ಚಿನ್ನದ ಪದಕ ಭೇಟೆಯಾಡಿದ ಹಾಸನ ಜಿಲ್ಲೆಯ ವಾಲಿಬಾಲ್ ಆಟಗಾರರು

0

ವಾಲಿಬಾಲ್ ಫೆಡರೇಷನ್ ಚಾಂಪಿಯನ್ ಷಿಪ್ ನಲ್ಲಿ ಚಿನ್ನದ ಪದಕ ಭೇಟೆಯಾಡಿದ ಅರಕಲಗೂಡು ಆಟಗಾರರು
ದಿನಾಂಕ 29/10/2021 ರಿಂದ 31/10/2021 ರವರೆಗೆ ವಾಲಿಬಾಲ್ ಫೆಡರೇಶನ್ ಆಫ್ ಇಂಡಿಯಾ ಮತ್ತು ವಾಲಿವಾಲ್ಅಸೋಸಿಯೇಷನ್ ಆಫ್ ತಮಿಳುನಾಡು ಇವರ ಸಹಯೋಗದಲ್ಲಿ ತಮಿಳುನಾಡಿನ ತಿರುಪುರ್ ನಡೆದ 44 ನೇ ವಾಲಿಬಾಲ್ ಪೇಡರೇಷನ್ ಚಾಂಪಿಯನ್ ಷಿಪ್ ನಲ್ಲಿ


23 ವಯಸ್ಸಿನ ಯುವಕರ ಹಾಗೂ19 ಬಾಲಕರ ರಾಷ್ಟ್ರ ಮಟ್ಟದ ವಾಲಿಬಾಲ್ ಚಾಂಪಿಯನ್ ಶಿಪ್ ನಲ್ಲಿ ಕರ್ನಾಟಕ ಎರಡು ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಗಳಿಸಿ *ಚಿನ್ನದ ಪದಕಗಳನ್ನು ಪಡೆದು *ಕರ್ನಾಟಕ ರಾಜ್ಯಕ್ಕೆ ಕೀರ್ತಿ ತಂದಿರುತ್ತಾರೆ.
ಭಾಗವಹಿಸಿ ವಿಜೇತರಾದ ಎಲ್ಲಾ ಕ್ರೀಡಾಪಟುಗಳನ್ನು, ತಂಡದ ತರಬೇತುದಾರರಾದ ನವೀನ್ ಶೆಟ್ಟಿ ಹಾಗೂ ತಂಡದ ಮೇಲ್ವಿಚಾರಕರನ್ನು ವಾಲಿಬಾಲ್ ಅಸೋಸಿಯೇಷನ್ ಆಫ್ ಕರ್ನಾಟಕದ ಅಧ್ಯಕ್ಷರಾದ
ಕಾರ್ಯ ದರ್ಶಿ ನಂದಕುಮಾರ್ ,ಅದ್ಯಕ್ಷರಾದ ಬೆಟ್ಟೇಗೌಡರವರು, ಮತ್ತು ಹಾಸನ ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ ಅದ್ಯಕ್ಷರು ಕಾರ್ಯದರ್ಶಿ ಉಮೇಶ್ ಮತ್ತು ಪದಾದಿಕಾರಿಗಳು ಅಬಿನಂದಿಸಿದರು.


23 ವಯಸ್ಸಿನ ವಿಭಾಗದಲ್ಲಿ ಅರಕಲಗೂಡು ತಾಲ್ಲೂಕಿನ ವಡ್ಡರಹಳ್ಳಿ ಗ್ರಾಮದ ಬಾಗ್ಯಲಕ್ಷ್ಮಿ ಪೊಲೀಸ್ ಕೃಷ್ಣೇಗೌಡರ ಮಗ ರಾಹುಲ್ , ಪ್ರತಿನಿದಿಸಿದ್ದು, ಇದು ರಾಜ್ಯ ತಂಡಕ್ಕೆ ಮೂರನೇ ಬಾರಿಯಾಗಿದೆ.
ಮತ್ತು 19 ರ ವಯೊಮಾನದ ವಿಭಾಗದಲ್ಲಿ ಪ್ರಥಮ ಬಾರಿಗೆ ಅರಕಲಗೂಡು ಪಟ್ಟಣದ ಕೃಷ್ಣೇಗೌಡ ,ಇಂದಿರಾ ದಂಪತಿಗಳ ಮಗನಾದ ರಕ್ಷಿತ್ ,


ಕ್ರಿಸ್ತಜ್ಯೋತಿ ಶಾಲೆ ದೈಹಿಕ ಶಿಕ್ಷಕಿಯಾದ ಚಿನ್ನಲಕ್ಷ್ಮಿ ರವರ ಮಗ ಹರ್ಷರವರು ಭಾಗವಹಿಸಿ ಚಿನ್ನದ ಪದಕ ಗಳಿಸಿ ತಾಲ್ಲೂಕಿಗೆ ಮತ್ತು ಜಿಲ್ಲೆ ,ರಾಜ್ಯಕ್ಕೆ ಕೀರ್ತಿ ತಂದಿರುತ್ತಾರೆ.ಅವರಿಗೆ ತಾಲ್ಲೂಕಿನ ಹಿರಿಯ ವಾಲಿಬಾಲ್ ಆಟಗಾರರಾದ ಕೆ.ಎಂ ಪರಮೇಶ್, ರಕೀಬ್ ದರ್ಮ, ಅರಕಲಗೂಡು ವಾಲಿಬಾಲ್ ಅಸೋಸಿಯೇಶನ್ ಪದಾದಿಕಾರಿಗಳು ಮತ್ತು ಜನತೆ ಅಬಿನಂದನೆ ಸಲ್ಲಿಸಿರುತ್ತಾರೆ.

LEAVE A REPLY

Please enter your comment!
Please enter your name here