ಹಾಸನ ಮೂಲದ ಕಲಾ ಪ್ರತಿಭೆ ಸುಪ್ರಿಯಾ ಅವರು ಬಿಡಿಸಿದ ಚಿತ್ರಕಲೆ ಮೆಚ್ಚಿದ ಹಾಲಿವುಡ್ !

0

ಹಾಸನ : (ಹಾಸನ್_ನ್ಯೂಸ್) !, ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಕಲಾ ಪ್ರತಿಭೆ ಈ ನಮ್ಮ ಸುಪ್ರಿಯಾ ನ, ಹಾಲಿವುಡ್ ನ ” ಆಂಗ್ರೀ ಬರ್ಡ್ಸ್ ” ಗೇಮ್ ಹಾಗೂ ಸಿನಿಮಾ  ಸರಣಿಯ ವಿವಿ, ಸ್ಟ್ಯಾಮ್ ಸ್ಯಾಮ್ ಮತ್ತು ಝೋ ಪಕ್ಷಿಗಳು ಯಾರಿಗೆ ಗೊತ್ತಿಲ್ಲ ಹೇಳಿ. ಪ್ರಪಂಚದಾದ್ಯಂತ ಜನಪ್ರಿಯ ಆಗಿರುವ ಆಂಗ್ರೀ ಬರ್ಡ್ಸ್ ಸರಣಿಯ ಸಿನಿಮಾದಲ್ಲಿ ಈ (ಸುಪ್ರಿಯಾ ಬಿಡಿಸಿರುವ ಚಿತ್ರಗಳು) ಮೂರು ಪಕ್ಷಿಗಳದ್ದೇ ಕಾರುಬಾರು.

ಅಂದಹಾಗೆ ಈ ಆಂಗ್ರಿ ಬರ್ಡ್ಸ್ ಸಿನಿಮಾ ಎರಡು ಅವತರಿಣಿಕೆಯಲ್ಲಿ ಬಿಡುಗಡೆಯಾಗಿ ವಿಶ್ವದಾದ್ಯಂತ ಪ್ರೇಕ್ಷಕರನ್ನ ರಂಜಿಸಿ ಲಕ್ಷಾಂತರ ಅಭಿಮಾನಿ ಬಳಗ ಹೊಂದಿದೆ , 2009 ರಲ್ಲಿ ರೋಮಿಯೊ ಎಂಟರ್ಟೈನ್ಮೆಂಟ್ ವತಿಯಿಂದ  ಪಜ಼ಲ್ ವಿಡಿಯೋ ಗೇಮ್ ನ ರೆಕ್ಕೆಗಳಿಲ್ಲದ ಮಿನಿಯೇಚರ್ ಹಕ್ಕಿಗಳ ಜನಪ್ರಿಯತೆ ಆಂಗ್ರಿ ಬರ್ಡ್ಸ್ ಆನಿಮೇಶನ್ ಸಿನಿಮಾ ಆಗಲು ಪ್ರೇರಣೆಯಾಗಿತ್ತು ,

ಹಾಸನ ಮೂಲದ ಸುಪ್ರಿಯಾ ಎಂಬ ಚಿತ್ರ ಕಲಾವಿದೆ ಬಿಡಿಸಿದ ರೆಕ್ಕೆಗಳಿಲ್ಲದ ವಿವಿ, ಸ್ಟಾಮ್ ಸ್ಯಾಮ್ ಮತ್ತು ರೋ ಆನಿಮೇಟೆಡ್ ಪಕ್ಷಿಗಳ ಚಿತ್ರವನ್ನ ತಮ್ಮ ಇನ್ಸಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದರು. ಇದಕ್ಕೆ ಆಂಗ್ರಿ ಬರ್ಡ್ಸ್ ಸಿನಿಮಾದ ಖ್ಯಾತ ನಿರ್ಮಾಪಕರಾದ ಜಾನ್ ಕೋಹನ್ ಸ್ವತಃ ಮೆಚ್ಚುಗೆ ವ್ಯಕ್ತಪಡಿಸಿದ್ದು ಕಮೆಂಟ್ ಕೂಡ ಮಾಡಿ ಶುಭ ಹಾರೈಸಿದ್ದಾರೆ ., 

ಸುಪ್ರಿಯಾ ಕಲಾ ಕುಂಚದಲ್ಲಿ ಮೂಡಿಬಂದಿರುವ ಇತರ ಕಲೆಗಳಿಗೆ ಮನ್ನಣೆ ಸಿಗಬೇಕಿದೆ ., ನಮ್ಮ ಚಲನಚಿತ್ರ ಕಲಾವಿದರು ಗುರ್ತಿಸಿ ., ಆಂಗ್ರೀ ಬರ್ಡ್ ನಂತರ ಇತರ ಹೊಸ ಸಿನಿಮಾ ಸೀರಿಸ್ ಗೆ ಇಂತಹ ಎಲೆಮರಿಕಾಯಿ ಪ್ರತಿಭೆಗಳ ಗುರ್ತಿಸಿ ,

ಕೆಲಸ ತೆಗೆಸಬಹುದಾಗಿದೆ ., ವಿವಿ, ಸ್ಯಾಮ್ ಸ್ಯಾಮ್ ಮತ್ತು ರೋ ಪಕ್ಷಿಗಳ ಚಿತ್ರಕಲೆಗೆ ಸ್ವತಃ ಹಾಲಿವುಡ್ ನಿರ್ಮಾಪಕ ರಿಂದಲೇ ಮೆಚ್ಚುಗೆ ವ್ಯಕ್ತವಾಗಿರುವುದು  ಪ್ರಶಂಸನೀಯ !!

LEAVE A REPLY

Please enter your comment!
Please enter your name here