ಆಟೋ ಟ್ಯಾಕ್ಸಿ ಚಾಲಕರಿಗೆ ಕೋವಿಡ್ ಪರಿಹಾರ ಸಹಾಯಧನಕ್ಕೆ ಅರ್ಜಿ ಆಹ್ವಾನ ಇಂದಿನಿಂದ ಸೇವಾ ಸಿಂಧು ಪೋರ್ಟಲ್ ನಲ್ಲಿ ಅರ್ಜಿ ಸ್ವೀಕಾರ ತೆರೆದಿದೆ !! ಆಟೋ ಟ್ಯಾಕ್ಸಿ ಚಾಲಕರಿಗೆ ತಿಳಿಸಿ , ಶೇರ್ ಮಾಡಿ
ಸರ್ಕಾರದ ಆದೇಶ ಸಂಖ್ಯೆ: ಟಿಡಿ 126 ಟಿಡಿಓ 2021, ದಿನಾಂಕ: 21-05-2021ರಲ್ಲಿ ಕೋವಿಡ್-19ರ 2ನೇ ಅಲೆಯ ತೀವ್ರತೆಯ ಹಿನ್ನೆಲೆಯಲ್ಲಿ ವಾಣಿಜ್ಯ ಮತ್ತಿತರ ಚಟುವಟಿಕೆಗಳಿಗೆ ನಿರ್ಬಂಧಗಳನ್ನು ವಿಧಿಸಿ ಆದೇಶಿಸಿರುವುದರಿಂದ ಆಟೋ, ಟ್ಯಾಕ್ಸಿ ಮತ್ತು ಮ್ಯಾಕ್ಸಿ ಕ್ಯಾಬ್ ಚಾಲಕರಿಗೆ ರೂ. 3000/-ಗಳ ಪರಿಹಾರ ಧನವನ್ನು ನೀಡಲು ಷರತ್ತಿಗೊಳಪಟ್ಟು ಮಂಜೂರಾತಿ ನೀಡಿ ಆದೇಶಿಸಿದ್ದು, ಸದರಿ ಪರಿಹಾರ ಧನವನ್ನು ಆನ್ಲೈನ್ ಮೂಲಕ “ಸೇವಾ ಸಿಂಧು” ವೆಬ್ ಪೋರ್ಟಲ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಲು ದಿನಾಂಕ: 27-05-2021ರಂದು ಬೆಳಿಗ್ಗೆ 11.00ರಿಂದ ಪ್ರಾರಂಭಿಸಲಾಗುತ್ತಿದೆ.
ಆದ್ದರಿಂದ, ಅರ್ಹ ಫಲಾನುಭಾವಿಗಳು ಅರ್ಜಿಗಳನ್ನು ಆನ್ಲೈನ್ ಮೂಲಕ “ಸೇವಾ ಸಿಂಧು” ಅಂತರಜಾಲದಲ್ಲಿ ಸಲ್ಲಿಸಿ ಪರಿಹಾರ ಧನವನ್ನು ಪಡೆದುಕೊಳ್ಳಲು ವಿನಂತಿಸಲಾಗಿದೆ ಹಾಗೂ ಸಲ್ಲಿಸಿದ ಅರ್ಹ ಫಲಾನುಭಾವಿಗಳಿಗೆ ಪರಿಹಾರ ಧನವನ್ನು ಅವರ ಖಾತೆಗೆ ನೇರವಾಗಿ ಡಿ.ಬಿ.ಟಿ ಮೂಲಕ ವರ್ಗಾಹಿಸಲಾಗುವುದು. ಆಟೋ, ಟ್ಯಾಕ್ಸಿ ಮತ್ತು ಮ್ಯಾಕ್ಸಿ ಕ್ಯಾಬ್ ಚಾಲಕರುಗಳು ಸದರಿ ಯೋಜನೆಯನ್ನು ಸದುಪಯೋಗ ಪಡೆದುಕೊಂಡು ಯೋಜನೆಯನ್ನು ಯಶ್ವಿಸಿಗೊಳಿಸಲು ಸಹ ತಿಳಿಸಲಾಗಿದೆ.