ಶ್ರೀ ಕೇಶವಮೂರ್ತಿ ಇವರು ಪ್ರಸ್ತುತ ಬಿ.ಇ.ಒ ಕಚೇರಿ ಮೂಡಿಗೆರೆ, ಚಿಕ್ಕಮಗಳೂರು ಜಿಲ್ಲೆ, ಇಲ್ಲಿ ಪತ್ರಾಂಕಿತ ವ್ಯವಸ್ಥಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಇವರು ಈ ಹಿಂದೆ ಉಪನಿರ್ದೇಶಕರ ಕಚೇರಿ, ಹಾಸನ ಇಲ್ಲಿ ಅಧೀಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದರು .ಪ್ರಸ್ತುತ ಇವರು ಕೋವಿಡ್ ಪೀಡಿತರಾಗಿ ಹಾಸನದ ರಾಜೀವ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ವೈದ್ಯರ ಸಲಹೆ ಮೇರೆಗೆ ಪ್ಲಾಸ್ಮ ಚಿಕಿತ್ಸೆ ಮಾಡಲು ಕೋವಿಡ್ ಕಾಯಿಲೆಯಿಂದ ಗುಣಮುಖರಾಗಿ ಮೂರು ತಿಂಗಳು ಆಗಿರುವ ವ್ಯಕ್ತಿಗಳಿಂದ ರಕ್ತ ಪಡೆದು ಪ್ಲಾಸ್ಮಾ ಚಿಕಿತ್ಸೆ ಮಾಡಿಸಬಹುದು (A+) ಎಂದು ವೈದ್ಯರು ಸಲಹೆ ನೀಡುತ್ತಾರೆ. ಇವರು ಉತ್ತಮ ಕೆಲಸಗಾರ ರಾಗಿದ್ದು ಸಹೃದಯಿ ನಡುವಳಿಕೆ ಉಳ್ಳವರಾಗಿದ್ದಾರೆ. ದಯಮಾಡಿ ಕೋವಿಡ್ ಬಂದು ಗುಣಮುಖರಾಗಿ ಮೂರು ತಿಂಗಳು ಆಗಿರುವಂತ ವ್ಯಕ್ತಿಗಳು ದಯಮಾಡಿ ಪ್ಲಾಸ್ಮಾ ದಾನಮಾಡಿದರೆ ಇವರು ಬದುಕುಳಿಯಬಹುದು. ಆದುದರಿಂದ ಅಂತಹ ವ್ಯಕ್ತಿಗಳು ತಮ್ಮ ಸಂಪರ್ಕದಲ್ಲಿದ್ದರೆ ಇವರಿಗೆ ರಕ್ತದಾನ ಮಾಡಿ ಅವರ ಜೀವ ಉಳಿಸಲು ನೆರವಾಗಬೇಕೆಂದು ಇವರ ಕುಟುಂಬದ ಪರವಾಗಿ ಮನವಿ ಮಾಡುತ್ತೇನೆ.ಈ ವಿಷಯವನ್ನು ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸ್ ಆ್ಯಪ್ ಗ್ರೂಪ್ ಗೆ ಹಾಕಲು ಮನವಿ ಮಾಡಿದೆ. ಜಯರಾಮ ಬಿ.ಎನ್. ಉಪನಿರ್ದೇಶಕರ ಕಚೇರಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಸನ. ಸಂಪರ್ಕಕ್ಕಾಗಿ ದೂರವಾಣಿ ಸಂಖ್ಯೆ:9980675556
Home COVID-19 Updates ಇವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ವೈದ್ಯರ ಸಲಹೆ ಮೇರೆಗೆ ಪ್ಲಾಸ್ಮ ಚಿಕಿತ್ಸೆ ಮಾಡಲು...