ಹೇಮಾವತಿ ಸ್ವಚ್ಚಗೊಳಿಸಿದ ಟಾಟಾ ಕಾಫಿ ಕಂಪನಿ.

0

ಸಕಲೇಶಪುರ : ಇಲ್ಲಿನ ಟಾಟಾ ಕಾಫಿ ಎಸ್ಟೇಟ್‌ ಕಂಪನಿ ಕಾರ್ಮಿಕರ ಮೂಲಕ ಪಟ್ಟಣದ
ಹೇಮಾವತಿ ನದಿಯ ಸೇತುವೆಯ ಕೆಳಬಾಗದ ತ್ಯಾಜ್ಯವನ್ನು
ಸ್ವಚ್ಚಗೊಳಿಸಿದರು.

ಅಬ್ಬನ,ಕರಡಿಬೆಟ್ಟ ಹಾಗೂ ಗೂರ್ಗಳ್ಳಿ ಕಾಫಿ ಎಸ್ಟೇಟುಗಳ ಸುಮಾರು ೧೩೦ ಕಾರ್ಮಿಕರು ಈ ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ನದಿಯ ಎರಡು ಬದಿಯ ೫೦೦ ಮೀಟರಿನಷ್ಟು ದೂರದವರೇಗೂ ಸ್ವಚ್ಚಗೊಳಿಸಿ ಸಂಗ್ರಹಿಸಿದ ಸುಮಾರು ಐದು ಲೋಡು ಕಸವನ್ನು ಟ್ರಾಕ್ಟರುಗಳ ಮೂಲಕ ಪುರಸಭೆಯ ತ್ಯಾಜ್ಯ ಸಂಹ್ರಹಣಾ ಕೇಂದ್ರಕ್ಕೆ ಸಾಗಿಸಲಾಯಿತು.ಟಾಟಾ ಕಾಫಿ ಕಂಪನಿಯ ಹಿರಿಯ ವ್ಯವಸ್ಥಾಪಕರುಗಳಾದ ಮನು ಬೊಪ್ಪಯ್ಯ,ಸಿ.ಎಸ್.ಬೋಪಯ್ಯ ಹಾಗೂ ಕೆಂಪಯ್ಯ,ಪೃತ್ವಿರಾಜ್,ಚಂಗಪ್ಪ ಹಾಗೂ ಅಣ್ಣಪ್ಪ ಅಧಿಕಾರಿಗಳ ನೇತೃತ್ವದಲ್ಲಿ ಸ್ವಚ್ಚತಾ ಕಾರ್ಯ ನಡೆಸಲಾಗಿತ್ತು.

ಈ ಸಂದರ್ಭದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ಅಧಿಕಾರಿಗಳು ಟಾಟಾ ಸಮೂಹ ಸಂಸ್ಧೆಗಳು ಹಲವಾರು ಸಮಾಜಪರ ಹಾಗೂ ಪರಿಸರ ಸಂರಕ್ಷಣೆ ಕಾರ್ಯಕ್ರಮಗಳು ನಡೆಸುತ್ತಿದ್ದು, ನದೀ ಪಾತ್ರದಲ್ಲಿ ಕಸದ ರಾಶಿಗಳು ಎಸೆದು ಕಲುಷಿತವಾದ ನೀರು ಸಾರ್ವಜನಿಕರು ಬಳಸುವುದನ್ನು ತಪ್ಪಿಸಲು ಸಂಸ್ಧೆ ನದಿ ಸ್ವಚ್ಚತಾ ಕಾರ್ಯವನ್ನು ಹಮ್ಮಿಕ್ಕೊಂಡಿದೆ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಪುರಸಭಾ ಅಧ್ಯಕ್ಷ ಕಾಡಪ್ಪ, ಟಾಟಾ ಕಂಪನಿ ಅವರ ಸೇವೆಯನ್ನ ಶ್ಲಾಘಿಸಿದರು.
ಸಾರ್ವಜನಿಕರು ಕಸವನ್ನು ಹೊಳೆಗೆ ಎಸೆಯುವ ಬದಲು ಪುರಸಭಾ ವತಿಯಿಂದ ಏರ್ಪಡಿಸಿದ ಕಸ ಸಂಗ್ರಹ ವಾಹನಗಳಿಗೆ ಹಾಕುವ ಮೂಲಕ ಪರಿಸರ ಸಂರಕ್ಷಣೆಯಲ್ಲಿ ಸಹಕರಿಸುವಂತೆ ಮನವಿ ಮಾಡಿದರು.

LEAVE A REPLY

Please enter your comment!
Please enter your name here