ಹಾಸನ : ನಗರದಲ್ಲಿ ಪುಂಡರ ಹಾವಳಿಗೇನು ಕಡಿಮೆ ಇಲ್ಲ , ಚುನಾವಣೆಯ ಹತ್ತಿರ ಇರೋದ್ರಿಂದ ಹಲವು ರೌಡಿ ಶೀಟರ್ ಗಳ ಗಡಿ ಪಾರು ಮಾಡಿ ನೆಮ್ಮದಿಯಿಂದಿದೆ ಹಾಸನ ಎನ್ನುವಾಗಲೇ ,
ಇಲ್ಲೊಬ್ಬ ಪುಂಡ ಕಾಲೇಜು ವಿದ್ಯಾರ್ಥಿನಿಯೊರ್ವಳಿಗೆ ರೇಗಿಸಿದ ಯುವಕನಿಗೆ ಭರ್ಜರಿ ಧರ್ಮದೇಟು ನೀಡಿ ಯುವತಿಯೊಬ್ಬಳು ಅಲ್ಲೇ ಡ್ರಾ ಅಲ್ಲೇ ಬಹುಮಾನ ಕೊಟ್ಟು ಕಳುಹಿಸಿದ್ದಾಳೆ.
ಘಟನೆ , ಹಾಸನ ನಗರದ ಸರ್ಕಾರಿ ಆಸ್ಪತ್ರೆ ಮುಂಭಾಗ ನಡೆದಿದ್ದು ., ಸರ್ಕಾರಿ ಆಸ್ಪತ್ರೆಯ ಮುಂಭಾಗ ಯುವಕ ಚುಡಾಯಿಸಿದ್ದಾನೆ ಎನ್ನಲಾಗಿದ್ದು . ಇದರಿಂದ ಅದ್ಯಾವ ಸಿಟ್ಟಿತ್ತೊ ಯುವತಿಗೆ ಅಲ್ಲೆ ಸಿಟ್ಟಾದ ಯುವತಿ, ಚಪ್ಪಲಿಯಿಂದ ಸ್ಥಳೀಯರ ಸಹಾಯದಿ ಹೊಡೆದಿದ್ದಾಳೆ , ಒಂದಲ್ಲ ಎರಡಲ್ಲ ಹಲವು ಏಟುಗಳು . ಯುವಕ ರೇಗಿಸಿದ್ದಲ್ಲದೆ,
ಯುವತಿಯ ಮೇಲೆ ಕೈ ಮಾಡಿದ್ದಾನಂತೆ . ಕೂಡಲೇ ಎಚ್ಚೆತ್ತ ಸ್ಥಳೀಯರು ಯುವತಿಗೆ ನೆರವಾಗಿ ಯುವಕನ್ನು ಹಿಡಿದು ತರಾಟೆಗೆ ತೆಗೆದುಕೊಂಡಿದ್ದಾರೆ . , ವಿಷಯ ತಿಳಿದ ಸ್ಥಳಕ್ಕೆ ಬಂದ ಮತ್ತಿಬ್ಬರು ನಂದು ಇರಲಿ ಎಂದು ಮತ್ತೆಡು ತಟ್ಟಿದ್ದಾರೆ ಆ ಯುವಕನಿಗೆ .,
ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಯುವಕನನ್ನು ವಶಕ್ಕೆ ಪಡೆದುಕೊಂಡಿದ್ದು . ಬಳಿಕ ನಗರ ಠಾಣೆಗೆ ಕರೆದೊಯ್ದು, ನಂತರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ .