ರಾಷ್ಟ್ರೀಯ ಹೆದ್ದಾರಿಯಲ್ಲಿ ತಿರುಗಾಡುವ ಜನರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ

0

ಜಾವಗಲ್: ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಂಭಾಗ ಕಸ ಹಾಗೂ ತ್ಯಾಜ್ಯ ವಸ್ತುಗಳಿಂದ ಕೂಡಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ತಿರುಗಾಡುವ ಜನರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಕುರಿತು ಸ್ಥಳೀಯರಾದ ತಿಮ್ಮೇಗೌಡ ಅವರನ್ನು ಮಾತನಾಡಿಸಿದಾಗ ಕೆಲವು ಅಂಗಡಿ ಮಾಲೀಕರು ಅನಾಗರಿಕರ ತರಹ ವರ್ತಿಸಿ ತಮ್ಮ ಅಂಗಡಿ ತ್ಯಾಜ್ಯವನ್ನು ತಂದು ಶಾಲೆ ಮುಂಭಾಗಕ್ಕೆ ತಂದು ಸುರಿದು ಹೋಗುತ್ತಿದ್ದಾರೆ. ಕಸ ವಿಲೇವಾರಿ ಆಟೋ ಪಟ್ಟಣದದ್ಯಂತ ಸಂಚರಿಸಿ ಕಸ ಸಂಗ್ರಹಿಸುತ್ತದೆ. ಈ ರೀತಿ ಕಸವನ್ನು ಎಲ್ಲೆಂದರಲ್ಲಿ ಹಾಕಿ ಹೋಗುತ್ತಿದ್ದಾರೆ.ಇದು ಒಂದೇ ಜಾಗವಲ್ಲ ಊರಿನಲ್ಲಿ ಒಂದು ರೌಂಡ್ ಬಂದರೆ ಗೊತ್ತಾಗುತ್ತದೆ ಎಲ್ಲೆಲ್ಲಿ ಕಸ ಈ ರೀತಿ ಸುರಿದು ಹೋಗುತ್ತಿದ್ದಾರೆ ಅಂತ. ಈ ಕೂಡಲೇ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ

ಸದಸ್ಯರು ಈ ಬಗ್ಗೆ ಗಮನಹರಿಸಿ ಸ್ವಚ್ಚಗೊಳಿಸಬೇಕು ಮಾದರಿ ಗ್ರಾಮವಾಗಬೇಕಾದ ಪಟ್ಟಣ ಕೊಳಕು ಪಟ್ಟಣದತ್ತ ಸಾಗುತಿದೆ ಎಂದರು.

LEAVE A REPLY

Please enter your comment!
Please enter your name here