ಶಾಲೆಗಳು ನಾವೆಲ್ಲರೂ ಭಾರತೀಯರೆಂಬ ಭಾವನೆ ಮೂಡಿಸಬೇಕು.
ಶಾಸಕ ಪ್ರೀತಂ ಗೌಡ ಅಭಿಮತ

0

ಹಾಸನದ ಹೊಸಲೈನ್ ರಸ್ತೆಯ “ದಿ ಇಂಟಲೆಕ್ಚುಯಲ್ಸ್ ಶಾಲೆ”ಯ ಉದ್ಘಾಟನಾ ಸಮಾರಂಭವನ್ನು ನೆರವೇರಿಸಿ ಮಾತನಾಡಿದ ಶಾಸಕ ಪ್ರೀತಂ ಜೆ ಗೌಡ ರವರು ಬಲಿಷ್ಟ ಭಾರತವನ್ನು ರೂಪಿಸುವ ನಿಟ್ಟಿನಲ್ಲಿ ಜಾತಿ ಧರ್ಮದ ಎಲ್ಲೆಯನ್ನು ಮೀರಿ ಶಾಲೆಗಳು ನಿರ್ಹಿಸಬೇಕಿರುವ ಪಾತ್ರ ಅಪಾರವಾದುದು ಎಂದರು. ಈ ನಿಟ್ಟಿನಲ್ಲಿ ದಿ ಇಂಟೆಲೆಕ್ಚುಯಲ್ಸ್ ಶಾಲೆ ಹೆಜ್ಜೆಯನ್ನಿಟ್ಟಿರುವುದು ಶ್ಲಾಘನೀಯವೆಂದರು.

ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ್ದ ಜನತಾ ಮಾಧ್ಯಮ ಪತ್ರಿಕೆಯ ಹಿರಿಯ ಸಂಪಾದಕರಾಗಿರುವ ಆರ್‌.ಪಿ.ವೆಂಕಟೇಶಮೂರ್ತಿ ಯವರು ಶಾಲೆಗಳು ಹೆಚ್ಚೆಚ್ಚು ಬುದ್ದಿವಂತರನ್ನು ಹುಟ್ಟು ಹಾಕುವುದಷ್ಟೇ ತಮ್ಮ ಜವಾಬ್ದಾರಿ ಎಂದುಕೊಳ್ಳದೆ ಹೆಚ್ಚೆಚ್ಚು ಹ್ರುದಯವಂತರನ್ನು ರೂಪಿಸುವುದನ್ನು ಮೈಗೂಡಿಸಿಕೊಳ್ಳಬೇಕು ಮತ್ತು ಆಂಗ್ಲ ಭಾಷೆಯ ಜೊತೆ ಜೊತೆ ಮಾತ್ರುಭಾಷೆಯ ಕಡೆ ಹೆಚ್ಚು ಗಮನ ಹರಿಸಬೇಕಿದೆ ಎಂದು ಅಭಿಪ್ರಾಯ ಪಟ್ಟರು.
ಮತ್ತೊಬ್ಬ ಅತಿಥಿ

ಜನಪ್ರಿಯ ಆಸ್ಪತ್ರೆಯ ಚೇರ್ಮನ್ ಡಾ/ಅಬ್ದುಲ್ ಬಷೀರ್ ರವರು ಪ್ರಸ್ತುತ ಸನ್ನಿವೇಷದಲ್ಲಿ ಶೈಕ್ಷಣಿಕ ಸಂಸ್ಥೆಗಳು ಎದುರಿಸುತ್ತಿರುವ ಸವಾಲುಗಳನ್ನು ಮೆಟ್ಟಿನಿಲ್ಲುವುದು ಸುಲಭದ ಮಾತಲ್ಲ,ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆ ಜೊತೆ ಅವರ ಜೀವನ ರೂಪಿಸಿಕೊಡುವ ಜವಾಬ್ದಾರಿ ಹೊರಬೇಕಿದೆ ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮ ವನ್ನುದ್ದೇಶಿಸಿ ಮಾತನಾಡಿದ ಮತ್ತೊಬ್ಬ ಅತಿಥಿ ಎಸ್.ಎಸ್.ಪಾಷರವರು ವಿದ್ಯಾರ್ಥಿಗಳಿಗೆ ಓದಲೇಬೇಕೆಂಬ ಛಲವನ್ನು ಶಾಲೆ ಹಾಗೂ

ಪೋಷಕರಿಬ್ಬರೂ ಜೊತೆಗೂಡಿ ಮೂಡಿಸಬೇಕು ಹಾಗೆಯೇ ಪೋಷಕರು ತಮ್ಮ ಮಕ್ಕಳ ಹೆಸರಲ್ಲಿ ಮನೆಯಲ್ಲೇ ಗ್ರಂಥಾಲಯ ರೂಪಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ಜಿ.ಓ.ಮಹಾಂತಪ್ಪ,ಸಂಸ್ಥೆಯ ಕಾರ್ಯದರ್ಶಿಗಳಾದ ಝುಲ್ಫಿಕರ್ ಅಹಮದ್,ಅಧ್ಯಕ್ಷರಾದ ಇಮ್ತಿಯಾಸ್ ಪಾಷ,ಸಂಯೋಜಕರಾದ ಶ್ರೀಮತಿ.ಶಮಾ ಅಮ್ರೀನ್,ವಿದ್ಯಾರ್ಥಿಗಳು ಹಾಗೂ ಪೋಷಕರು ಹಾಜರಿದ್ದರು.

LEAVE A REPLY

Please enter your comment!
Please enter your name here