
ಹಾಸನ : ಮನೆಗೆ ನುಗ್ಗಿ 30 ಗ್ರಾಂ ಚಿನ್ನ ಮತ್ತು 2 ಲಕ್ಷ ರೂ. ನಗದು ದರೋಡೆ ಮಾಡಿ ಕಳ್ಳರು ಪರಾರಿಯಾದ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ, ಮಾಚಬೂವನಹಳ್ಳಿ ಗ್ರಾಮದಲ್ಲಿ ನಡೆದಿದೆ,
ಮಾಚಬೂವನಹಳ್ಳಿ ಗ್ರಾಮದ ಯಶವಂತ ಹಾಗೂ ಪತ್ನಿ ಸ್ಪಂದನ ಎಂಬುವವರಿಗೆ ಸೇರಿದ ತೋಟದ ಮನೆಯಲ್ಲಿ ಈ ಘಟನೆ ನಡೆದಿದೆ.

ಸ್ಪಂದನ ಒಬ್ಬರೇ ಇದ್ದ ವೇಳೆ ಮುಖಕ್ಕೆ ಬಟ್ಟೆಕಟ್ಟಿಕೊಂಡು ಬಂದ ಇಬ್ಬರು ಅಪರಿಚಿತರು ಸ್ಪಂದನ ಅವರ ಬಾಯಿ ಮುಚ್ಚಿ ಕುತ್ತಿಗೆಯಲ್ಲಿದ್ದ 30 ಗ್ರಾಂ ಚಿನ್ನದ ಸರ, ಎರಡು ಲಕ್ಷ ರೂ ನಗದು ದೋಚಿಕೊಂಡು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಹಿರೀಸಾವೆ ಠಾಣೆಯ ಪೊಲೀಸರು ಭೇಟಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.