ಹಾಸನ: ನಗರದ ಸಾಲಗಾಮೆ ರಸ್ತೆ ಬಳಿ ಇರುವ ಮಲೆನಾಡು ತಾಂತ್ರಿಕ ಕಾಲೇಜು ಆವರಣದಲ್ಲಿರುವ ಆಡಿಟೋರಿಯಂನಲ್ಲಿ ನ್ಯಾಷನಲ್ ಶೋಟೋಕಾನ್ ಕರಾಟೆ ಮಲ್ಟಿಪರ್ಪಸ್ ಫೆಡರೇಷನ್ ವತಿಯಿಂದ ಜನವರಿ 7 ಮತ್ತು 8 ರಂದು ಎರಡು ದಿನಗಳ ಕಾಲ ನಾಲ್ಕನೇ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದು ಎನ್.ಎಸ್.ಕೆ.ಎಂ.ಎಫ್. ತಾಂತ್ರಿಕ ತರಬೇತುದಾರರಾದ ತೇಜಸ್ವಿ ಬಿಎಸ್ ತಿಳಿಸಿದರು
ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ನಮ್ಮ ಕರಾಟೆ ಸ್ಪರ್ದೆಯ ಮುಖ್ಯ ಉದ್ದೇಶಗಳೆನೆಂದರೇ ಗ್ರಾಮೀಣ ಪ್ರದೇಶದ ಕ್ರೀಡಾಪಟುಗಳ ಉಪಯೋಗಕ್ಕೆ ಹಾಗೂ ನಮ್ಮ ರಾಜ್ಯದ ಹಲವಾರು ಜಿಲ್ಲೆಗಳ ಕರಾಟೆ ಪಟುಗಳಿಗೆ ಉಪಯುಕ್ತವಾಗುವ ನಿಟ್ಟಿನಲ್ಲಿ ನಮ್ಮ ಸಂಸ್ಥೆಯು 2013 ರಿಂದ ಇಲ್ಲಿಯವರೆಗೆ
ಹಲವಾರು ಕರಾಟೆಯ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ. ನಮ್ಮ ಜಿಲ್ಲೆಯ ಮಕ್ಕಳು ಹೊರ ರಾಜ್ಯಗಳು ನಡೆಸುವ ಕ್ರೀಡೆಗಳಿಗೆ ಭಾಗವಹಿಸಲು ನಾನಾ ಕಾರಣಗಳಿಂದ ಸಂಪೂರ್ಣವಾಗಿ ಸಾಧ್ಯವಾಗುವುದಿಲ್ಲ ಆದ ಕಾರಣ ನಾವು ನಮ್ಮ ಸಂಸ್ಥೆಯ ಮೂಲಕ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಹಾಗೂ ನಗರ ವಾಸಿ ಮಕ್ಕಳಿಗೆ ರಾಷ್ಟ್ರಮಟ್ಟದ ಕ್ರೀಡೆಯೆಂದರೆ ಹೀಗೆ ಇರುತ್ತದೆ ಎಂದು
ತಿಳಿಸುವ ಉದ್ದೇಶದಿಂದ ಆಯೋಜಿಸಿದ್ದೇವೆ ಎಂದರು. ರಾಷ್ಟ್ರಮಟ್ಟದ ಕರಾಟೆ ಕ್ರೀಡಾಕೂಟಕ್ಕೆ ವಿವಿಧ ರಾಜ್ಯಗಳಾದ ಆಂಧ್ರ ಪ್ರದೇಶದಿಂದ ಒಟ್ಟು 5 ತಂಡಗಳು, ತೆಲಂಗಾಣದಿಂದ 2 ತಂಡಗಳು, ಮಹಾರಾಷ್ಟ್ರದಿಂದ 2 ತಂಡಗಳು, ಪಂಚಾಯಿಂದ 1 ತಂಡ, ಉತ್ತರ ಪ್ರದೇಶದಿಂದ 1 ತಂಡ, ಕೇರಳದಿಂದ 1 ತಂಡ, ತಮಿಳುನಾಡಿನಿಂದ | ತಂಡ ಹಾಗೂ ಕರ್ನಾಟಕದಿಂದ 10 ತಂಡಗಳು ಭಾಗವಹಿಸಲಿದೆ. ಸಂಸ್ಥೆಯ ನಿಯಮಗಳಿಗೆ ಬದ್ಧರಾಗಿ
ಪಾಲ್ಗೊಳ್ಳುವಂತೆ ಇದೆ ವೇಳೆ ಮನವಿ ಮಾಡಿದರು. ನ್ಯಾಷನಲ್ ಶೋಟೋಕಾನ್ ಕರಾಟೆ ಮಲ್ಟಿಪರ್ಪಸ್ ಫೆಡರೇಷನ್ ನ ತರಬೇತುದಾರ ಹೇಮಂತ್, ಅಭಿವೃದ್ಧಿ ಬೋಧಕರು ಹೆಚ್.ಕೆ. ಶಿವಕುಮಾರ್, ಸೈಟ್ ಅಂಡ್ ಗೈಡ್ಸ್ ಜಿಲ್ಲಾ ಜಂತಿ ಕಾರ್ಯದರ್ಶಿ ಹೆಚ್.ಜಿ. ಕಾಂಚನಮಾಲ, ಪಿ.ವಿ. ವಂದನ, ಬಾಲಕಿಯರ ತಾಂತ್ರಿಕ ತರಬೇತುದಾರರಾದ ಸೌಮ್ಯಶ್ರೀ ಇತರರು ಉಪಸ್ಥಿತರಿದ್ದರು.