ನಿಂತಿದ್ದ ವಾಹನಗಳ ಮೇಲೆ ಉರುಳಿದ ಮರ ವಾಹನ ಜಖಂ : ಇಬ್ಬರಿಗೆ ಗಾಯ
ಹಾಸನ ನಗರ : ನೋಡ ನೋಡುತ್ತಿದ್ದಂತೆಯೇ ರಸ್ತೆ ಪಕ್ಕದಲ್ಲಿದ್ದ ಭಾರೀ ಗಾತ್ರದ ಮರವೊಂದು ದಿಢೀರ್ ಬುಡಮೇಲಾಗಿ ಆಟೋ ಮೇಲೆ , ಸ್ಕೋಡಾ ಕಾರಿನ ಮೇಲೆ ಉರುಳಿ ಬಿದ್ದ ಘಟನೆ ನಗರದ ಕೆ.ಆರ್.ಪುರಂ ನ 3ನೇ ಅಡ್ಡರಸ್ತೆಯಲ್ಲಿ 24ಮೇ 2022 ಮಂಗಳವಾರ ಮಧ್ಯಾಹ್ನ ನಡೆದಿದೆ. ,

ಮಳೆ ಬರುವ ಅಂದಾಜೆ ಇರಲಿಲ್ಲ , ಮಳೆಗು ಮುನ್ನ ಬಂದ ಗಾಳಿಗೆ ಮರ ಧರೆಗೆ ಉರುಳಿದೆ .
ಅದೃಷ್ಟವಶಾತ್ ಸ್ಥಳೀಯರಾದ ಜಬೀನಾ, ಜುನೈದ್ಗೆ ಎಂಬುವರಿಗೆ ಸಣ್ಣಪುಟ್ಟ ಗಾಯ ಹೊರತು ಪಡಿಸಿ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದು, ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.
ಮರ ಬಿದ್ದ ರಭಸಕ್ಕೆ ಆಟೋ ,

ಸಂಪೂರ್ಣ ಜಖಂ ಆಗಿದ್ದು, ಕಾರೊಂದಕ್ಕೆ ಹಾನಿಯಾಗಿದೆ. ಮರ ಬೀಳುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಮೈ ಜುಮ್ಮೆನ್ನಿಸುವಂತಿದೆ.

ಜಬೀನಾ ಮತ್ತು ಜುನೈದ್ ತನ್ಯ ಆಸ್ಪತ್ರೆ ಎದುರಿನ ಸ್ಕ್ಯಾನಿಂಗ್ ಸೆಂಟರ್ನಲ್ಲಿ ಪರೀಕ್ಷೆ ಮಾಡಿಸಲೆಂದು ಚಿಕ್ಕಮಗಳೂರಿನಿಂದ ಆಟೋದಲ್ಲಿ ಹಾಸನಕ್ಕೆ ಆಗಮಿಸಿದ್ದರು. ಆಸ್ಪತ್ರೆಯಲ್ಲಿ ರಶೀದಿ ಪಡೆದು ಸ್ಕ್ಯಾನಿಂಗ್ ಸೆಂಟರ್ ಎದುರು ಆಟೋದಲ್ಲಿ ಕುಳಿತು ತಮ್ಮ ಸರದಿಗಾಗಿ ಕಾಯುತ್ತಿರುವಾಗ ದಿಢೀರ್ ಘಟನೆ ನಡೆಸಿದೆ.

ಗಾಯಾಳುಗಳನ್ನು ಚಿಕಿತ್ಸೆಗಾಗಿ ಹಾಸನದ ಹಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬಡಾವಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಧಿಕಾರಿಗಳಿಗೆ ತರಾಟೆ: ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ನಗರಸಭೆ
ಅಧ್ಯಕ್ಷ ಆರ್.ಮೋಹನ್, ಅರಣ್ಯ ಇಲಾಖೆ , ಮರ ತೆರವು ಕಾರ್ಯ ಮಾಡಲು ಆದೇಶಿಸಿದರು .