ಹಾಸನ / ಮಂಗಳೂರು: ಪ್ಯಾರಲಂಪಿಯನ್ ಬೆಳ್ಳಿ ಪದಕ ವಿಜೇತ ಹಾಸನದ ಸುಹಾಸ್‌ಗೆ NITK (ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಕರ್ನಾಟಕ) ನಿಂದ ಗೌರವ ಡಾಕ್ಟರೇಟ್
ಟೋಕಿಯೋ 2020 ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದಿರುವ ತನ್ನ ಹಳೆಯ ವಿದ್ಯಾರ್ಥಿ, ಪ್ರಸ್ತುತ ಉತ್ತರ ಪ್ರದೇಶ IAS ಅಧಿಕಾರಿ ಹಾಸನ ಜಿಲ್ಲೆಯ ಹೆಮ್ಮೆಯ ಪುತ್ರ ಸುಹಾಸ್ ಎಲ್ ಯತಿರಾಜ್ ಅವರಿಗೆ NITK ಸುರತ್ಕಲ್ ಗೌರವ ಡಾಕ್ಟರೇಟ್ ಪ್ರಧಾನ ಮಾಡಲಿದೆ. , ಮೊನ್ನೆ ತಾನೆ ನಡೆದ ಕರ್ನಾಟಕ ಸರ್ಕಾರ ಗೌರವ ರಾಜ್ಯ ಪ್ರಶಸ್ತಿ ಪಡೆದ ಸುಹಾಸ್ ಗೆ ಮತ್ತೊಂದು ಹಿರಿಮೆ ಈ ಮೂಲಕ ಸೇರಲಿದೆ,
ಮುಂದಿನ ಶನಿವಾರದಂದು ನಿಗದಿಪಡಿಸಲಾದ ಇನ್‌ಸ್ಟಿಟ್ಯೂಟ್‌ನ 19 ನೇ ವಾರ್ಷಿಕ ವರ್ಚುವಲ್ ಘಟಿಕೋತ್ಸವದಲ್ಲಿ ಅವರಿಗೆ ಪದವಿಯನ್ನು ನೀಡಲಾಗುವುದು ಸಂಸ್ಥೆ ಹೆಮ್ಮೆಯ ವಿಷಯ ತಿಳಿಸಿದೆ.
ಎನ್‌ಐಟಿಕೆ ನಿರ್ದೇಶಕರಾದ ಕೆ ಉಮಾಮಹೇಶ್ವರ್ ರಾವ್, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮುಖ್ಯ ಅತಿಥಿಗಳಾಗಿ ಮತ್ತು ಇಸ್ರೋ ಅಧ್ಯಕ್ಷ ಕೆ ಶಿವನ್ ಅವರು ಗೌರವಾನ್ವಿತ ಅತಿಥಿಯಾಗಿರುವರು ಎಂದು ರಾವ್ ಈ ಸಂದರ್ಭದಲ್ಲಿ ಹೇಳಿದರು.
ಸಂಸ್ಥೆಯ 60 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಗೌರವ ಡಾಕ್ಟರೇಟ್ ಪದವಿ ಒಲಂಪಿಯನ್ ಒಬ್ಬರಿಗೆ ಪ್ರಧಾನ ಮಾಡಲಿದ್ದು , ತಮ್ಮ ಹಳೆಯ ವಿದ್ಯಾರ್ಥಿ ಸುಹಾಸ್ ಎಲ್ ಯತಿರಾಜ್ ಅವರ ಅಸಾಧಾರಣ ಸಾಧನೆಯ ಆಧಾರದ ಮೇಲೆ ಸೆನೆಟ್ ಅನುಮೋದನೆ ನೀಡಿ, 2004ರ ಬ್ಯಾಚ್‌ನಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಟೆಕ್ ಓದಿದ್ದ ಸುಹಾಸ್ ಗೆ. ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್ SLA ಈವೆಂಟ್‌ನಲ್ಲಿ ಅವರು ಟೋಕಿಯೊ 2020 ಪ್ಯಾರಾಲಿಮ್ ಪಿಕ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕವನ್ನು ಪಡೆದ. ಅವರು ಉತ್ತರ ಪ್ರದೇಶದ ಗೌತಮ್ ಬುದ್ಧ ನಗರದ ಡೆಪ್ಯೂಟಿ ಕಮಿಷನರ್.ಆಗಿದ್ದು
ಒಟ್ಟು 1,681 ಅಭ್ಯರ್ಥಿಗಳು ಈ ಘಟಿಕೋತ್ಸವದಲ್ಲಿ ಪದವಿ ಪಡೆಯಲಿದ್ದು, ಇದರಲ್ಲಿ 120 ಪಿಎಚ್‌ಡಿಗಳು, 766 ಸ್ನಾತಕೋತ್ತರ ಪದವೀಧರರು ಮತ್ತು 795 ಬಿಟೆಕ್ ವಿದ್ಯಾರ್ಥಿಗಳು ಸೇರಿದ್ದಾರೆ. ಎಂದು ಪತ್ರಿಕಾ ಪ್ರಕಟಣೆಯಲ್ಲಿ ಸಂಸ್ಥೆ ತಿಳಿಸಿದೆ.
ಹಾಸನದ ಹೆಮ್ಮೆಯ ಪುತ್ರ ಸುಹಾಸ್ ಯತಿರಾಜ್ ಅವರಿಗೆ ಹಾಸನ್ ನ್ಯೂಸ್ ಹಾಗೂ ಹಾಸನ ಜನತೆಯ ಪರವಾಗಿ ಅಭಿನಂದನೆಗಳು.
#achievershassan #hassan #hassannews #suhaslyatiraj #paralympian #india #mangalore #nitk