ಹಾಸನ: ಜನತಾ ಕರ್ಪ್ಯೂನಿಂದ ಸಂಕಷ್ಟದಲ್ಲಿರುವ ನಿರ್ಗತಿಕರಿಗೆ ನಗರದ ಟಿಂಬರ್ ಬಾಬು ಮತ್ತು ತಂಡ ಊಟ ನೀಡುವ ಮೂಲಕ ಮಾನವೀಯತೆ ಮೆರೆಯುತ್ತಿದ್ದು ., ಮುಂದೆ ಎಲ್ಲಾದರೂ ನಿಮ್ಮ ಮುಂದೆ ಸಿಕ್ಕರೆ ಒಂದು ಸಲಾಮ್ ಹೊಡೆದು ಕೃತಜ್ಞತೆ ಹೇಳೋದ ಮರೆಯಬೇಡಿ , ನಿತ್ಯ 700ರಿಂದ 800 ಜನರಿಗೆ ಆಹಾರದ ಪೊಟ್ಟಣ ವಿತರಿಸುತ್ತಿರೋದು ತಿಳಿದುಬಂದಿದೆ
ಹಾಸನ ನಗರದ ನಿವಾಸಿಯಾದ ಬಾಬು ಮತ್ತು ತಂಡ ಮನೆಯಲ್ಲಿಯೇ ಆಹಾರದ ಪೊಟ್ಟಣ ಸಿದ್ಧಪಡಿಸಿಕೊಂಡು ತಮ್ಮ ದ್ವಿಚಕ್ರ ವಾಹನದಲ್ಲಿ ಇಡೀ ಹಾಸನ ನಗರ ಸಂಚರಿಸಿ, ಉಚಿತವಾಗಿ ಊಟ ನೀಡಿ ಸಾದ್ಯವಾದರೆ ಸಾಂತ್ವನ ಹೇಳಿ ಬರುತ್ತಿದೆ ಅಗತ್ಯ ಇದ್ದವರು ತೆಗೆದುಕೊಳ್ಳಿ ಎಂದು ಧ್ವನಿವರ್ಧಕದ ಮೂಲಕ ಸಹ ಮನವಿ ಮಾಡುತ್ತಿರೋದು ಇನ್ನೊಂದು ವಿಶೇಷ!!
ರಸ್ತೆ ಬದಿ ನಿರ್ಗತಿಕರು, ಹಸಿವಿನಿಂದ ಬಳಲುತ್ತಿರುವವರು. ಕಂಡರೆ ಅಲ್ಲಿ ವಾಹನ ನಿಲ್ಲಿಸಿ ಆಹಾರ ಪೊಟ್ಟಣ, ನೀರಿನ ಬಾಟಲಿ ನೀಡುವುದು , ಅವರ ಈ ಕಾರ್ಯದಲ್ಲಿ 15 ಜನರ ತಂಡ ಕಟ್ಟಿದ್ದು, ಕೆಲವರು ಅಡುಗೆ ಕಾರ್ಯದಲ್ಲಿ ತೊಡಗಿಸಿಕೊಂಡರೆ, ಮತ್ತೆ ಕೆಲವರು ಜನರಿಗೆ ಆಹಾರ ವಿತರಿಸುವ ಕೆಲಸ ಮಾಡುತ್ತಿದ್ದಾರೆ. ಆ 15 ಹಾಸನದ ಆಪದ್ಬಾಂದವರಿಗೆ / ಕೊರೋನಾ ವಾರಿಯರ್ಸ್ ಗಳಿಗೆ ದೇವರು ಅವರ ಕುಟುಂಬಕ್ಕೆ ಆಶೀರ್ವದಿಸಲಿ ಎಂದು ಹಾಸನ ಜನತೆಯ ಪರವಾಗಿ ಬೇಡುತ್ತೇವೆ
ಹಾಸನ ಟಿಂಬರ್ ಬಾಬು 9481593307 ಬೆಳಿಗ್ಗೆ ಉಪಾಹಾರ, ಮಧ್ಯಾಹ್ನ ಊಟ , ಸಂಜೆ ಟೀ, ಕಾಫಿ ಮತ್ತು ಬಿಸ್ಕೆಟ್ ವಿತರಣೆ
ಕರೆ ಮಾಡಿ ನಿಮ್ಮ ಸುತ್ತಮುತ್ತ ತುರ್ತು ಊಟದ ನೆರವಿನ ಅಗತ್ಯವಿದ್ದರೆ ಹೇಳಿ !!
ಬೆಳಿಗ್ಗೆ ಚಿತ್ರಾನ್ನ, ಪುಳಿಯೋಗರೆ, ಇಡ್ಲಿ, ಮಧ್ಯಾಹ್ನ ತರಕಾರಿ ಪುಲಾವ್, ಅನ್ನ ಸಾಂಬರ್ ಹಾಗೂ ಖುಷ್ಕ
• ” ಹತ್ತು ವರ್ಷಗಳಿಂದ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ. ಲಾಕ್‌ಡೌನ್‌ನಿಂದ ನಿರ್ಗತಿಕರು, ಕೂಲಿ ಕಾರ್ಮಿಕರು ಒಂದು ಹೊತ್ತಿನ ಊಟಕ್ಕೂ ಪರಿತಪಿಸುತ್ತಿದ್ದಾರೆ. ಕಳೆದ ವರ್ಷವೂ ಇದೇ ರೀತಿ ಹಸಿದವರಿಗೆ ಆಹಾರ ವಿತರಣೆ ಮಾಡಿದ್ದೇವೆ ” – ಟಿಂಬರ್ ಬಾಬು
#socialconcernhassan #lockdown2021 #covidupdateshassan