ಶಿವಮೊಗ್ಗ ಜಿಲ್ಲೆ ಸಾಗರ ಪಟ್ಟಣದ 22ರ ಹರೆಯದ ಇವರು ಬಿಕಾಂ ಪದವೀಧರರು ಶ್ರವಣಬೆಳಗೊಳದ ಉತ್ತರಾಧಿಕಾರಿ

0

ಹಾಸನ / ಶಿವಮೊಗ್ಗ : ಆಗಮಶಾಸ್ತ್ರಿ ಇಂದ್ರಜೈನ್‌ ಅವರನ್ನು ಉತ್ತರಾಧಿಕಾರಿಯಾಗಿ ನೇಮಕ ಮಾಡುವ ನಿರ್ಧಾರ ಕೈಗೊಂಡ ನಂತರ ಅವರಿಗೆ ಜೈನ ಧರ್ಮದ ಕ್ಷುಲ್ಲಕ ದೀಕ್ಷೆ ನೀಡಲಾಗಿತ್ತು. ಕಳೆದ 20 ದಿನಗಳಿಂದಲೂ ಶ್ರವಣಬೆಳಗೊಳ ಮಠದಲ್ಲಿ ಆಗಮಶಾಸ್ತ್ರಿ ಇಂದ್ರಜೈನ್‌ ಅವರಿಗೆ ಮಠದ ಪರಂಪರೆ, ಆಚಾರ – ವಿಚಾರ, ಮಠದ ನಿರ್ವಹಣೆಯ ಬಗ್ಗೆ ಮಾಹಿತಿ ನೀಡಲಾಗಿ. ಶ್ರವಣಬೆಳಗೊಳ ಮಠ ಪೀಠಾರೋಹಣದೊಂದಿಗೆ ಆಗಮಶಾಸ್ತ್ರಿ ಇಂದ್ರಜೈನ್‌ ಅವರಿಗೆ ನೂತನ ನಾಮಾಂಕಿತವಾಗಲಿದ್ದು, ಪೀಠಾರೋಹಣದ ಧಾರ್ಮಿಕ ವಿಧಿವಿಧಾನಗಳು ಇನ್ನಷ್ಟೇ ಆಗಬೇಕಾಗಿದ್ದು . , ಶ್ರವಣಬೆಳಗೊಳ ಜೈನ ಮಠದ ಉತ್ತರಾಧಿಕಾರಿಯಾಗಿ

ಆಗಮಶಾಸ್ತ್ರಿ ಇಂದ್ರಜೈನ್‌ ಅವರು ನೇಮಕವಾಗಿದ್ದಾರೆ. ಶಿವಮೊಗ್ಗ ಜಿಲ್ಲೆ ಸಾಗರ ಪಟ್ಟಣದ 22ರ ಹರೆಯದ ಆಗಮಶಾಸ್ತ್ರಿ ಇಂದ್ರಜೈನ್‌ ಅವರು ಬಿಕಾಂ ಪದವೀಧರರು. , ಜೈನ ಮಠಕ್ಕೆ ಇಂದ್ರ ವಂಶಸ್ಥರೇ ಸ್ವಾಮೀಜಿಯರಾಗುವ ಪರಂಪರೆಯಿರುವುದರಿಂದ ಆ ಬಗ್ಗೆ

ವಿವಿಧ ಜೈನಮಠದ ಸ್ವಾಮೀಜಿಯವರು, ಶ್ರವಣಬೆಳ ಗೊಳದ ದಿಗಂಬರ ಜೈನ ಮಠದ ಟ್ರಸ್ಟಿಗಳು, ಜೈನ ಸಮುದಾಯದ ಮುಖಂಡರು ಚರ್ಚಿಸಿ ಆಗಮಶಾಸ್ತ್ರಿ ಇಂದ್ರಜೈನ್‌ ಅವರನ್ನು ಉತ್ತರಾಧಿಕಾರಿಯಾಗಿ ನೇಮಕ ಮಾಡುವ ನಿರ್ಧಾರ ಕೈಗೊಳ್ಳಲಾಗಿತ್ತು.

LEAVE A REPLY

Please enter your comment!
Please enter your name here