ಸಹಾಯ ಬೇಕಿದೆ ಅತಿಯಾದ ಕೀಲು ನೋವು ಇಂದು ಬ್ಲಡ್ ಕ್ಯಾನ್ಸರ್ ಗೆ ತಿರುಗಿ ಮದ್ಯಮ ವರ್ಗದ ಕುಟುಂಬ ಚಿಂತಾಗ್ರಾಸ್ಥವಾಗಿದೆ

0

ಕೀರ್ತಿ 10ನೇ ತರಗತಿಯ ವಿದ್ಯಾರ್ಥಿಯಾಗಿದ್ದು ಅತಿಯಾದ ಕಾಲುನೋವೆಂದು ಅದರ ಮೂಲವನ್ನು ಹುಡುಕುತ್ತಾ ರಕ್ತಪರೀಕ್ಷೆಗೆ ಒಳಪಟ್ಟಾಗ ಗೊತ್ತಾಗಿದ್ದು ಆಕೆಗೆ (ಅಕ್ಯೂಟ್ ಲಿಂಪೋಬ್ಲಾಸ್ಟಿಕ್ ಲ್ಯುಕೇಮಿಯಾ) ಬ್ಲಡ್ ಕ್ಯಾನ್ಸರ್ ಇದೆಯೆಂದು, ಪ್ರಸ್ತುತ ಮಣಿಪಾಲದ ಕಸ್ತೂರ್ ಬಾ ಆಸ್ಪತ್ರೆಯಲ್ಲಿ ಕೀಮೋತೆರಪಿಯನ್ನು ಪಡೆಯುತ್ತಿದ್ದು,(8 ತಿಂಗಳು ಆಸ್ಪತ್ರೆಯವರ ನಿಗಾದೊಂದಿಗೆ ಚಿಕಿತ್ಸೆ) ವೈದ್ಯರ ಪ್ರಕಾರ ಸುಮಾರು 12ಲಕ್ಷ ರೂ.ಗಳು ಖರ್ಚಾಗಬಹುದೆಂದು ತಿಳಿಸಿದ್ದಾರೆ.

ಗುಣಮುಖವಾಗಿ ಚೇತರಿಸಿಕೊಳ್ಳುತ್ತಿರುವ ಕೀರ್ತಿಯು ಸಹಾಯದ ನಿರೀಕ್ಷೆಯಲ್ಲಿದ್ದು ನಿಮ್ಮ ಸಹಾಯವನ್ನು ಆ ಮುಗ್ಧಜೀವ ಬಯಸಿದೆ, ಸಹಾಯ ಮಾಡಲು ನೀಡಿರುವ (ಅವರ ತಾಯಿಯ) ಅಕೌಂಟ್ ಖಾತೆಗೆ ಹಣವನ್ನು ವರ್ಗಾಯಿಸಬಹುದು.

ಕುಟುಂಬದ ಸದ್ಯದ ಪರಿಸ್ಥಿತಿ :
ಒಂದು ಸಂಕಷ್ಟದ ಪರಿಸ್ಥಿತಿಯಲ್ಲಿರುವ ಕುಟುಂಬ, ದಿನನಿತ್ಯದ ನಿರ್ವಹಣೆಗೆ ಕಷ್ಟಸಾಧ್ಯವಾದ ದುಡಿಮೆ, ಬೇಜವಾಬ್ದಾರಿಯಾದ ಕುಟುಂಬದ ಯಜಮಾನ, ಮಗಳ ವಿದ್ಯಾಭ್ಯಾಸ ದಿಂದ ಮುಂದೊಂದು ದಿನ ಜೀವನ ಸುಧಾರಿಸುವ ಭರವಸೆಯನ್ನಿಟ್ಟುಕೊಂಡಿದ್ದ ಆ ತಾಯಿಗೆ

ಅನಿರೀಕ್ಷಿತವಾಗಿ ವಿಧಿ ಈ ರೀತಿ ತನ್ನೊಡನೆ ಆಟವಾಡುತ್ತದೆಯೆಂಬುದನ್ನು  ಅರಗಿಸಿಕೊಳ್ಳಲಾರದ ಸ್ಥಿತಿ ಆದರೂ ವಾಸ್ತವದೊಡನೆ ಗುದ್ದಾಡಬೇಕಾದ ಪರಿಸ್ಥಿತಿ.
ಶೇರ್ ಮಾಡಿ ಒಂದು ಜೀವವನ್ನು ಉಳಿಸಲು ಕಾರಣರಾಗಿ,
ಸಹಾಯದ ನಿರೀಕ್ಷೆಯಲ್ಲಿ


ಅಕೌಂಟ್ ವಿವರ :
Account name ; Shivamma
Bank name : Corporation Bank (Union Bank of India)
Branch : Kandali
A/C No. 520101052780951
IFSC Code : UBIN0901903

LEAVE A REPLY

Please enter your comment!
Please enter your name here