ಹಾಸನ ಸಂಚಾರಿ ಪೊಲೀಸ್ ನಲ್ಲಿ ಹೊಸ ಬದಲಾವಣೆ , ಇನ್ನು ಮುಂದೆ ಟ್ರಾಫಿಕ್ ಪೊಲೀಸ್ ಸಾರ್ವಜನಿಕ ವಾಹನ ಸಂಚಾರರ ನಡುವೆ ಯಾವುದೇ ಸಂಘರ್ಷಕ್ಕೆ ಅವಕಾಶವಿಲ್ಲ , ಸಂಚಾರಿ ನಿಯಮ ಉಲ್ಲಂಘಿಸಿದಲ್ಲಿ ಸ್ಪಾಟ್ ಅಲ್ಲೆ ನಿಮ್ಮ ವಾಹನಕ್ಕೆ ಅಂಟಿಸಲಾಗುತ್ತದೆ ದಂಡ ಉಲ್ಲಂಘನೆ ಚಲನ್ , 15ನಿಮಿಷದಲ್ಲಿ ಆನ್ ಲೈನ್ ನಲ್ಲಿ ದೂರು ದಾಖಲು , ನಿಗದಿತ ಪ್ರದೇಶದಲ್ಲಿ ಮಾತ್ರ ದಂಡ ಕಟ್ಟಲು ಅವಕಾಶ – ಹಾಸನ ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ನೂತನ ‘ ಹಾಸನ ಸಂಚಾರ ಪೊಲೀಸ್ ಠಾಣೆ ಉದ್ಘಾಟಿಸಿದ ಸಂದರ್ಭದಲ್ಲಿ ಈ ಹೊಸ ಯೋಜನೆ ವಾಹನ ಸವಾರರಿಗೆ ಮುಕ್ತಗೊಳಿಸಿದರು
ಪೊಲೀಸ್ ಅಧಿಕಾರಿಗಳು ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡಿದವರ ವಿರುದ್ಧ ಪ್ರಕರಣಗಳನ್ನು ದಾಖಲಿಸಿ ಸ್ಥಳದಲ್ಲಿ ದಂಡವನ್ನು ವಸೂಲಿ ಮಾಡುವ ಕ್ರಮ ಕೈಗೊಳ್ಳುತ್ತಿದ್ದು ಇದರಿಂದ ಕೆಲವು ಸಂದರ್ಭದಲ್ಲಿ ಪೊಲೀಸರು ಹಾಗೂ ಸಾರ್ವಜನಿಕರ ನಡುವೆ ವಾಗ್ವಾದ ನಡೆಯುತ್ತಿದೆ.ಈ ಅನಾನುಕೂಲ ತಪ್ಪಿಸುವ ನಿಟ್ಟಿನಲ್ಲಿಯೂ ಈ ಪದ್ಧತಿಯನ್ನು ಜಾರಿ ಮಾಡಲಾಗುತ್ತಿದೆ ಎಂದು ಎಸ್ ಪಿ ವಿವರಿಸಿದರು .
ಟ್ರಾಫಿಕ್ ಆಟೋಮೇಶನ್ ಸೆಂಟ ಒಂದು ತಂತ್ರಾಂಶದಿಂದ ಕೂಡಿರುವ ಸಾಫ್ಟ್ ಆಗಿದ್ದು ನಗರದ 10 ಸಂಚಾರಿ ಪೊಲೀಸರಿಗೆ ಈ ತಂತ್ರಜ್ಞಾನ ಒಳಗೊಂಡ ಮೊಬೈಲ್ ಅನ್ನು ವಿತರಿಸಲಾಗುತ್ತಿದ್ದು ಈ ಮೂಲಕ ಟ್ರಾಫಿಕ್ ನಿಯಮ ಉಲ್ಲಂಘಿಸಿ ದರೆ ಸ್ಥಳದಲ್ಲೇ ಮೊಬೈಲ್ ಮೂಲಕ ಪಡೆದ ದಂಡದ ರಶೀತಿಯನ್ನು ವಾಹನಕ್ಕೆ ಅಂಟಿಸಲಾಗುವುದು, ನಂತರ ದಂಡದ ಮೊತ್ತವನ್ನು ಸ್ಥಳೀಯ ಟ್ರಾಫಿಕ್ ಪೊಲೀಸ್ ಸ್ಟೇಷನ್ ಅಥವಾ ಕರ್ನಾಟಕ ಒನ್ ಕೇಂದ್ರ ಗಳಲ್ಲಿಯೂ ಪಾವತಿ ಮಾಡಬಹುದಾಗಿದೆ.
ಮುಂದಿನ ದಿನಗಳಲ್ಲಿ ಪೋಸ್ಟ್ ಆಫೀಸ್ ನಲ್ಲೂ ಸಹ ದಂಡದ ಮೊತ್ತವನ್ನು ಪಾವತಿ ಮಾಡುವ ಅವಕಾಶ ಕಲ್ಪಿಸುವ ಕುರಿತು ಚಿಂತನೆ ಇದೆ ಎಂದು ಎಸ್ ಪಿ ವಿವರಿಸಿದರು
ಸಂಚಾರ ನಿಯಮ ಉಲ್ಲಂಘಿಸುವ ಸವಾರರು/ ಚಾಲಕರ ವಾಹನ ಮಾಹಿತಿ ಯನ್ನು ಮೊಬೈಲ್ ಫೋನ್ ಮೂಲಕ ವಾಹನ ಸಮೇತ ಚಿತ್ರಿಸಿ ಚಾಲಕ ಅಥವಾ ಸವಾರರಿಗೆ ದಂಡದ ಟ್ರಾಫಿಕ್ ನೋಟಿಸ್ ಕಳಿಸಲಾಗುವುದು, ಇದರಿಂದ ಸಾರ್ವಜನಿ ಕರಿಗೆ ದ೦ಡಪಾವತಿಸಲು ಕೂಲವಾಗಲಿದ್ದು ಸಂಚಾರಿ ವ್ಯವಸ್ಥೆಯಲ್ಲಿ ಶಿಸ್ತನ್ನು ತರುವ ನಿಟ್ಟಿನಲ್ಲಿ ಇದು ಉತ್ತಮ ಪ್ರಯೋಗವಾಗಿದೆ ಎಂದರು.
ರಸ್ತೆ ಅಪಘಾತಗಳ ದರವನ್ನು ಕಡಿಮೆ ಮಾಡುವುದು, ನಕಲಿ ನಂಬರ್ ಪ್ಲೇಟ್ ಹೊಂದಿರುವ ವಾಹನಗಳನ್ನು ಪತ್ತೆ ಹಚ್ಚುವುದು, ಪೋಲಿಸ್ ಇಲಾಖೆಯಲ್ಲಿ ಸಂಚಾರಿ ನಿಯಮಗಳನ್ನು ಜಾರಿ ವ್ಯವಸ್ಥೆಯಲ್ಲಿ ಪಾರದರ್ಶಕ ತರುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದರು.
ಪದೇಪದೇ ಸಂಚಾರ ನಿಯಮಗಳನ್ನು ಉಲ್ಲಂಘಿಸಿದವರನ್ನು ಪತ್ತೆಹಚ್ಚಿ ಅವರಿಗೆ ಸ್ಥಳದಲ್ಲಿ ದಂಡ ವಿಧಿಸುವ ಕಾಲದಲ್ಲಿ ಪೊಲೀಸರು ಮತ್ತು ಸಾರ್ವಜನಿಕರ ನಡುವೆ ವಾದ ವಿವಾದವನ್ನು ತಪ್ಪಿಸುವುದು ಇದರ ಮುಖ್ಯ ಉದ್ದೇಶವಾಗಿದೆ .ಹೆಚ್ಚು ಬಾರಿ ಟ್ರಾಫಿಕ್ ಉಲ್ಲಂಘನೆ ಮಾಡಿದರೆ ವಾಹನವನ್ನು ಜಪ್ತಿ ಮಾಡುವ ಅವಕಾಶವಿದ್ದು ವಾಹನ ಸವಾರರು ಇದಕ್ಕೆ ಅವಕಾಶ ನೀಡಬಾರದು ಎಂದು ಮನವಿ ಮಾಡಿದರು . ಈ ಸಂದರ್ಭದಲ್ಲಿ ಹೆಚ್ಚುವ ಪೊಲೀಸ್ ವರಿಷ್ಠಾಧಿಕಾರಿ ತಮ್ಮಯ್ಯ, ಡಿ ವೈ ಎಸ್ ಪಿ, ಪಿ.ಕೆ ಮುರುಳಿಧರ್, ಸಂಚಾರಿ ಠಾಣೆ ನಿರೀಕ್ಷಕರಾದ ಎಸ್.ಎಂ ವೀಣಾ ಸೇರಿದಂತೆ ಇತರೆ ಅಧಿಕಾರಿಗಳು ಹಾಜರಿದ್ದರು.