ವಿಶೇಷ ಮೀಸಲು ಪೊಲೀಸ್ ಕಾನ್ಸ್‍ಟೇಬಲ್ (ಕೆಎಸ್‍ಆರ್‍ಪಿ/ಐಆರ್‍ಬಿ) ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳ ಆಯ್ಕೆ ಹಾಸನ ಜಿಲ್ಲಾ ಕ್ರಿಡಾಂಗಣದಲ್ಲಿ ಇದೇ ಜ.29.30 ರಂದು !!

0

ಹಾಸನ ಜ.26 (ಹಾಸನ್_ನ್ಯೂಸ್ !, ವಿಶೇಷ ಮೀಸಲು ಪೊಲೀಸ್ ಕಾನ್ಸ್‍ಟೇಬಲ್ (ಕೆಎಸ್‍ಆರ್‍ಪಿ/ಐಆರ್‍ಬಿ) ನೇಮಕಾತಿ-2020ರ ಸಂಬಂಧ 1300  ಅರ್ಹ ಅಭ್ಯರ್ಥಿಗಳಲ್ಲಿ 650 ಅರ್ಹ ಅಭ್ಯರ್ಥಿಗಳಿಗೆ ಜ.29 ರಂದು ಮತ್ತು 650 ಅರ್ಹ ಅಭ್ಯರ್ಥಿಗಳಿಗೆ ಮತ್ತು  ಜ.30 ರಂದು ಬೆಳಗ್ಗೆ 7 ಗಂಟೆಯಿಂದ ಸಹಿಷ್ಣುತೆ ಮತ್ತು ದೇಹದಾಢ್ರ್ಯತೆ ಪರೀಕ್ಷೆಯನ್ನು ಹಾಸನಾಂಬ ಜಿಲ್ಲಾ ಕ್ರೀಡಾಂಗಣದಲ್ಲಿ  ನಡೆಸಲಾಗುವುದು.

ಸಹಿಷ್ಣುತೆ ಮತ್ತು ದೇಹದಾಡ್ರ್ಯತೆ ಪರೀಕ್ಷೆಗೆ ಅರ್ಹ ಅಭ್ಯರ್ಥಿಗಳು ತಮ್ಮ ಕರೆಪತ್ರಗಳನ್ನು ಅಫಿಷಿಯಲ್ ವೆಬ್‍ಸೈಟ್ ಮುಖಾಂತರ ಪಡೆದುಕೊಳ್ಳಬೇಕು .ವಿಶೇಷ ಮೀಸಲು ಪೊಲೀಸ್ ಕಾನ್ಸ್‍ಟೇಬಲ್ (ಕೆಎಸ್‍ಆರ್‍ಪಿ/ಐಆರ್‍ಬಿ) ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಹಾಸನಾಂಬ ಜಿಲ್ಲಾ ಕ್ರೀಡಾಂಗಣದಲ್ಲಿ ಜ.29 ಮತ್ತು 30 ರಂದು ಬೆಳಗ್ಗೆ 7 ಗಂಟೆಗೆ ಸರಿಯಾಗಿ ಸಹಿಷ್ಣುತೆ ಮತ್ತು ದೇಹದಾಡ್ರ್ಯತೆ ಪರೀಕ್ಷೆಗೆ ತಪ್ಪದೇ ಹಾಜರಾಗಬೇಕು.
        
     ಅರ್ಹ ಅಭ್ಯರ್ಥಿಗಳು ತಮ್ಮ ಕರೆಪತ್ರದೊಂದಿಗೆ ಅರ್ಜಿ ಸಲ್ಲಿಸಿದ ಸಮಯದಲ್ಲಿ ನೀಡಿರುವ ಎಲ್ಲಾ ದಾಖಲಾತಿಗಳ (ಎಸ್‍ಎಸ್‍ಎಲ್‍ಸಿ ಅಂಕಪಟ್ಟಿ/ ಗ್ರಾಮೀಣ/ ಕನ್ನಡ/ ಪಿಡಿಪಿ / ಮಾಜಿ ಸೈನಿಕ ಹಾಗೂ ಇತರೆ) ದೃಢೀಕೃತ ಪ್ರತಿಗಳನ್ನು ಹಾಗೂ ಅಧಿಕೃತ ಫೋಟೋ ಗುರುತಿನ ದಾಖಲಾತಿಗಳಲ್ಲಿ ಯಾವುದಾದರೊಂದು ದಾಖಲಾತಿಯನ್ನು ಪರಿಶೀಲನೆ ಸಲುವಾಗಿ ತಪ್ಪದೇ ಹಾಜರುಪಡಿಸಬೇಕು – ಜಿಲ್ಲಾ ಪೊಲೀಸ್ ಅಧೀಕ್ಷಕರು

LEAVE A REPLY

Please enter your comment!
Please enter your name here