Home social cause “ನಮ್ಮ ನಡಿಗೆ-ತ್ಯಾಜ್ಯ ಮುಕ್ತದ ಕಡೆಗೆ”ಜ. 16 ರಿಂದ ಫೆ. 15ರ ವರೆಗೆ ಗ್ರಾಮೀಣ ಪ್ರದೇಶಗಳಲ್ಲಿ ವಿವಿಧ...

“ನಮ್ಮ ನಡಿಗೆ-ತ್ಯಾಜ್ಯ ಮುಕ್ತದ ಕಡೆಗೆ”ಜ. 16 ರಿಂದ ಫೆ. 15ರ ವರೆಗೆ ಗ್ರಾಮೀಣ ಪ್ರದೇಶಗಳಲ್ಲಿ ವಿವಿಧ ಚಟುವಟಿಕೆಗಳ ಮೂಲಕ ಜಾಗೃತಿಗ್ರಾಮೀಣ ಪ್ರದೇಶಗಳಲ್ಲಿ ವಿವಿಧ ಚಟುವಟಿಕೆಗಳ ಮೂಲಕ ಜಾಗೃತಿ

0

ನಮ್ಮ ನಡಿಗೆ ತ್ಯಾಜ್ಯ ಮುಕ್ತದ ಕಡೆಗೆ
ಹಾಸನಜ. 16 (ಹಾಸನ್_ನ್ಯೂಸ್ !,  ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯಡಿ ಘನ ತ್ಯಾಜ್ಯದ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡುವ ಉದ್ದೇಶದಿಂದ ಸಾರ್ವಜನಿಕರಿಗೆ ವ್ಯಾಪಕವಾಗಿ ಅರಿವು ಮೂಡಿಸುವ ಉದ್ದೇಶದಿಂದ “ನಮ್ಮ ನಡಿಗೆ-ತ್ಯಾಜ್ಯ ಮುಕ್ತದ ಕಡೆಗೆ” ಎಂಬ ಘೋಷ ವಾಕ್ಯದಡಿಯಲ್ಲಿ ಜ. 16 ರಿಂದ ಫೆ. 15ರ ವರೆಗೆ ಮನೆಯ ಹಂತದಲ್ಲಿಯೇ (ಮೂಲದಲ್ಲಿಯೇ) ಕಸವನ್ನು ಬೇರ್ಪಡಿಸಿಕೊಳ್ಳುವಂತೆ ಗ್ರಾಮೀಣ ಪ್ರದೇಶಗಳಲ್ಲಿ ವಿವಿಧ ಚಟುವಟಿಕೆಗಳ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸಿದೆ.


  ಕಸವನ್ನು ಎಲ್ಲೆಂದರಲ್ಲಿ ಎಸೆಯುವುದರಿಂದ ಸಮುದಾಯದಲ್ಲಿ ವಿವಿಧ ರೀತಿಯ ಖಾಯಿಲೆಗಳು ಹರಡುತ್ತವೆ ಮತ್ತು ಇದರಿಂದ ಗ್ರಾಮೀಣ ಪರಿಸರವೂ ಕಲುಷಿತವಾಗುತ್ತದೆ. ಸೊಳ್ಳೆ, ನೊಣಗಳು ಸೇರಿದಂತೆ ಇನ್ನಿತರ ಅಪಾಯಕಾರಿ ಕೀಟಗಳು ಉತ್ಪತ್ತಿಯಾಗುತ್ತವೆ. ಇವೆಲ್ಲಾ ತೊಂದರೆಗಳಿಂದ ನಾವು ಪಾರಾಗಲು ವ್ಯವಸ್ಥಿತ ತ್ಯಾಜ್ಯ ನಿರ್ವಹಣೆಯೊಂದೇ ಏಕೈಕ ಮಾರ್ಗವಾಗಿದೆ. ಗ್ರಾಮೀಣ ಪ್ರದೇಶವನ್ನು ಸ್ವಚ್ಚ ಗ್ರಾಮ ಸ್ವಚ್ಛ ಪರಿಸರ ಎಂಬಂತೆ ರೂಪಿಸುವುದು ಸ್ಚಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯ ಮುಖ್ಯ ಉದ್ದೇಶವಾಗಿದೆ.


ಈ ನಿಟ್ಟಿನಲ್ಲಿ ಇಲಾಖೆಯು ಹಲವಾರು ವಿನೂತನ ಕಾರ್ಯತಂತ್ರಗಳನ್ನು ಆಯೋಜಿಸುತ್ತಾ ಬಂದಿದೆ. ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯಡಿ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಹಂತ ಹಂತವಾಗಿ ಸ್ವಚ್ಛ ಸಂಕೀರ್ಣಗಳನ್ನು ಸ್ಥಾಪಿಸುವ ಮೂಲಕ ಗ್ರಾಮ, ಮನೆ, ಹೋಟೆಲ್, ಅಂಗಡಿ-ಮುಗಟ್ಟು, ಸಂತೆ ಜಾತ್ರೆ ಇತ್ಯಾದಿಗಳಲ್ಲಿ  ಮೂಲದಲ್ಲಿಯೇ ಹಸಿ ತ್ಯಾಜ್ಯ ಮತ್ತು ಒಣ ತ್ಯಾಜ್ಯವನ್ನು ವಿಂಗಡಿಸಿ, ಹಸಿ ತ್ಯಾಜ್ಯವನ್ನು ಮನೆಯ ಹಂತದಲ್ಲಿಯೇ ಸಾವಯವ ಗೊಬ್ಬರವನ್ನಾಗಿಸಿಕೊಳ್ಳುವ ಪದ್ಧತಿಯು ಹಲವಾರು ವರ್ಷಗಳಿಂದ ರೂಡಿಯಲ್ಲಿರುತ್ತದೆ.
ಒಣ ಕಸವನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುತ್ತಿದ್ದು. ಈ ವ್ಯವಸ್ಥೆಯು ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಜಾರಿಯಾಗಬೇಕು ಇದರಲ್ಲಿ ಸಮುದಾಯ ಸಕ್ರಿಯವಾಗಿ ತೊಡಗಬೇಕಿದೆ.


ಗ್ರಾಮ ಪಂಚಾಯಿತಿ ಹಂತದಲ್ಲೇ ಜಾಗೃತಿಗಾಗಿ “ನಮ್ಮ ಗ್ರಾಮ ನಮ್ಮ ಜವಾಬ್ದಾರಿ” ಎಂಬ ಧ್ಯೇಯೋದೇಶದಿಂದ “ನಮ್ಮ ನಡಿಗೆ-ತ್ಯಾಜ್ಯ ಮುಕ್ತ ಕಡೆಗೆ” ಎಂಬ ಘೋಷವಾಕ್ಯದಂತೆ ಪ್ರತಿಯೊಂದು ಗ್ರಾಮದಲ್ಲಿ ತ್ಯಾಜ್ಯ, ವಿಂಗಡಣೆ, ವೈಜ್ಞಾನಿಕ ವಿಲೇವಾರಿ ಬಗ್ಗೆ ಜಾಗೃತಿ ಮೂಡಿಸಿ, ನಿರಂತರವಾಗಿ ಈ ಅಭ್ಯಾಸವನ್ನು ಅಳವಡಿಸಿಕೊಳ್ಳುವಂತೆ ಗ್ರಾಮೀಣ ಜನರನ್ನು ಪ್ರೇರೆಪಿಸಲು ನಿರಂತರ ಜಾಗೃತಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು ಹಾಗೂ ಜನರು ಸ್ವಯಂ ಪ್ರೇರಿತರಾಗಿ ತ್ಯಾಜ್ಯ ವಿಂಗಡಣೆಯ ಅಭ್ಯಾಸವನ್ನು ರೂಢಿಸಿಕೊಳ್ಳಲು ಪ್ರೇರೆಪಿಸುವುದು, ಮತ್ತು ಜನರಲ್ಲಿರುವ ವರ್ತನೆಯನ್ನು ಬದಲಾವಣೆ ಮಾಡುವುದು, ಗ್ರಾಮ ನೈರ್ಮಲ್ಯ ಹಾಗೂ ವೈಯಕ್ತಿಕ ಸ್ವಚ್ಛತೆಯಗೂ ಆದ್ಯತೆ ನೀಡುವಂತೆ ಮನವೊಲಿಸುವುದು ಈ ಆಂದೋಲನದ ಪ್ರಮುಖ ಗುರಿಯಾಗಿರುತ್ತದೆ.

NO COMMENTS

LEAVE A REPLY

Please enter your comment!
Please enter your name here

error: Content is protected !!
%d bloggers like this: