ಟ್ರಿಪಲ್ ಜಂಪ್‌ : ಹಾಸನದ ಅವಳಿ ಸಹೋದರರ ಭರ್ಜರಿ ಸಾಧನೆ

0

ಹಾಸನ / ಬೆಂಗಳೂರು : ಬೆಂಗಳೂರಿನಲ್ಲಿ ಕಳೆದ ವರ್ಷ ನಡೆದ ಅಮೆಚೂರ್ ಅಥ್ಲೆಟಿಕ್ ಕೂಟದ ಪುರಷರ ಟ್ರಿಪಲ್ ಜಂಪ್ ಸ್ಪರ್ಧೆ. ಮಂಗಳೂರಿನ ಆಳ್ವಾಸ್ ಕಾಲೇಜಿನಿಂದ ತೆರಳಿದ್ದ ಹಾಸನ ಮೂಲದ H.S.ಪವನ್ ಶೇಖರ್‌ ಬೆಳ್ಳಿ ಪದಕ ವಿಜೇತರಾಗಿದ್ದರು. ಆಳ್ವಾಸ್‌ ಕಾಲೇಜಿನ ಮತ್ತೊಬ್ಬ ವಿದ್ಯಾರ್ಥಿ H.S.ಪಂಕಜ್ ಶೇಖರ್‌ 3 ಸೆಂಟಿಮೀಟರ್ ಅಂತರದಲ್ಲಿ ಪದಕ ಕಳೆದುಕೊಂಡು 4ನೇ ಸ್ಥಾನದದ್ದರು.‌ , ಇವರಿಬ್ಬರು ಬೆಂಗಳೂರು ನಗರದಲ್ಲಿ ನಡೆಯುತ್ತಿರುವ ರಾಜ್ಯ ಜೂನಿಯರ್ &ಯೂಥ್ ಅಥ್ಲೆಟಿಕ್ ಕೂಟದಲ್ಲೂ ಪಾಲ್ಗೊಂಡಿದ್ದು ಮೊನ್ನೆ ಗುರುವಾರ ನಡೆದ 20 ವರ್ಷದೊಳಗಿನವರ ಟ್ರಿಪಲ್ ಜಂಪ್‌ನಲ್ಲಿ ಪವನ್‌ ಚಿನ್ನ ಗೆದ್ದುಕೊಂಡರೆ, ಪಂಕಜ್ ಬೆಳ್ಳಿ ಪದಕ ಗಳಿಸಿ ಸಾಧನೆ ಮಾಡಿದರು . ಒಂದೇ ಸ್ಪರ್ಧೆಯಲ್ಲಿ ಮಿಂಚಿದ ಇವರಿಬ್ಬರೂ ಅವಳಿ ಎಂಬುದು ವಿಶೇಷ ; ಒಂದೇ ನಿಮಿಷ ವ್ಯತ್ಯಾಸದಲ್ಲಿ ಪಂಕಜ್‌ ಅಣ್ಣ, ಪವನ್‌ ತಮ್ಮ ಜನಿಸಿದ್ದು ., ಇವರು

ಹಾಸನ ಜಿಲ್ಲೆ ಹೊಳೆನರಸೀಪುರದವರಾದ ಇವರಿಬ್ಬರೂ ಈಗ ಮೈಸೂರಿನ BGS ಕಾಲೇಜಿನಲ್ಲಿ ಮೊದಲ ವರ್ಷದ Bcom ವಿದ್ಯಾರ್ಥಿಗಳಾಗಿದ್ದರು . ಜನಿಸಿದ ಊರಿನ KNA ಎಜುಕೇಷನ್ ಟ್ರಸ್ಟ್‌ ಶಾಲೆಯಲ್ಲಿ ಒಂದರಿಂದ 10ನೇ ತರಗತಿ ವರೆಗೆ ವಿದ್ಯಾಭ್ಯಾಸ ಮಾಡಿದ ಇವರಿಗೆ ಸಣ್ಣ ವಯಸ್ಸಿನಲ್ಲಿ ಕ್ರೀಡೆಯ ಒಲವು ಅಷ್ಟೇನು ಇರಲಿಲ್ಲವಂತೆ . ಕೊರೊನಾ ಸಂದರ್ಭದಲ್ಲಿ ಸಮಯಾವಕಾಶ ಲಭಿಸಿದ್ದರಿಂದ ಟ್ರಿಪಲ್ ಜಂಪ್ ಅಭ್ಯಾಸ ಮಾಡತೊಡಗಿದ್ದು ಇದೀಗ ಇವರಿಗೆ ವರವಾಗಿದೆ . ಆಗ ಇವರಿಗೆ ಬೆಂಬಲವಾಗಿ ನಿಂತವರು ಪೋಲ್‌ವಾಲ್ಟ್‌ ಪಟು ವಿಭಾ . ಊರಿನಲ್ಲಿ ಕೋಚ್ ಜಯಚಂದ್ರ ಅವರು ಕೂಡ ನೆರವು ನೀಡಿದ್ದು ಸಹಾಯಕ್ಕೆ ಬಂದಿದೆ . ಹೀಗಾಗಿ ಕ್ರೀಡಾ ಕೋಟಾದಡಿ ಆಳ್ವಾಸ್‌ನಲ್ಲಿ ಸಲೀಸಾಗಿ ಪ್ರವೇಶ ಲಭಿಸಿದ್ದು ಸಾಧಿಸಲು ರಹದಾರಿಯಾಯಿತು.,

‘ಅಮೆಚೂರ್ ಕೂಟದಲ್ಲಿ ಪದಕ ಸಿಗದೇ ಇದ್ದುದರಿಂದ ಇಲ್ಲಿ ತಮ್ಮನನ್ನು ಸೋಲಿಸಬೇಕು ಎಂಬ ಛಲದಿಂದ ಬಂದಿದ್ದೆ. ಆದರೆ ಇಲ್ಲೂ ಅವನು ನನಗಿಂತ ಚೆನ್ನಾಗಿಯೇ ಮಾಡಿದ’ ಎಂದು ಹೇಳುತ್ತಿದ್ದಂತೆ ಪವನ್‌ ‘ಇಲ್ಲಿಗೆ ಬರುವಾಗ ತಮ್ಮ ಇನ್ನಷ್ಟು ಅಭ್ಯಾಸ ಮಾಡಿಕೊಂಡು ಬಂದಿದ್ದ’ -ಪಂಕಜ್

ಇವರ ಕುಟುಂಬ ಪರಿಚಯ ಇಂತಿದೆ ;
ಹೊಳೆನರಸೀಪುರದ ಪೇಟೆಬೀದಿ ಎಂಬಲ್ಲಿನ ನಿವಾಸಿ B.N.ಲಕ್ಷ್ಮಿ ಮತ್ತು ಉದ್ಯಮಿ M.N.ಸೋಮಶೇಖರ್ ಅವರ ಪುತ್ರರು ಪಂಕಜ್ & ಪವನ್. ಕಲಿಯುವುದರ ಜೊತೆಯಲ್ಲಿ ಮುಂದಿನ ಜೀವನಕ್ಕೆ ಅಡಿಪಾಯ ಹಾಕುವುದಕ್ಕೆ ಸಿದ್ಧತೆ ನಡೆಸುತ್ತಿದ್ದು. ಪವನ್, CA ಪರೀಕ್ಷೆಗೆ ಸಿದ್ಧ ಆಗುತ್ತಿದ್ದು. ಹೀಗಾಗಿ ಕೋಚ್‌ ಬಳಿಗೆ ಹೋಗಿ ವ್ಯವಸ್ಥಿತವಾಗಿ ಅಭ್ಯಾಸ ಮಾಡಲು ಸಮಯ ಸಾಕಾಗುವುದಿಲ್ಲ ಎಂದರು . ಈ ಕಾರಣದಿಂದ ಪರಸ್ಪರ ಸಹಕಾರ ನೀಡುತ್ತ ಟ್ರಿಪಲ್ ಜಂಪ್‌ ಅಭ್ಯಾಸ ಮಾಡುತ್ತಿರುತ್ತಾರೆ ., ಇಬ್ಬರೂ ಒಂದೇ ಕ್ರೀಡೆಯಲ್ಲಿ ಯಾಕೆ ತೊಡಗಿಸಿಕೊಂಡಿದ್ದೀರಿ ಎಂದರೆ ‘ಅದೇಕೋ ಗೊತ್ತಿಲ್ಲ. ದಿಢೀರ್ ಆಗಿ ಕ್ರೀಡೆಗೆ ಪದಾರ್ಪಣೆ ಮಾಡಿದೆವು. ಇಬ್ಬರೂ ಟ್ರಿಪಲ್ ಜಂಪ್ ಆಯ್ಕೆ ಮಾಡಿಕೊಂಡೆವು’ ಎನ್ನುತ್ತಾರೆ ಈ ಅಪೂರ್ವ ಸಹೋದರರು. , ‘ಮೈಸೂರಿನಲ್ಲಿ ಸುಮನ್ ಟೋನಿ ಅವರು ಫಿಟ್‌ನೆಸ್ ತರಬೇತಿ ನೀಡುತ್ತಿದ್ದು. ಟ್ರಿಪಲ್ ಜಂಪ್‌ಗೆಂದೇ ಕೋಚ್ ಬಳಿಗೆ ಹೋಗುವಷ್ಟು ಸಮಯ ಇದೀಗ ಇಲ್ಲ. ಬೆಳಿಗ್ಗೆ ತರಗತಿ, ಸಂಜೆ CA ತರಬೇತಿಗೆ ಹೋಗಬೇಕು. ಸದ್ಯ ನನಗೆ ಅವನು, ಅವನಿಗೆ ನಾನು ಕೋಚ್‌. ವ್ಯವಸ್ಥಿತವಾಗಿ ಕೋಚಿಂಗ್ ಇಲ್ಲದ ಕಾರಣ ಲ್ಯಾಂಡಿಂಗ್ ತಂತ್ರದಲ್ಲಿ ಸ್ವಲ್ಪ ಹಿನ್ನಡೆಯಾಗುತ್ತಿದೆ. ಇಲ್ಲಿಗೆ ಬರುವ ಮೊದಲು ಅಪ್ರೋಚ್ ಪರಿಶೀಲಿಸಲಿಲ್ಲ. ಹೀಗಾಗಿ 13.89 ಮೀಟರ್ಸ್‌ & 13.43 ಮೀಟರ್ಸ್ ಜಿಗಿಯಲಷ್ಟೇ ಸಾಧ್ಯವಾಗಿದೆ. ಆದರೂ ರಾಷ್ಟ್ರೀಯ ಕೂಟಕ್ಕೆ ಆಯ್ಕೆಯಾಗಿರುವುದು ಖುಷಿ ತಂದಿದೆ. ಇಲ್ಲಿ ಆಗಿರುವ ಲೋಪಗಳನ್ನು ಸರಿಪಡಿಸಿಕೊಂಡು ರಾಷ್ಟ್ರಮಟ್ಟದಲ್ಲಿ ಇನ್ನಷ್ಟು ಸಾಮರ್ಥ್ಯ ತೋರಲು ಪ್ರಯತ್ನಿಸುವೆವು’ ಎಂದು ಇಬ್ಬರೂ ಭರವಸೆಯಿಂದ ತಿಳಿಸಿದರು , ಪಂಕಜ್ ಶೇಖರ್‌ ಪವನ್ ಶೇಖರ್‌ ಟ್ರಿಪಲ್ ಜಂಪ್‌ ಅಥ್ಲೀಟ್ಸ್‌ತಂದೆ ತಾಯಿ ಕ್ರೀಡಾಪಟುಗಳಲ್ಲ. ಆದರೆ ಕ್ರೀಡೆಯಲ್ಲಿ ಆಸಕ್ತಿ ಇದೆ. ಈಗ ಸಾಧನೆ ಮಾಡಲು ತುಂಬ ಬೆಂಬಲ ನೀಡುತ್ತಿದ್ದಾರೆ. ಪದಕ ಗೆದ್ದ ವಿಷಯ ತಿಳಿದು ಬಹಳ ಹರ್ಷಗೊಂಡಿದ್ದಾರೆ.

LEAVE A REPLY

Please enter your comment!
Please enter your name here