ಹಾಸನದಲ್ಲಿ ಸುಮಾರು 600 ಕ್ಕೂ ಹೆಚ್ಚು ಕುಟುಂಬಗಳಿಗೆ 1000 ರೂ ಬೆಲೆಯುಳ್ಳ ದಿನಸಿ ವಸ್ತುಗಳನ್ನು ಹೊಂದಿರುವ ರಮಝಾನ್ ಕಿಟ್’ಗಳನ್ನು ವಿತರಣೆ

0

ಹಾಸನ : (ಹಾಸನ್_ನ್ಯೂಸ್ !, ಜಮಾಅತೆ ಇಸ್ಲಾಮೀ ಹಿಂದ್ ಸಂಘಟನೆಯ ಹಾಸನ ಶಾಖೆಯ ವತಿಯಿಂದ ದಿನಾಂಕ 11-4-2021 ಭಾನುವಾರ ಹಾಸನದಲ್ಲಿ

ಸುಮಾರು 600 ಕ್ಕೂ ಹೆಚ್ಚು ಕುಟುಂಬಗಳಿಗೆ 1000 ರೂ ಬೆಲೆಯುಳ್ಳ ದಿನಸಿ ವಸ್ತುಗಳನ್ನು ಹೊಂದಿರುವ ರಮಝಾನ್ ಕಿಟ್’ಗಳನ್ನು ವಿತರಿಸಲಾಯಿತು.

ಜಮಾಅತೆ ಇಸ್ಲಾಮೀ ಹಿಂದ್ ಹಾಸನದ ಸ್ಥಾನೀಯ ಅಧ್ಯಕ್ಷರಾದ ಸದ್ರುಲ್ಲಾ ಖಾನ್, ಸಾಲಿಡಾರಿಟಿ ಯೂಥ್ ಮೂಮೆಂಟ್ ಹಾಸನದ ಅಧ್ಯಕ್ಷರಾದ ಫರೀದ್ ಅಹ್ಮದ್ ಖಾನ್,

ಹೆಚ್.ಆರ್.ಎಸ್ ಹಾಸನದ ಗ್ರೂಪ್ ಲೀಡರ್ ಆದ ತನ್ವೀರ್ ಪಾಷ ಮತ್ತು ಕಾರ್ಯಕರ್ತರು ಹಾಜರಿದ್ದರು.


ಈ ಪುಣ್ಯ ಕಾರ್ಯದಲ್ಲಿ ತಮ್ಮ ತನು, ಮನ, ಧನದಿಂದ ಸಹಕರಿಸಿದ ಎಲ್ಲಾ ಬಾಂಧವರಿಗೆ ಅಲ್ಲಾಹನು ಇಹ ಮತ್ತು ಪರಲೋಕದಲ್ಲಿ ಉತ್ತಮ ಪ್ರತಿಫಲವನ್ನು ನೀಡಲಿ. ಆಮೀನ್. ಎಂದು ಸಂಘಟನಾ ಅಧ್ಯಕ್ಷ ರು ಸಂದೇಶ ಈ ಸಮಯದಲ್ಲಿ ಸಾರಿದರು!!

https://youtube.com/shorts/tBkpbbIqXNM?feature=share

LEAVE A REPLY

Please enter your comment!
Please enter your name here