ಶ್ರೀಲಂಕಾ / ಹಾಸನ : ಚಾರ್ವಿ ಅನಿಲಕುಮಾರ್ ಶ್ರೀಲಂಕಾದಲ್ಲಿ ನವೆಂಬರ್ 14 ರಿಂದ 22 ವರೆಗೆ ನಡೆದ ಕಾಮನ್ವೆಲ್ತ್ ಚೆಸ್ ಚಾಂಪಿಯನ್ಷಿಪ್ನಲ್ಲಿ ಭಾರತವನ್ನು ಪ್ರತಿನಿದಿಸಿದ್ದು , 8 ವರ್ಷದ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದಾರೆ. ಈ ಪದಕವನ್ನು ತನ್ನ ದೇಶಕ್ಕೆ ಜನರಿಗೆ ಅರ್ಪಿಸಿದ್ದಾರೆ . ಒಂದು ಸುತ್ತಿನಲ್ಲೂ ಸೋಲು ಇಲ್ಲದೆ ಪದಕ ಗೆದ್ದಿರುವುದಕೇ ಸಂತೋಷವಾಗಿದೆ. ಪದಕವನ್ನು
ಶ್ರೀಲಂಕಾ ಪ್ರಧಾನಮಂತ್ರಿಗಳು ಮತ್ತು ಅವರ ಕ್ಯಾಬಿನೆಟ್ ಮಂತ್ರಿಗಳು ನೀಡಿರುವುದು ತುಂಬಾ ಗೌರವದ ಸಂಕೇತವಾಗಿದೆ . ಮತೊಮ್ಮೆ ನಮ್ಮ ರಾಷ್ಟ್ರಗೀತೆಯನ್ನು ಮತ್ತು ರಾಷ್ಟ್ರ ಧ್ವಜವನ್ನು ಶ್ರೀಲಂಕಾದಲ್ಲಿ ಹಾರಿಸುವ ಸುವರ್ಣಾವಕಾಶ ದೊರಕಿರುವುದಕ್ಕೆ ಖುಷಿ ಪಟ್ಟಿದ್ದಾರೆ ಹಾಗೂ
ಇದಕು ಮೊದಲು ಜಾರ್ಜಿಯಾ ಮತ್ತು ಇಂಡೋನೇಷ್ಯಾ ದೇಶದಲ್ಲಿ ನಮ್ಮ ರಾಷ್ಟ್ರಗೀತೆಯನ್ನು ಮತ್ತು ರಾಷ್ಟ್ರ ಧ್ವಜವನ್ನು ಹಾರಿಸಿದರು. ಸೆಪ್ಟೆಂಬರ್ ನಲ್ಲಿ ಜಾರ್ಜಿಯಾದಲ್ಲಿ ನಡೆದ ವರ್ಲ್ಡ್ ಚೆಸ್ ಚಾಂಪಿಯನ್ಷಿಪ್ ಗೆದ್ದು ಭಾರತಕ್ಕೆ ಚಿನ್ನದ ಮತ್ತು ಅಕ್ಟೋಬರ್ ನಲ್ಲಿ ಇಂಡೋನೇಷ್ಯಾ ದಲ್ಲಿ ನಡೆದ ಏಶಿಯನ್ ಚೆಸ್ ಚಾಂಪಿಯನ್ಷಿಪ್ ನಲ್ಲಿ 5 ಚಿನ್ನ ಮತ್ತು 1 ಬೆಳ್ಳಿ ಗೆದಿದ್ದಾರೆ. ಈ ವರ್ಷ ಚಾರ್ವಿ ಪಾಲಿಗೆ ಸುವರ್ಣವಾಗಿದೆ.
ಚಾರ್ವಿ ಮುಂದೆ ಹುಡುಗರ ವಿಭಾಗದಲ್ಲೂ ವಿಶ್ವ ಚಾಂಪಿಯನ್ ಆಗುವ ಪ್ರಯತ್ನದಲ್ಲಿ ಇದ್ದಾರೆ. ಚಾರ್ವಿ ಮೂಲತ ಹಾಸನ ಜಿಲ್ಲೆಯವರು ಮತ್ತು 3 ನೇ ತರಗತಿಯನ್ನು ಕ್ಯಾಪಿಟಲ್ ಪಬ್ಲಿಕ್ ಸ್ಕೂಲ್ ಹೆಗೆಡೆನಗರ ಬೆಂಗಳೂರು ನಲ್ಲಿ ವ್ಯಾಸಂಗ ಮಾಡುತಿದ್ದಾರೆ.