ಛತ್ತೀಸ್ಗಢದ ರಾಯಪುರದಲ್ಲಿ ನಡೆದ MRF ಸೂಪರ್ ಕ್ರಾಸಿಂಗ್ ಸ್ಪರ್ಧೆಯಲ್ಲಿ ಹಾಸನ ವೇಗದೂತ ಅರುಣ್ ಮಿಂಚಿಂಗ್

0

ನಮ್ಮ ಹಾಸನ ಜಿಲ್ಲೆಯ ವೇಗದೂತ ಖ್ಯಾತಿಯ ಅರುಣ್ ಬೈಕ್ ರೇಸ್ ನಲ್ಲಿ ಮೊದಲ ಹಾಗೂ ತೃತೀಯ ಸ್ಥಾನ ಎರಡು ವಿಭಾಗದಲ್ಲಿ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಸದ್ಯ ಅರುಣ್ ತುಮಕೂರಿನ VMW (ವಿದ್ಯಾ ಮೋಟಾರ್ಸ್) ಪ್ರಾಯೋಜಕತ್ವ ದಲ್ಲಿ ತಮ್ಮ ಕ್ರೀಡಾ ವೃತ್ತಿ ತರಬೇತಿ ಹಾಗೂ ರೇಸ್ ಗಳಲ್ಲಿ ಭಾಗವಹಿಸುತ್ತಿದ್ದು ., ಅರುಣ್ ಮೂಲತಃ ಹಾಸನ ಜಿಲ್ಲೆಯ ಹಾಸನ ತಾಲ್ಲೂಕಿನ ವಿಜಯನಗರ ದವರು . ಮೊನ್ನೆ ಭಾನುವಾರ 06.03.2022 ಡೇ ನೈಟ್ ‘ ರಾಯಪುರದಲ್ಲಿ ‘ MRF ಸೂಪರ್ ಕ್ರಾಸಿಂಗ್ ಸ್ಪರ್ಧೆಯಲ್ಲಿ ನಡೆದ ಎರಡು ವಿಭಾಗದಲ್ಲಿ ಕ್ರಮವಾಗಿ ಮೊದಲ ಹಾಗೂ‌ ತೃತೀಯ ಸ್ಥಾನ ಪಡೆದು ಭೀಗಿದ್ದಾರೆ .,

ಈ ಸಂದರ್ಭದಲ್ಲಿ ಅವರು ತಮ್ಮ ದ್ವಿಚಕ್ರ ವಾಹನದ ತಾಂತ್ರಿಕ ಸಲಹೆಗಾರ ಆಸೀಫ್ ರನ್ನು ನೆನೆದರು .,‌ ತಮ್ಮ ಈ ವೃತ್ತಿ ಜೀವನದಲ್ಲಿ ಇನ್ನಷ್ಟು ಸಾಧನೆ ಮಾಡಲೆಂದು ಹಾಸನ ಜನತೆಯ ಪರವಾಗಿ ಅಭಿನಂದಿಸೋಣ .

Congratulations ಅರುಣ್

sportanewshassan hassansportanews vidyamotars hassan tumkur raipur mrfsupercrossing

LEAVE A REPLY

Please enter your comment!
Please enter your name here