ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಜೋ ಬೈಡನ್ ಜಯ ಗಳಿಸಿದ್ದಾರೆ.
ಪೆನ್ಸಿಲ್ವೇನಿಯಾದಲ್ಲಿ ಬೈಡನ್ ಜಯಗಳಿಸುವ ಮೂಲಕ ಒಟ್ಟು 284 ಮತಗಳನ್ನು ಗೆದ್ದಿದ್ದು, ಟ್ರಂಪ್ 214 ಮತಗಳನ್ನು ಮಾತ್ರ ಗೆದ್ದುಕೊಂಡಿದ್ದಾರೆ. ಅಮೆರಿಕದ ಮಾಧ್ಯಮಗಳು ಈ ಸುದ್ದಿಯನ್ನು ಪ್ರಕಟಿಸಿದ್ದು ಅಧಿಕೃತ ಘೋಷಣೆ ಮಾತ್ರ ಬಾಕಿಯಿದೆ.
ಬೈಡನ್ 50.6% ಅಂದರೆ 7,48,47,834 ಮತ ಗಳಿಸಿದರೆ ಡೊನಾಲ್ಡ್ ಟ್ರಂಪ್ 47.7% ಅಂದರೆ 7,05,91,531 ಮತಗಳನ್ನು ಗಳಿಸಿದ್ದಾರೆ. ಅಮೆರಿಕದಲ್ಲಿ ಇನ್ನೂ ಮತ ಎಣಿಕೆ ಪೂರ್ಣಗೊಂಡಿಲ್ಲ.
BREAKING: JOE BIDEN WILL BE PRESIDENT-ELECT, NBC NEWS PROJECTS. https://t.co/gGS2tyKRy9 pic.twitter.com/s17hCZDvBR
— NBC News (@NBCNews) November 7, 2020
2017 ಜನವರಿ 20 ರಿಂದ ಆಮೇರಿಕಾದ ಅಧ್ಯಕ್ಷರಾಗಿದ್ದ ಡೊನಾಲ್ಡ್ ಟ್ರಂಪ್ ಅವರು ತಮ್ಮ ಸ್ಥಾನದಿಂದ ಕೆಳಗಿಳಿಯುವ ಸಮಯ ಬಂದಿದೆ. ಮುಂದಿನ ಆಮೇರಿಕಾದ ಅಧ್ಯಕ್ಷರಾಗಿ ಜೋ ಬಿಡೆನ್ ( Joe Biden)