ಹಾಸನ: ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಲೋಕಾಯುಕ್ತ ಸಂಸ್ಥೆಗೆ ಸಂಪೂರ್ಣ ಅಧಿಕಾರ ನೀಡಬೇಕು ಎಂದು ಆಗ್ರಹಿಸಿ ಹಾಸನ ಸಾಮಾಜಿಕ ಕಾರ್ಯಕರ್ತ H.G.ವೀರಭದ್ರಪ್ಪ ಜಿಲ್ಲಾಧಿಕಾರಿ ಕಚೇರಿ ಎದುರು ಏಕಾಂಗಿ ಧರಣಿ ನಡೆಸಿದ ಘಟನೆ ನಡೆದಿದೆ
1987ರಲ್ಲಿ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಗಡೆ ಅವರು ಭ್ರಷ್ಟಾಚಾರ ನಿರ್ಮೂಲನೆ ಮಾಡುಲು ಕರ್ನಾಟಕ ಲೋಕಾಯುಕ್ತ ಸಂಸ್ಥೆ ಸ್ಥಾಪನೆ ಮಾಡಿದ್ದರು. ಕಡಿಮೆ ಅವಧಿಯಲ್ಲಿಯೇ ಹಲವು ಭ್ರಷ್ಟ ಅಧಿಕಾರಿಗಳಿಗೆ ಈ ಸಂಸ್ಥೆ ವತಿಯಿಂದ ಒಂದು ಭಯ ಹಾಗೂ ತಕ್ಕಮಟ್ಟಿಗೆ ಭ್ರಷ್ಟಾಚಾರ ಹಲವು ವಿಭಾಗಗಳಲ್ಲಿ ಕಡಿಮೆಯಾಗಿತ್ತು ., ನಂತರ
2013 ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಂಸ್ಥೆಗೆ ನೀಡಿದ್ದ ಅಧಿಕಾರ ಮೊಟಕುಗೊಳಿಸಿತು ಎಂದು ದೂರಿದರು ಸಾಮಾಜಿಕ ಕಾರ್ಯಕರ್ತ
ಅನಂತರ ಬಂದ
B.S.ಯಡಿಯೂರಪ್ಪ ಅವರು (2018ರ ಚುನಾವಣಾ ಭಾಷಣದಲ್ಲಿ) BJP ಅಧಿಕಾರಕ್ಕೆ ಬಂದರೆ ಲೋಕಾಯುಕ್ತ ಸಂಸ್ಥೆಗೆ ಹೆಚ್ಚಿನ ಅಧಿಕಾರ ನೀಡುವುದಾಗಿ ಭರವಸೆ ನೀಡಿದ್ದರು. BJP ಅಧಿಕಾರಕ್ಕೆ ಬಂದು ಎರಡುವರೆ ವರ್ಷವಾಗುತ್ತಿದ್ದು ಈಗಲಾದರೂ ಲೋಕಾಯುಕ್ತ ಸಂಸ್ಥೆಗೆ ಹೆಚ್ಚಿನ ಅಧಿಕಾರ ನೀಡಬೇಕು , ಇದರಿಂದ ರಾಜ್ಯದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ತಡೆಯಬಹುದು ಎಂದು ಆಗ್ರಹಿಸಿದರು
ಈ ಕೂಡಲೇ ಕರ್ನಾಟಕ ಸರ್ಕಾರ ಲೋಕಾಯುಕ್ತ ಸಂಸ್ಥೆಗೆ ಹೆಚ್ಚಿನ ಅಧಿಕಾರ ನೀಡಬೇಕು , ಮುಂದಿನ ದಿನಗಳಲ್ಲಿ ಏಕಾಂಗಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ತಿಳಿಸಿ ಹಾಸನ ಜಿಲ್ಲಾಧಿಕಾರಿ ಕಛೇರಿ ಎದುರು ಮೌನ ಪ್ರತಿಭಟನೆ ನಡೆಸಿ ಮನವಿ ನೀಡಿ ಹೊರಟರು.