ಯುವಕರು ಮತದಾನ ಪಟ್ಟಿಗೆ‌ ನಿಮ್ಮ ಹೆಸರು ನಮೂದಿಸಿ

0

ಹಾಸನ ಜ.25( ಹಾಸನ್_ನ್ಯೂಸ್ !,  ಮತದಾನ ಒಂದು ಅಸ್ತ್ರವಿದ್ದಂತೆ ಸರ್ಕಾರವನ್ನೇ ಬದಲಾಯಿಸುವ ಶಕ್ತಿ ಚುನಾವಣೆಗಿದೆ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಹೇಳಿದರು.


ಜಿಲ್ಲಾಡಳಿತದ ವತಿಯಿಂದ ಸರ್ಕಾರಿ ಕಲಾ ಕಾಲೇಜಿನಲ್ಲಿಂದು ಏರ್ಪಡಿಸಿದ್ದ ರಾಷ್ಟ್ರೀಯ ಮತದಾನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮತದಾನದಲ್ಲಿ ಯುವಕರು ಹೆಚ್ಚಾಗಿ ಪಾಲ್ಗೊಳ್ಳಬೇಕು ಹಾಗೂ ಚುನಾವಣೆಗಳಲ್ಲಿ ಯಾವುದೇ ರೀತಿಯ ಹಸ್ತಕ್ಷೇಪವಾಗದಂತೆ ಸಂವಿಧಾನಾತ್ಮಕವಾಗಿ ಮತದಾನ ಮಾಡಬೇಕೆಂದರು.
ನೂರಕ್ಕೆ ನೂರರಷ್ಟು ಮತದಾನವಾಗಬೇಕು ಈ ನಿಟ್ಟಿನಲ್ಲಿ ಎಲ್ಲಾ ಯುವಕರು ಮತದಾರರ ಪಟ್ಟಗೆ ಹೆಸರನ್ನು ನೊಂದಾಯಿಸಿ ಹಾಗೂ ಚುನಾವಣೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು

ಯಾವುದೇ ರೀತಿಯ ಆಸೆ ಆಮಿಷಗಳಿಗೆ ಒಳಗಾಗದಂತೆ ಮತ ಚಲಾಯಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಣಾಧಿಕಾರಿ ಡಿ. ಭಾರತಿಯವರು ಮಾತನಾಡಿ ರಾಷ್ಟ್ರೀಯ ಮತದಾನ ದಿನಾಚರಣೆ ಬಹಳ ವಿಶಿಷ್ಟವಾದ್ದು, ನಗರ ಪ್ರದೇಶಗಳಲ್ಲಿ ಮತದಾನ ಕಡಿಮೆ ಪ್ರಮಾಣದಲ್ಲಿದ್ದು ಗ್ರಾಮಾಂತರ ಪ್ರದೇಶಗಳಲ್ಲಿ ಸಾಕ್ಷರತೆ ಕಡಿಮೆಯಿದ್ದರೂ ಸಹ ಮತದಾನ ಪ್ರಮಾಣ ಹೆಚ್ಚಿರುತ್ತದೆ ಎಂದರು.
ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಹಾಗೂ ಜವಾಬ್ದಾರಿಯುತ ಸರ್ಕಾರ ಜಾರಿಗೆ ಬರಬೇಕಾದರೆ ಯುವಕರ ಪಾತ್ರ ಹಾಗೂ ಬೆಂಬಲದಿಂದ ಸಾದ್ಯ ಎಂದು ಹೇಳಿದರು.


  ಪ್ರಜಾಪ್ರಭುತ್ವ ಬೇರನ್ನು ಗಟ್ಟಿಗೊಳಿಸಬೇಕು ಉತ್ತಮರನ್ನು ಆಯ್ಕೆ ಮಾಡುವುದಲ್ಲದೆ ಹೊಸ ಹೊಸ ಮುಖಗಳು ಅಧಿಕಾರ ಚುಕ್ಕಾಣಿಯನ್ನು ಹಿಡಿಯುವಂತಾಗಬೇಕು ಮತ್ತು ಮತದಾನ ಬಗ್ಗೆ ಪ್ರೇರಣೆ ಪಡೆದುಕೊಂಡು ನಿಮ್ಮ ಸುತ್ತ ಮುತ್ತಲಿನವರಿಗೂ ಪ್ರೇರಣೆ ಹಾಗೂ ಅರಿವನ್ನು ಮೂಡಿಸುವುದು ಯುವಕರ ಜವಬ್ದಾರಿಯಾಗಿದೆ ಎಂದು ಡಿ.ಭಾರತಿ ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಕವಿತ ರಾಜಾರಾಂ, ರವರು ರಾಷ್ಟ್ರೀಯ ಮತದಾನ ಚುನಾವಣೆಯ ಬಗ್ಗೆ ಪ್ರತಿಜ್ಞಾವಿಧಿ ಬೋಧಿಸಿದರು.


ಉಪವಿಭಾಗಾಧಿಕಾರಿ ಬಿ.ಎ. ಜಗದೀಶ್ ಪ್ರಾಸ್ತವಿಕವಾಗಿ ಮಾತನಾಡಿ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಯಾದ ನಂತರ ಚುನಾವಣಾ ಆಯೋಗ ರಚನೆಗೊಂಡ ದಿನವನ್ನು ರಾಷ್ಟ್ರೀಯ ಮತದಾರರ ದಿನವನ್ನಾಗಿ  ಆಚರಿಸಲಾಗುತ್ತಿದೆ ಎಂದರು ಹಾಗೂ ಮತದಾನಕ್ಕೆ ಹೆಚ್ಚಿನ ಬೆಂಬಲವನ್ನು ನೀಡಬೇಕು ಜೊತೆಗೆ ಮತದಾರರಿಗೆ ಶಕ್ತಿ ತುಂಬುವ ಹಾಗೂ ಮತದಾನ ಪ್ರಕ್ರಿಯೆಯಲ್ಲಿ ಸಂಪೂರ್ಣವಾಗಿ ಪಾಲ್ಗೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ವಿವಿಧ ಸ್ಪರ್ದೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು ಹಾಗೂ ಯುವ ಮತದಾರರಿಗೆ ಮತದಾನ ಗುರುತಿನ ಚೀಟಿಯನ್ನು ವಿತರಣೆ ಮಾಡಲಾಯಿತು,

ಅಲ್ಲದೆ ಉತ್ತಮವಾಗಿ ಸೇವೆ ಸಲ್ಲಿಸಿದ ಬೂತ್ ಹಂತದ ಅಧಿಕಾರಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್ ನಂದಿನಿ, ವಾರ್ತಾಧಿಕಾರಿ ವಿನೋದ್ ಚಂದ್ರ ಹಾಗೂ ಡಿ.ವೈ.ಎಸ್.ಪಿ ಪುಟ್ಟಸ್ವಾಮಿಗೌಡ, ಚುನಾವಣಾ ತಹಸೀಲ್ದಾರ್ ಪದ್ಮನಾಭ ಶಾಸ್ತ್ರೀ, ತಹಸೀಲ್ದಾರ್ ಶಿವಶಂಕರಪ್ಪ, ಕಲಾ ಕಾಲೇಜು ಪ್ರಾಂಶುಪಾಲರಾದ, ಮಹೇಂದ್ರ ಕುಮಾರ್ ಮತ್ತು ಇನ್ನಿತರ ಅಧಿಕಾರಿಗಳು, ಉಪನ್ಯಾಸಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here