ಇವನ ಈ ಸಾಧನೆ ಹಾಸನದ ಅಥ್ಲೆಟಿಕ್ಸ್ ಸಾಧಕರಿಗೆ ಅತೀವ ಪ್ರೇರಣೆ

0

ಬಿಲಾಸ್ ಪುರ , ಛತ್ತೀಸ್ ಗಡ್ ನಲ್ಲಿ ನಡೆದ
ರಾಷ್ಟ್ರೀಯ ಯು-೨೩ (೨೩ ವರ್ಷಗಳ ಒಳಗಿನ) ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ ನಲ್ಲಿ
ಹಾಸನದ ಯುವಕ ಶ್ರೀ ಪುರುಷೋತ್ತಮ ಅವರು ದೂರಜಿಗಿತ ಸ್ಪರ್ಧೆಯಲ್ಲಿ ೭.೫೪ ಮೀಟರ್ ಹಾರಿ ಮೂರನೆಯ ಸ್ಥಾನ ಪಡೆದಿರುವರು.ಅವರು ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿ.
ಇದು

ಹಾಸನದ ಯುವಕನೊಬ್ಬನ ಅದ್ಭುತ ಸಾಧನೆ. ಬಡ ಕುಟುಂಬದ ಹಿನ್ನೆಲೆಯಲ್ಲಿ ( ತಂದೆ ಒಬ್ಬ ಪೆಯಿಂಟರ್) ಬಂದ ಈ ಹುಡುಗನ ಪರಿಶ್ರಮ, ಧ್ರಡತೆ ಮತ್ತು ಮನೋನಿಶ್ಚಲತೆ ಕೊಂಡಾಡುವಂತಹದು. ಇವನ ಈ ಸಾಧನೆ

ಹಾಸನದ ಅಥ್ಲೆಟಿಕ್ಸ್ ಸಾಧಕರಿಗೆ ಅತೀವ ಪ್ರೇರಣೆ ನೀಡಿದೆ. ಯಾವ ಸರಿಯಾದ ಸೌಕರ್ಯ ಇಲ್ಲದೆಯೂ ಈ ಸಾಧನೆ ಮಾಡಿದ ಇವನ ಪರಿಶ್ರಮ ಪ್ರಶಂಸನೀಯ. ಇವನ ಸಾಧನೆಯ ಹಿಂದೆ ಕೋಚ್ ಶ್ರೀ ಪ್ರಸನ್ನರವರ ಮಾರ್ಗದರ್ಶನ ಮತ್ತು ಶ್ರೀ ತೇಜ್ ಫೌಂಡೇಶನ್ ನವರ ಬೆಂಬಲ ಇದೆ.
ಅವನು ಚಿನ್ನದ ದೂರಕ್ಕಿಂತ ಕೇವಲ

2ಸೆ.ಮೀ. ಕಡಿಮೆ ಮತ್ತು ಅವನ ಜೀವನದ ಅತ್ಯುತ್ತಮ ದಾಖಲೆ ಸಾಧನೆ ಮಾಡಿರುತ್ತಾನೆ.
ಉತ್ತಮ ಪ್ರೋತ್ಸಾಹ ದೊರೆತಲ್ಲಿ ಈ ಯುವಕ ಭಾರತಕ್ಕೆ ಪದಕ ತರುವ ಪ್ರತಿಭೆ ಹೊಂದಿರುತ್ತಾನೆ.
ಹಾಸನಕ್ಕೆ ಕೀರ್ತಿ ತಂದ ಈ ಯುವಕನ ಪ್ರಯತ್ನ ಗಳಿಗೆ ಹಾಸನದ ಜನತೆಯ ಬೆಂಬಲದ ಅಗತ್ಯ ತುಂಬಾ ಇದೆ. ಅವನ ಕ್ರೀಡಾ ಜೀವನ ಇನ್ನೂ ಉತ್ತುಂಗಕ್ಕೇರಲೆಂದು ಹಾರೈಸೋಣ.

LEAVE A REPLY

Please enter your comment!
Please enter your name here