ಯುವ ಕಲಾವಿದರಿಗೆ ಒಂದು ವೇದಿಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ

0

ಹಾಸನ ನ.13 : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ 2021-22ನೇ ಸಾಲಿನಲ್ಲಿ ಹಾಸನ ಜಿಲ್ಲಾ ವ್ಯಾಪ್ತಿಯಲ್ಲಿ ಚಿಗುರು ಮತ್ತು ಯುವಸೌರಭ ಕಾರ್ಯಕ್ರಮಗಳನ್ನು ಆಯೋಜಿಸಲು ಶಾಸ್ತ್ರೀಯ ಸಂಗೀತ, ಕರ್ನಾಟಕ ಹಿಂದೂಸ್ಥಾನಿ ವಾದ್ಯ ಸಂಗೀತ, ಸುಗಮ ಸಂಗೀತ, ವಚನ ಗಾಯನ, ತತ್ವಪದ-ದಾಸರಪದ ಗಾಯನ, ಜನಪದ ಗೀತ ಗಾಯನ, ಸಮೂಹ ನೃತ್ಯ, ನೃತ್ಯ ರೂಪಕ, ಶಾಸ್ತ್ರೀಯ ನೃತ್ಯಗಳಾದ ಭರತ ನಾಟ್ಯ, ಕಥಕ್, ಮೋಹಿನಿಯಾಟ್ಟಂ, ಕೂಚಿಪುಡಿ, ಒಡಿಸ್ಸಿ, ಜನಪದ ಪ್ರದರ್ಶನ ಕಲಾ ತಂಡಗಳು, ನಾಟಕ, ಯಕ್ಷಗಾನ, ಮೂಡಲಪಾಯ, ಬಯಲಾಟ, ಗೊಂಬೆಮೇಳ, ಗಮಕ ಕಥಾ ಕೀರ್ತನಾ, ಏಕ ಪಾತ್ರಾಭಿನಯ ಇತ್ಯಾದಿ ಕಲೆಗಳಲ್ಲಿ ಪರಿಣತ ಪ್ರತಿಭಾಂತ ಯುವ ಕಲಾವಿದರಿಂದ ಅರ್ಜಿ ಆಹ್ವಾನಿಸಲಾಗಿದೆ.

ಚಿಗುರು ಕಾರ್ಯಕ್ರಮಕ್ಕೆ 6 ರಿಂದ 14 ವರ್ಷ ವಯೋಮಾನದವರು, ಯುವಸೌರಭ ಕಾರ್ಯಕ್ರಮಕ್ಕೆ 15 ರಿಂದ 30 ವರ್ಷ ವಯೋಮಾನದ ಅರ್ಹ ಕಲಾವಿದರು ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು ನ.23 ಕೊನೆಯ ದಿನವಾಗಿರುತ್ತದೆ.

ಅರ್ಜಿಯನ್ನು ಸಹಾಯಕ ನಿರ್ದೇಶಕರ ಕಚೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹಾಸನಾಂಬ ಕಲಾಕ್ಷೇತ್ರ, ಹಾಸನ ಇಲ್ಲಿ ಸಲ್ಲಿಸಬಹುದಾಗಿದೆ. ಹೆಚ್ಚಿನ ವಿವರಗಳಿಗೆ ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08172-267162 ಗೆ ಸಂಪರ್ಕಿಸಬಹುದಾಗಿದೆ.

#supportlocal #hiddentalentshassan #talentshassan

LEAVE A REPLY

Please enter your comment!
Please enter your name here