ಅಂತರಾಷ್ಟ್ರೀಯ ಆಲೂಗಡ್ಡೆ ಸಂಶೋಧನಾ ಸಂಸ್ಥೆ : ಹಾಸನದ ಸೋಮನಹಳ್ಳಿ ಕಾವಲಿನಲ್ಲಿ ಜ.19 ರಂದು ಆಲೂಗಡ್ಡೆ ಬೆಳೆ ಕ್ಷೇತ್ರೋತ್ಸವ ( #ರೈತಮಿತ್ರಹಾಸನ್ನ್ಯೂಸ್)

0

ಹಾಸನಜ.16(ಹಾಸನ್_ನ್ಯೂಸ್!,  ತೋಟಗಾರಿಕೆ ಇಲಾಖೆ, ಕೃಷಿ ವಿಜ್ಞಾನ ಕೇಂದ್ರ, ಅಂತರಾಷ್ಟ್ರೀಯ ಆಲೂಗಡ್ಡೆ ಸಂಶೋಧನಾ ಸಂಸ್ಥೆ, ಗ್ರೀನ್‍ಇನ್ನೋವೇಷನ್ ಸೆಂಟರ್, ಕೃಷಿ ಸಂಶೋಧನಾ ಕೇಂದ್ರ ಹಾಸನ ವತಿಯಿಂದ ಆಲೂಗಡ್ಡೆ ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮವನ್ನು ಜ.19 ರಂದು ಬೆಳಿಗ್ಗೆ 10.30 ಗಂಟೆಗೆ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ ಸೋಮನಹಳ್ಳಿ ಕಾವಲಿನಲ್ಲಿ ಆಯೋಜಿಸಲಾಗಿದೆ.

ಜಿಲ್ಲಾಧಿಕಾರಿಗಳಾದ ಆರ್ ಗಿರೀಶ್ ಅವರು ಕಾರ್ಯಕ್ರಮ ಉದ್ಘಾಟಿಸಿಲಿರುವರು ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಗೌರವಾನ್ವಿತ ಉಪ ಕುಲಪತಿಗಳಾದ ಡಾ. ಕೆ.ಎಂ. ಇಂದಿರೇಶ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.


  
         ತೋಟಗಾರಿಕೆ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದ ಮುಖ್ಯಸ್ಥರಾದ ಡಾ. ಹೆಚ್. ಅಮರನಂಜುಂಡೇಶ್ವರ, ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕರಾದ ಡಾ. ಡಿ. ಆರ್ ಪಾಟೀಲ್, ಹಾಸನ ಕೃಷಿ ಮಹಾವಿದ್ಯಾಲಯದ ಡೀನ್ ಡಾ. ದೇವಕುಮಾರ ಎನ್, ಬೆಂಗಳೂರು ಪ್ರಾದೇಶಿಕ ತೋಟಗಾರಿಕೆ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕರಾದ ಡಾ. ವಿಷ್ಣುವರ್ಧನ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಯೋಗಿಶ್ ಹೆಚ್.ಆರ್. ಕಂದಲಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರು ಹಾಗೂ ಹಿರಿಯ ವಿಜ್ಞಾನಿಗಳಾದ ಡಾ. ರಾಜೇಗೌಡ,  ಸೋಮನಹಳ್ಳಿಕಾವಲು ತೋಟಗಾರಿಕೆ ಉತ್ಕøಷ್ಟ ಕೇಂದ್ರದ ಉಪನಿರ್ದೇಶಕರಾದ ಮಂಗಳ ಕೆ, ಅರಸೀಕೆರೆ ತೋಟಗಾರಿಕೆ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದ ಮುಖ್ಯಸ್ಥರಾದ ಡಾ. ಕಿರಣ್ ಕುಮಾರ್ ಕೆ.ಸಿ., ಬೆಂಗಳೂರು ಅಂತರಾಷ್ಟ್ರೀಯ ಆಲೂಗಡ್ಡೆ ಸಂಸ್ಥೆ, ಯೋಜನಾ ಸಲಹೆಗಾರರಾದ ರವೀಂದ್ರನಾಥ್ ರೆಡ್ಡಿ, ಬೆಂಗಳೂರು ಗ್ರೀನ್‍ಇನ್ನೋವೇಷನ್ ಸೆಂಟರ್ ತಾಂತ್ರಿಕ ಸಲಹೆಗಾರರಾದ ಧನಜಂಯ್, ಗುಂಜೇವು ಕೃಷಿ ಸಂಶೋಧನಾ ಕೇಂದ್ರ ಹಿರಿಯ ಕ್ಷೇತ್ರ ಅಧೀಕ್ಷಕರಾದ ಡಾ. ನಾಗರಾಜ ಎಂ.ಎಸ್, ಮಡೇನೂರು ಕೃಷಿ ಸಂಶೋಧನಾ ಕೇಂದ್ರ ಹಿರಿಯ ಕ್ಷೇತ್ರ ಅಧೀಕ್ಷಕರಾದ ಡಾ. ಬಸವರಾಜ್ ಬಿ, ಅರಸೀಕೆರೆ ಕೃಷಿ ಸಂಶೋಧನಾ ಕೇಂದ್ರ ಕ್ಷೇತ್ರ ಅಧೀಕ್ಷಕರಾದ ಡಾ. ಸೋಮಶೇಖರಪ್ಪ ಮತ್ತಿತರರು ಭಾಗವಹಿಸಲಿದ್ದಾರೆ.

LEAVE A REPLY

Please enter your comment!
Please enter your name here