ಹಾಸನ ನಗರದ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಪ್ರವೇಶಾತಿ ಅವಧಿ ವಿಸ್ತರಣೆ !
ಹಾಸನ,ಅ.20(ಹಾಸನ್_ನ್ಯೂಸ್):- ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್, ಹಾಸನ ಇಲ್ಲಿ 2020-21 ನೇ ಸಾಲಿನ ಡಿಪ್ಲೊಮಾ ಪ್ರವೇಶಾತಿಯ ಪ್ರಥಮ ವರ್ಷಕ್ಕೆ ಆಫಲ್‍ಲೈನ್ ಮೂಲಕ ಪ್ರವೇಶಕ್ಕಾಗಿ ಎಸ್.ಎಸ್.ಎಲ್.ಸಿ. ವಿದ್ಯಾರ್ಹತೆ ಹೊಂದಿರುವ ಮಹಿಳೆಯರಿಗಾಗಿ 3 ವರ್ಷದ ಡಿಪ್ಲೊಮಾ ಇನ್ ಕಮರ್ಷಿಯಲ್ ಪ್ರಾಕ್ಟೀಸ್, ಫ್ಯಾಷನ್ ಡಿಸೈನಿಂಗ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ಸ್ ಇಂಜಿನಿಯರಿಂಗ್, ಲೈಬ್ರರಿ ಆಂಡ್ ಇನ್ಫರ್‍ಮೇಷನ್ ಸೈನ್ಸ್ ಕೋರ್ಸ್‍ಗಳ ಬಾಕಿ ಉಳಿದಿರುವ ಸೀಟುಗಳಿಗೆ ಪ್ರವೇಶಾತಿಯನ್ನು ಸಂಸ್ಥೆಯಲ್ಲಿ ಅ.29 ರವರೆಗೆ ಅವಧಿಯನ್ನು ವಿಸ್ತರಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ಸರ್ಜಿ ಸಲ್ಲಿಸಲು ಸಂಸ್ಥೆಗೆ ನಿಗದಿತ ದಿನಾಂಕದೊಳಗೆ ಬಂದು ಅರ್ಜಿ ಸಲ್ಲಿಸಬಹುದಾಗಿದೆ. ಪ್ರವೇಶ ಬಯಸಿ ಮೊದಲು ಬಂದ ಅಭ್ಯರ್ಥಿಗಳಿಗೆ ಮೊದಲ ಆಧ್ಯತೆ ನೀಡಿ ಪ್ರವೇಶಾತಿ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಪ್ರಾಚಾರ್ಯರಾದ ಡಾ. ಮಹದೇವ ಪ್ರಸಾದ್ ಎಂ.ಎಸ್. ದೂರವಾಣಿ ಸಂಖ್ಯೆ: 08172-262201, 08172-268349ಗೆ ಸಂಪರ್ಕಿಸಬಹುದಾಗಿದೆ
#womenspolitechnichassan #hassan #politechnicadmissions #supportgovtcollege