ್ಸ್‌: ಬಿಟ್ಟೂ ಬಿಟ್ಟೂ ಸುರಿಯುತ್ತಿದ್ದ ಧಾರಾಕಾರ ಮಳೆಯ ನಡುವೆ ಛಲ ಬಿಡದೆ ‘ಬಲ’ ಪ್ರದರ್ಶಿಸಿದ ಅಥ್ಲೀಟ್‌ಗಳು ಲೋಕನಾಥ ಬೋಳಾರ್ ಸ್ಮಾರಕ ರಾಜ್ಯ ಜೂನಿಯರ್ ಮತ್ತು ಯೂಥ್ ಅಥ್ಲೆಟಿಕ್ ಕೂಟದ ಮೂರನೇ ದಿನವಾದ ಶುಕ್ರವಾರ ನಗರದ ಮಂಗಳಾ ಕ್ರೀಡಾಂಗಣದಲ್ಲಿ ಐದು ಕೂಟ ದಾಖಲೆಗಳನ್ನು ನಿರ್ಮಿಸಿದರು. , ರಾಜ್ಯ ಮತ್ತು ಜಿಲ್ಲಾ ಅಥ್ಲೆಟಿಕ್ ಸಂಸ್ಥೆಗಳು ಮೊಗವೀರ ವ್ಯವಸ್ಥಾಪನ ಮಂಡಳಿ ಮತ್ತು ಮಂಗಳೂರು ಯಾಂತ್ರಿಕ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ಆಶ್ರಯದಲ್ಲಿ ಆಯೋಜಿಸಿರುವ ಚಾಂಪಿಯನ್‌ಷಿಪ್‌ನ 23 ವರ್ಷದೊಳಗಿನ ಪುರುಷರ ಲಾಂಗ್‌ಜಂಪ್‌ನಲ್ಲಿ ಹಾಸನದ ಪುರುಷೋತ್ತಮ್‌ ಹೊಸ ದಾಖಲೆ ಬರೆದರು.

3ನೇ ದಿನದ ಫಲಿತಾಂಶದಲ್ಲಿ ;ಲಾಂಗ್‌ಜಂಪ್‌: ಪುರುಷೋತ್ತಮ್ (ಹಾಸನ). ಅಂತರ: 7.41ಮೀ (ಕೂಟ ದಾಖಲೆ. ಹಿಂದಿನ ದಾಖಲೆ: ಆರ್ಯ ಎಸ್‌: 7.31 ಮೀ; 2022)

LEAVE A REPLY

Please enter your comment!
Please enter your name here