ಹಾಸನವನ್ನು ಬೆಂಗಳೂರಿನೊಂದಿಗೆ ಜೋಡಿಸುವ NH75ರಲ್ಲಿನ ಶಾಂತಿಗ್ರಾಮ ಮತ್ತು ಹಿರಿಸಾವೆ 2 ಟೋಲ್ಗಳ ನಡುವಿನ ಅಂತರ ಕೇವಲ 45KM ಹಾಗಾದರೆ ಕೇಂದ್ರ ಸಾರಿಗೆ ಸಚಿವ ಗಡ್ಕರಿ ಮಾತಿನಂತೆ ಕೇಂದ್ರ ಸರ್ಕಾರ ಕ್ರಮಕ್ಕೆ ಮುಂದಾದರೆ ಇವುಗಳಲ್ಲಿ ಒಂದು ಟೋಲ್ ವಿಲೀನ ಅಥವಾ ಒಂದು ಟೋಲ್ ಮುಚ್ಚುವ ನಿರೀಕ್ಷೆಗಳಿವೆ.
ರಾಷ್ಟ್ರೀಯ ಹೆದ್ದಾರಿಗಳಲ್ಲಿ 60KM ಅಂತರದೊಳಗಿರುವ ಹೆಚ್ಚುವರಿ ಟೋಲ್ಗಳನ್ನು(Toll) ಮುಂದಿನ ಮೂರು ತಿಂಗಳೊಳಗಾಗಿ ಮುಚ್ಚಲಾಗುವುದೆಂಬ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ(Nitin Gadkari) ಹೇಳಿಕೆ ಕಾರ್ಯರೂಪಕ್ಕೆ ಬಂದರೆ, ಹಾಸನದಲ್ಲಿ 2 ರಾಜ್ಯದ ಒಳಗೆ 28 ಟೋಲ್ಗೇಟ್ಗಳು ಸ್ಥಗಿತ ಅಥವಾ ವಿಲೀನಗೊಳ್ಳುವ ಸಾಧ್ಯತೆಗಳಿವೆ.
ಮಂಗಳೂರಿನ ಸುರತ್ಕಲ್ ಟೋಲ್ ಸ್ಥಗಿತ ಖಚಿತ ಎನ್ನಲಾಗಿದೆ (ತಲಪಾಡಿ ಹಾಗೂ ಸುರತ್ಕಲ್ ನಡುವೆ ಇರುವ ಅಂತರ 35KM, ಸುರತ್ಕಲ್ ಮತ್ತು ಹೆಜಮಾಡಿ ನಡುವೆ 18KM, ಇನ್ನು ಬ್ರಹ್ಮರಕೂಟ್ಲು ಹಾಗೂ ಸುರತ್ಕಲ್ ನಡುವಿನ ಅಂತರ 32KM ಉಡುಪಿ ಜಿಲ್ಲೆಯ ಹೆಜಮಾಡಿ ಮತ್ತು ಸಾಸ್ತಾನ ಟೋಲ್ಗಳ ನಡುವಿನ ಅಂತರವೂ 55KM ) ಏಕೆಂದರೆ : ಇವುಗಳಲ್ಲಿ ಈಗಾಗಲೇ ಬ್ರಹ್ಮರಕೂಟ್ಲು, ಸುರತ್ಕಲ್ ಮುಕ್ಕದ ಟೋಲ್ಗೇಟ್ಗಳು ವಿವಾದಕ್ಕೊಳಗಾಗಿದ್ದು, ಇವುಗಳನ್ನು ರದ್ದುಪಡಿಸುವಂತೆ ಆಗ್ರಹಿಸಿ ನಾಗರಿಕರು ಪ್ರತಿಭಟನೆ ನಡೆಸಿದ್ದಾರೆ. ಇತ್ತೀಚೆಗೆ ಮಂಗಳೂರಿಗೆ ಭೇಟಿ ನೀಡಿದ್ದ ಸಚಿವ ನಿತಿನ್ ಗಡ್ಕರಿ ಅವರು ಸುರತ್ಕಲ್ ಟೋಲ್ಗೇಟ್ ರದ್ದುಪಡಿಸುವ ಭರವಸೆ ನೀಡಿದ್ದು, ಹೀಗಾಗಿ ಈ ಟೋಲ್ಗೇಟ್ ಬಂದ್ ಆಗುವುದು ಬಹುತೇಕ ಖಚಿತ ಎನ್ನಬಹುದು
ಇನ್ನು ಹಿರಿಸಾವೆ ಬೆಳ್ಳೂರು ಕ್ರಾಸ್ ನಡುವೆ 18km ಮಾತ್ರ ., ಹಾಗಾದರೆ ಹಾಸನ – ಬೆಂಗಳೂರು ಮದ್ಯೆ ಬೆಳ್ಳೂರು – ಹಿರಿಸಾವೆ – ಶಾಂತಿ ಗ್ರಾಮ ಟೋಲ್ ಗಳಲ್ಲಿ ಯಾವುದೆ ಉಳಿಯಲಿದೆ , ಯಾವುದು ನೆನೆಪು ಮಾತ್ರ ಕಾದು ನೋಡಬೇಕಿದೆ .